Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿಟ್ ಅಂಡ್ ರನ್ ಕಾಯ್ದೆ | ಚಳ್ಳಕೆರೆಯಲ್ಲಿ ಲಾರಿ‌‌ ಮಾಲೀಕರು ಹಾಗೂ ಚಾಲಕರ ಸಂಘದಿಂದ ಪ್ರತಿಭಟನೆ

05:45 PM Jan 17, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಬೆಳಗೆರೆ,            ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಜನವರಿ.17 : ಚಳ್ಳಕೆರೆ ತಾಲ್ಲೂಕು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು (2) ಕಾಯ್ದೆ ಅನ್ವಯ 10 ವರ್ಷ ಜೈಲು, 7 ಲಕ್ಷ ದಂಡದ ಕಾನೂನನ್ನು ಹಿಂಪಡೆಯುವ ಬಗ್ಗೆ ತಾಲೂಕಿನ ಲಾರಿ ಮಾಲೀಕರ ಸಂಘದಿಂದ ಹಾಗೂ ವಿವಿಧ ಚಾಲಕರು ತಾಲೂಕು ಕಛೇರಿಗೆ  ದಾವಿಸಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿದರು.

Advertisement

ಇನ್ನೂ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದಿಂದ ನಗರದ ಮಾರುಕಟ್ಟೆಯಿಂದ  ನೆಹರು ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ನಗರದ ತಾಲೂಕು ಕಛೇರಿಗೆ ದಾವಿಸಿ ತಹಶೀಲ್ದಾರ್ ರೇಹಾನ್ ಪಾಷ ಗೆ ಮನವಿ ಸಲ್ಲಿಸಿದರು.

ಲಾರಿ ಮಾಲೀಕರ‌ ಸಂಘದ ಅಧ್ಯಕ್ಷ ಭರಮಣ್ಣ ಮಾತನಾಡಿ, ದೇಶದ  ಗೃಹ ಸಚಿವರಾದ ಅಮಿತ್ ಷಾ ರವರು ಇತ್ತೀಚೆಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು (2) ಕಾಯ್ದೆ ಅನ್ವಯ, 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಕಾನೂನು ಎಲ್ಲಾ ಚಾಲಕರು ಮತ್ತು
ಮಾಲೀಕರಿಗೆ ಜೀವದ ಕಂಠಕವಾಗಿದೆ‌.

ಈ ಹಿಂದೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106(1) ಹಿಟ್
ಅಂಡ್ ರನ್ ಕೇಸ್ ಗೆ 2 ವರ್ಷ ಜೈಲು ಶಿಕ್ಷೆಯನ್ನು ಇದೀಗ ಹೊಸ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್  106(2) ನಲ್ಲಿ ಮುಂದುವರೆಸಿ 10 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ದಂಡವನ್ನು ವಿಧಿಸುತ್ತದೆ ಎಂಬ ಕಾನೂನು. ಇದು ಅತ್ಯಂತ ಅಮಾನವೀಯ ಹಾಗೂ ಚಾಲಕರ ಮೇಲೆ ಶೋಷಣೀಯಕರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಲಕರು ಹಾಗೂ ಮಾಲೀಕರ ಹಿತದೃಷ್ಟಿ
ಮತ್ತು ಮಾನವೀಯತೆಯ ಮೇರೆಗೆ ಈ ಪ್ರಸ್ತುತ ಮಾಡಿರುವ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್
106(1) ಮತ್ತು (2) ಕಾಯ್ದೆ ಅನ್ವಯ, 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಕಾನೂನನ್ನು ಹಿಂಪಡೆಯಬೇಕು ಎಂದು ಚಳ್ಳಕೆರೆ ತಾಲ್ಲೂಕು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ  ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ  ಚಳ್ಳಕೆರೆ ತಾಲ್ಲೂಕು ಲಾರಿ ಮಾಲೀಕರ
ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರು,  ಚಳ್ಳಕೆರೆ ಮಿನಿ ಲಾರಿ
ಮಾಲೀಕರ ಸಂಘದ ಅಧ್ಯಕ್ಷ ದನಂಜಯ್,
ಚಳ್ಳಕೆರೆ ಟ್ಯಾಂಕರ್ ಲಾರಿ  ಮಾಲೀಕರ ಸಂಘದ ಅಧ್ಯಕ್ಷರು, ಹಾಗೂ ನರಸಿಂಹ, ಆನಂದಪ್ಪ, ಮೋಹನ್, ಹನುಮಂತ. ಪ್ರಸನ್ನ ಕುಮಾರ್, ತಿಪ್ಪೇಸ್ವಾಮಿ,  ಅಭಿಷೇಕ್, ಪ್ರಸಾದ್, ದಿನೇಶ್, ತಿಪ್ಪೇಸ್ವಾಮಿ, ಇತರರು ಪಾಲ್ಗೊಂಡಿದ್ದರು .

Advertisement
Tags :
challakerechitradurgaHit and Run Actlorry owners and drivers associationProtestsuddioneಚಳ್ಳಕೆರೆಚಾಲಕರುಪ್ರತಿಭಟನೆಮಾಲೀಕರುಲಾರಿಸಂಘಸುದ್ದಿಒನ್ಹಿಟ್ ಅಂಡ್ ರನ್ ಕಾಯ್ದೆ
Advertisement
Next Article