Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿಟ್​ ಅಂಡ್ ರನ್ ಕಾಯ್ದೆ: ಚಿತ್ರದುರ್ಗದಲ್ಲಿ ಮೂರನೇ ದಿನಕ್ಕೆ ಮುಂದುವರೆದ ಲಾರಿ ಮಾಲೀಕರ ಮುಷ್ಕರ

06:05 PM Jan 19, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.19 : ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಹಿಟ್ ಅಂಡ್ ರನ್ ಪ್ರಕರಣಗಳ ಸೆಕ್ಷನ್ 106/1, 106/2 ನ್ನು ರದ್ದುಪಡಿಸುವಂತೆ ಚಿತ್ರದುರ್ಗ ಗೂಡ್ ಷೆಡ್ ಮಾರ್ಕೆಟ್ ಲಾರಿ ಮಾಲೀಕರ ಸಂಘದಿಂದ ಎ.ಪಿ.ಎಂ.ಸಿ.ಯಲ್ಲಿ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸಲಾಗುತ್ತಿದೆ.

Advertisement

ಹಿಟ್ ಅಂಡ್ ರನ್ ಸೆಕ್ಷನ್ 106/1, 106/2 ರನ್ವಯ ಚಾಲಕರಿಗೆ 5 ರಿಂದ 10 ವರ್ಷ ಜೈಲು ವಾಸ ಮತ್ತು ಏಳು ಲಕ್ಷ ರೂ. ದಂಡ ವಿಧಿಸಲಾಗುವುದು. ಹಾಗಾಗಿ ಹೊಸದಾಗಿ ಜಾರಿಗೆ ತಂದಿರುವ ಸೆಕ್ಷನ್‍ನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕೆಂದು ಒತ್ತಾಯಿಸಿ ಚಿತ್ರದುರ್ಗ ಗೂಡ್ ಷೆಡ್ ಮಾರ್ಕೆಟ್ ಮತ್ತು ಲಾರಿ ಮಾಲೀಕರು ಮುಷ್ಕರ ಕುಳಿತಿದ್ದಾರೆ.

ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಲಾರಿ ಮಾಲೀಕರ ಸಂಘ ಕರೆ ಕೊಟ್ಟಿರುವ ಮುಷ್ಕರದಲ್ಲಿ ಚಿತ್ರದುರ್ಗ ಲಾರಿ ಮಾಲೀಕರ ಸಂಘ, ಜಿಲ್ಲಾ ಸರಕು ಮತ್ತು ಅದಿರು ಲಾರಿ ಚಾಲಕರ ಸಂಘ, ಚಿತ್ರದುರ್ಗ ಕೋಟೆ ನಾಡು ಅಪ್ಪು ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘ, ಜಿಲ್ಲಾ ಮಿನಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಹಿರಿಯೂರು ಲಾರಿ ಮಾಲೀಕರು ಮತ್ತು ಟ್ರಾನ್ಸ್‍ಪೋರ್ಟ್ ಏಜೆಂಟರ ಸಂಘದವರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಚಿತ್ರದುರ್ಗ ಗೂಡ್ ಷೆಡ್ ಮತ್ತು ಮಾರ್ಕೆಟ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಹಮದ್ ಆಲಿ, ಉಪಾಧ್ಯಕ್ಷ ಭೀಮರಾಜ್, ಕಾರ್ಯದರ್ಶಿ ಏಜಾಜ್‍ಸಿಂಗ್, ನಿರ್ದೇಶಕ ಸುಹೇಲ್ ಅಹಮದ್, ವಿಶ್ವನಾಥ್, ಸಲೀಂಖಾನ್, ಸಾಧಿಕ್, ಶಫಿ, ವೆಂಕಟೇಶಪ್ಪ, ಕೇಶವ, ಮುಜ್ಜು ಇನ್ನು ಅನೇಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

Advertisement
Tags :
chitradurgaHit and Run ActLorry owners' strikesuddioneಚಿತ್ರದುರ್ಗಮೂರನೇ ದಿನಲಾರಿ ಮಾಲೀಕರ ಮುಷ್ಕರಸುದ್ದಿಒನ್ಹಿಟ್ ಅಂಡ್ ರನ್ ಕಾಯ್ದೆ
Advertisement
Next Article