For the best experience, open
https://m.suddione.com
on your mobile browser.
Advertisement

ಹಿರಿಯೂರು | ವನಕಲ್ಲು ಮಠದಲ್ಲಿ ಮಾರ್ಚ್ 8 ರಿಂದ ಜಾತ್ರೆ, 17ಕ್ಕೆ ರಥೋತ್ಸವ

05:40 PM Mar 01, 2024 IST | suddionenews
ಹಿರಿಯೂರು   ವನಕಲ್ಲು ಮಠದಲ್ಲಿ ಮಾರ್ಚ್ 8 ರಿಂದ ಜಾತ್ರೆ  17ಕ್ಕೆ ರಥೋತ್ಸವ
Advertisement

Advertisement

ಸುದ್ದಿಒನ್, ಹಿರಿಯೂರು, ಮಾರ್ಚ್.01 :  ಮಾರ್ಚ್ 8 ರಿಂದ ಮಾರ್ಚ್ 17ರವರೆಗೆ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದಲ್ಲಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 17ರಂದು ವನಕಲ್ಲು ಮಲ್ಲೇಶ್ವರನ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದು ಮಠದ ಪೀಠಾಧ್ಯಕ್ಷರಾದ ಡಾ. ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಂತರ ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು ನೆಲಮಂಗಲ ತಾಲ್ಲೂಕಿನ ಡಾಬಸ್ ಪೇಟೆಯ ಹೆಗ್ಗುಂದ ಬಳಿ ಇರುವ ಶ್ರೀಮಠದಲ್ಲಿ
ಮಾರ್ಚ್ 8 ರಂದು ಜಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ ಮಲ್ಲೇಶ್ವರ ದೇವರಿಗೆ ಬೆಳಗಿನ ಜಾವ ರುದ್ರಾಭಿಷೇಕ ಪಂಚಲೋಹದ ಕವಚದರಣೆ, ಹೂವಿನ ಅಲಂಕಾರ ವಿವಿಧ ಧಾನ್ಯಗಳ ಅಲಂಕಾರ ಶಿವರಾತ್ರಿ ಜಾಗರಣೆ ಈಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರಗಲಿವೆ.

Advertisement

ಜಾತ್ರಾ ಮಹೋತ್ಸವ ಅಂಗವಾಗಿ ಮಾ.9 ರಿಂದ 15 ವರೆಗೆ ಯುವಕ, ಯುವತಿಯರಿಗೆ ಸಿದ್ದಯೋಗಾನಂದಶ್ರೀ ಕ್ರಿಕೆಟ್ ಕಪ್ ಹಾಗೂ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಮಾ.16ರಂದು ಬೆಳಿಗ್ಗೆ 11.30 ಕ್ಕೆ ಪ್ರತಿಬೋತ್ಸವ, ಡೊಳ್ಳುಕುಣಿತ, ವೀರಗಾಸೆ, ಕರಡಿವಾದ್ಯ, ಭಜನೆ, ಸಾಂಸ್ಕೃತಿಕ ನಾಟಕೋತ್ಸವ, ಮುದ್ದೇನಹಳ್ಳಿ ಪಾಳ್ಯ ಗ್ರಾಮಸ್ಥರಿಂದ ಬೆಲ್ಲದ ಆರತಿ ಕಾರ್ಯಕ್ರಮ ಸೇರಿದಂತೆ ಸಂಜೆ 7.30ಕ್ಕೆ ಸಂಸ್ಕೃತ ಸಂಶೋಧನ ಉದ್ಘಾಟನಾ ಸಮಾರಂಭ ನಡೆಯಲಿದೆ ‌ ಮಾ.17ರಂದು 10:30ಕ್ಕೆ ವನಕಲ್ಲುಶ್ರೀ ಪ್ರಶಸ್ತಿ, ಜಗಜ್ಯೋತಿ ಪ್ರಶಸ್ತಿ, ವಿಶ್ವ ಜ್ಯೋತಿ ಪ್ರಶಸ್ತಿ, ಬಾಲಗಂಗಾಧರನಾಥ ನಿರ್ಮಲ ಜ್ಯೋತಿ ಪ್ರಶಸ್ತಿ, ಶರಣಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಇದಾದ ಬಳಿಕ ಮಧ್ಯಾನ್ಹ 1.30 ಕ್ಕೆ ವನಕಲ್ಲು ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

ಈ ಜಾತ್ರಾ ಮಹೋತ್ಸವಕ್ಕೆ ವಿವಿಧ ಮಠಾಧೀಶರು, ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಸಚಿವರಾದ ಡಾ. ಜಿ. ಪರಮೇಶ್ವರ್, ಕೆಎನ್. ರಾಜಣ್ಣ, ಡಿ. ಸುಧಾಕರ್, ಶಿವರಾಜ್ ತಂಗಡಗಿ, ಕೆಹೆಚ್ ಮುನಿಯಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ಸೇರಿದಂತೆ ಹಾಲಿ ಹಾಗೂ ಮಾಜಿ ಸಚಿವರು,‌ ಶಾಸಕರು, ಮಾಜಿ ಮುಖ್ಯಮಂತ್ರಿಗಳು,
ಸಾಹಿತಿಗಳು ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಭಾಗದ ಮಠದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಡಾ. ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಶಿವರಂಜಿನಿ ಯಾದವ್, ಚಿತ್ರಜಿತ್ ಯಾದವ್,‌ ಶಿಕ್ಷಣ ಸಂಸ್ಥೆಯ ವೀರಕರಿಯಪ್ಪ, ಪ್ರಭು ಯಾದವ್, ಬಾಲೆನಹಳ್ಳಿ ಹರೀಶ್, ಓಮೇಶ್, ರಂಗಸ್ವಾಮಿ, ಸಂತೋಷ್, ಗೋವಿಂದಪ್ಪ, ಎಂಎಂಎಸ್ ಮುರುಳಿ, ರಂಗಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
Advertisement