ಹಿರಿಯೂರು | ಶಿಕ್ಷಕ ಅಮಾನತು
09:46 AM Dec 25, 2024 IST | suddionenews
ಸುದ್ದಿಒನ್, ಹಿರಿಯೂರು, ಡಿಸೆಂಬರ್. 25 : ತಾಲೂಕಿನ ಬಬ್ಬೂರು ಫಾರಂನ ಸರ್ಕಾರಿ ಶಾಲೆಯ ಶಿಕ್ಷಕ ಬಿ. ರಮೇಶ್ ಅವರನ್ನು ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ. ತಿಪ್ಪೇಸ್ವಾಮಿ ಆದೇಶ ಹೊರಡಿಸಿದ್ದಾರೆ.
Advertisement
ಶಾಲೆಯಲ್ಲಿ 4 ನೇ ತರಗತಿ ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಲ್ಲಿ ತುಳಿದು ಬೆನ್ನಿಗೆ ಬರೆ ಬರುವ ಹಾಗೆ ದೈಹಿಕ ಹಲ್ಲೆ ನಡೆಸಿರುತ್ತಾರೆಂದು ಆರೋಪಿಸಿ ಭಾರತೀಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ದೂರಿನ ಮೇರೆಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Advertisement