Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು ಪೊಲೀಸರಿಂದ ಖತರ್ನಾಕ್ ಕಳ್ಳನ ಬಂಧನ, 1 ಕೆಜಿ ಚಿನ್ನ ಮತ್ತು ನಗದು ವಶ...!

09:07 PM Jul 24, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 24 : ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ರಾಜ್ಯ ಕಳ್ಳನನ್ನು ಹಿರಿಯೂರು ಪೊಲೀಸರು ಬಂಧಿಸಿ 6,90,1000/- ರೂ, ಮೌಲ್ಯದ 01 ಕೆ.ಜಿ 30 ಗ್ರಾಂ ತೂಕದ ಬಂಗಾರದ ಅಭರಣಗಳು ಮತ್ತು

Advertisement

68,000/- ರೂ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ 02 ಮೋಟಾರ್ ಸೈಕಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಬಳ್ಳಾರಿ ಮೂಲದ ಹನುಮಂತ ಬಂಧಿತ ಆರೋಪಿ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಹಿರಿಯೂರು ನಗರದ ಚಳ್ಳಕೆರೆ ರಸ್ತೆಯಲ್ಲಿ ವಾಸವಾಗಿರುವ ಸುಜಾತ ಎಂಬುವವರ ಮನೆಯಲ್ಲಿದ್ದ 1,32,000 ರೂಪಾಯಿ ಮೌಲ್ಯದ 121 ಗ್ರಾಂ ತೂಕದ ಬಂಗಾರದ
ಆಭರಣಗಳು ಮತ್ತು 1,75,000 ರೂಪಾಯಿ ನಗದು ಹಣ ಕಳ್ಳತನವಾಗಿತ್ತು. ಈ ಕುರಿತು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ
ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರವರಾದ ಶ್ರೀಮತಿ ಚೈತ್ರ ಎಸ್. ರವರ ನೇತೃತ್ವದಲ್ಲಿ ಪಿ.ಐ. ರಾಘವೇಂದ್ರ ಕಾಂಡಿಕೆ, ಹೊಸದುರ್ಗ ಠಾಣೆಯ ಪಿ.ಎಸ್.ಐ ಭೀಮನಗೌಡ ಪಾಟೀಲ, ದೇವೇಂದ್ರಪ್ಪ, ರುದ್ರಮುನಿಸ್ವಾಮಿ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ರಾಜಣ್ಣ, ಸುರೇಶನಾಯ್ಕ್, ಜಾಫರ್ ಸಾಧೀಕ್, ನಾಗಣ್ಣ, ಸುದರ್ಶನ್ ಗೌಡ ಹಾಗೂ ಬೆರಳಚ್ಚು ಘಟಕದ ವಿಶ್ವನಾಥ ಪಿ.ಎಸ್.ಐ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ರಾಘವೇಂದ್ರ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡ ಪ್ರಕರಣವನ್ನು ಬೇಧಿಸಿ ಖಚಿತ ಮಾಹಿತಿಯ ಮೇರೆಗೆ  ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆತನ೪ ಬಂಧಿಸುವಲ್ಲಿ ಹಿರಿಯೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ
ಹಾಜರುಪಡಿಸಿದ್ದು, ಆತನು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ಬಂಧಿತ ಆರೋಪಿಯು ಜಿಲ್ಲೆಯ ಹಿರಿಯೂರು ನಗರ ಠಾಣೆಯ 08, ಹಿರಿಯೂರು ಗ್ರಾಮಾಂತರ ಠಾಣೆಯ 05, ಹೊಸದುರ್ಗ ಪೊಲೀಸ್ ಠಾಣೆಯ 02,
ಅಬ್ಬಿನಹೊಳೆ ಠಾಣೆಯ 01,  ಚಿತ್ರದುರ್ಗ ಬಡಾವಣೆ ಠಾಣೆಯ 01 ಪ್ರಕರರಣ ಹಾಗೂ ಬಳ್ಳಾರಿ ಕೌಲ್
ಬಜಾರ್ ಠಾಣೆಯ 01 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವುಗಳಲ್ಲಿ 15 ಮನೆ ಕಳ್ಳತನ ಪ್ರಕರಣಗಳು, 03 ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡದವರ
ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಸೂಕ್ತ ಬಹುಮಾವನ್ನು ಘೋಷಿಸಿರುತ್ತಾರೆ.

Advertisement
Tags :
1 ಕೆಜಿ ಚಿನ್ನarrest thiefbengalurucashchitradurgaHiriyur policeseize 1 kg goldsuddionesuddione newsಖತರ್ನಾಕ್ ಕಳ್ಳಚಿತ್ರದುರ್ಗನಗದು ವಶಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು ಪೊಲೀಸ್
Advertisement
Next Article