For the best experience, open
https://m.suddione.com
on your mobile browser.
Advertisement

ಭದ್ರೆ ನೀರಿಗಾಗಿ ಫೆಬ್ರವರಿ 21ರಂದು ಹಿರಿಯೂರು ಬಂದ್

06:41 PM Feb 12, 2024 IST | suddionenews
ಭದ್ರೆ ನೀರಿಗಾಗಿ ಫೆಬ್ರವರಿ 21ರಂದು ಹಿರಿಯೂರು ಬಂದ್
Advertisement

ಸುದ್ದಿಒನ್, ಹಿರಿಯೂರು, ಫೆಬ್ರವರಿ.12 :  ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನೀರಾವರಿ ಯೋಜನೆ ಅಪ್ಪರ್ ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತ ಮತ್ತು ಜನಪರ ಸಂಘಟನೆಗಳ ವತಿಯಿಂದ ಫೆ.21ರಂದು ಹಿರಿಯೂರು ಬಂದ್ ತೀರ್ಮಾನಿಸಲಾಗಿದೆ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ರೈತಪರ, ದಲಿತಪರ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ ಕೇವಲ 6000ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಆರಂಭಗೊಂಡ ಈ ಕಾಮಗಾರಿ ಹನ್ನೆರಡು ಸಾವಿರ ಕೋಟಿ ವ್ಯಯಿಸಲಾಗಿದೆ.

Advertisement

ಕೇಂದ್ರ ಸರಕಾರ ರೂ.5300ಕೋಟಿ ಅನುದಾನ ನೀಡುವ ಮತ್ತು ರಾಷ್ಟ್ರೀಯ ಯೋಜನೆ ಯನ್ನಾಗಿ ಘೋಷಿಸುವ ಭರವಸೆ ನೀಡಿದ್ದರೂ ಅದು ಕಾರ್ಯಗತವಾಗಿಲ್ಲ. ಈ ಬಗ್ಗೆ ಸರಕಾರಗಳ ಗಮನ ಸೆಳೆಯಲು ಹೋರಾಟದ ಹಾದಿ ಅವಶ್ಯಕವಾಗಿದೆ. ಬರದ ನಾಡಿಗೆ ನೀರಿನ ಬವಣೆ ತೀರಲು ಭದ್ರಾ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಒತ್ತಡ ಹೇರುವುದು ಅನಿವಾರ್ಯವಾಗಿದೆ ಎಂದರು.

ಜಿಲ್ಲೆಯ ಜನರ ಕೂಗು ಸರಕಾರಕ್ಕೆ ತಲುಪಬೇಕು. ಆ ನಿಟ್ಟಿನಲ್ಲಿ ಸರ್ವ ಸಂಘಟನೆಗಳ ವತಿಯಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು, ಉದ್ಯಮಿಗಳು, ವರ್ತಕರು, ಬೀದಿಬದಿ ವ್ಯಾಪರಿಗಳು, ಹೋಟೆಲ್ ಉದ್ಯಮಿಗಳು, ಸರಕಾರಿ ನೌಕರರು, ಕಾರ್ಮಿಕರು, ಜನಪರ, ಕನ್ನಡ, ದಲಿತ ಸಂಘಟನೆ ಸೇರಿದಂತೆ ಸರ್ವಪಕ್ಷದವರು ಬಂದ್‌ಗೆ ಬೆಂಬಲಿಸುವ ಮೂಲಕ ಬವಣೆಯನ್ನು ಸರಕಾರಕ್ಕೆ ಮನದಟ್ಟು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ಒ.ಶಿವಕುಮಾರ್, ದಸ್ತಗಿರಿ ಸಾಬ್, ತಿಪ್ಪೇಸ್ವಾಮಿ, ನಾಗಭೂಷಣ್, ಚೇತನ್, ಎಚ್.ಎನ್.ಮೂರ್ತಪ್ಪ, ದಾದಾಪೀರ್, ರಂಗನಾಥ್, ಡಿಎಸ್‌ಎಸ್ ರಾಜ್ಯ ಕಾರ್ಯದರ್ಶಿ ಜೀವೇಶ್, ಬಿಡಿಎಸ್‌ಎಸ್ ಕಾರ್ಯಾಧ್ಯಕ್ಷ ತಿಮ್ಮರಾಜು, ವಂದೇ ಮಾತರಂ ವೇದಿಕೆೆ ಎಂ.ಎಲ್.ಗಿರಿಧರ್, ಎನ್.ಎಸ್.ಜೋಧ, ಎಚ್.ಕೆ.ದಿವಾಕರ್ ನಾಯಕ, ಮಂಜುನಾಥ್, ಎನ್.ಬಸವರಾಜ್, ವೆಂಕಟೇಶ್, ಪಾಪಣ್ಣ, ರಮೇಶ್, ಮುರುಳಿ, ಧನಂಜಯ್, ಅನ್ಸರ ಅಲಿ, ಪ್ರತಾಪ್, ಗೀರೀಶ್ ಇತರರಿದ್ದರು.

Tags :
Advertisement