ಹಿರಿಯೂರು | ಶ್ರೀ ರಂಗನಾಥ ಕಾಲೇಜಿಗೆ ನೂರಕ್ಕೆ ನೂರರಷ್ಟು ಫಲಿತಾಂಶ
ಸುದ್ದಿಒನ್, ಹಿರಿಯೂರು, ಏಪ್ರಿಲ್.10 : ನಗರದ ಹುಳಿಯಾರು ರಸ್ತೆಯ ಹರಿಶ್ಚಂದ್ರ ಘಾಟ್ ಬಳಿ ಇರುವ ಶ್ರೀ ರಂಗನಾಥ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಜಿಟಿ ಐಶ್ವರ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. ಇದರಿಂದ ಕಾಲೇಜಿಗೆ ನೂರಕ್ಕೆ ನೂರರಷ್ಟು ಫಲಿತಾಂಶ ಲಭಿಸಿದೆ.
ವಿಜ್ಞಾನ ವಿಭಾಗದಲ್ಲಿ ಜಿಟಿ. ಐಶ್ವರ್ಯ 587 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಗುರುಚರಣ್ 577 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 100 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, 51 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದ 31 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಜಿಟಿ. ಐಶ್ವರ್ಯ 587 ಅಂಕ,
ಜೆ ಆಫಿಯಾ, 577 ಅಂಕ,
ದೇವಿಕ ಆರ್ ಎಸ್. 572ಅಂಕ,
ಶೃತಿ ಎಮ್ ಪಿ. 571ಅಂಕ,
ಪವಿತ್ರ ವಿ. 568 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗ:
ಎಂ. ಗುರುಚರಣ್, 577 ಅಂಕ,
ವಿ. ಜಯಂತ್, 575 ಅಂಕ,
ರಿದ್ದಿ ಪಿ ಲುಕ್ಕಡ್ , 572 ಅಂಕ,
ಸಾನಿಯ ಜೆ. 571 ಅಂಕ ಪಡೆದಿದ್ದಾರೆ.
ಕಾಲೇಜಿಗೆ ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಫಲಿತಾಂಶಕ್ಕೆ ಶ್ರಮಿಸಿದ ಕಾಲೇಜಿನ ಸಿಬ್ಬಂದಿ ವರ್ಗಕ್ಕೆ ಕಾಲೇಜಿನ ಕಾರ್ಯದರ್ಶಿ ಶ್ರೀ ವೀರಕರಿಯಪ್ಪ ಮತ್ತು ಪ್ರಾಂಶುಪಾಲ ರಘುನಾಥ್ ಗೌಡ ಶುಭ ಹಾರೈಸಿದ್ದಾರೆ.