For the best experience, open
https://m.suddione.com
on your mobile browser.
Advertisement

ನಾಳೆ ಹಿಂದೂ ಮಹಾಗಣಪತಿ ಪುರಪ್ರವೇಶ : ಸಿದ್ದತೆ ಹೇಗಿದೆ ಗೊತ್ತಾ ? ಇಲ್ಲಿದೆ ಸಂಪೂರ್ಣ ಮಾಹಿತಿ...!

03:15 PM Sep 03, 2024 IST | suddionenews
ನಾಳೆ ಹಿಂದೂ ಮಹಾಗಣಪತಿ ಪುರಪ್ರವೇಶ   ಸಿದ್ದತೆ ಹೇಗಿದೆ ಗೊತ್ತಾ   ಇಲ್ಲಿದೆ ಸಂಪೂರ್ಣ ಮಾಹಿತಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 03 : ವಿಶ್ವಹಿಂದೂ ಪರಿಷತ್-ಬಜರಂಗದಳದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನೆಯಾಗಲಿದೆ ಎಂದು ದಕ್ಷಿಣ ಪ್ರಾಂತ ಬಜರಂಗದಳದ ಸಂಚಾಲಕ ಪ್ರಬಂಜನ್ ತಿಳಿಸಿದರು.

Advertisement

ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ವರ್ಣರಂಜಿತ ಗಣಪತಿ ಪ್ರತಿಷ್ಠಾಪನಾ ಪೆಂಡಾಲ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಶಾವತಾರ ಮಾದರಿಯಲ್ಲಿ ಪೆಂಡಾಲ್ ಕೆಲಸ ಆರಂಭಗೊಂಡಿದ್ದು, ಬುಧವಾರ ಗಣಪತಿ ಪುರ ಪ್ರವೇಶ ಮಾಡಲಿದೆ. ಹಿಂದೂ ಮಹಾಗಣಪತಿ ಎಂದರೆ ದೇಶಭಕ್ತಿಯನ್ನು ಹೆಚ್ಚಿಸುವುದು ಮಹೋತ್ಸವದ ಉದ್ದೇಶ. ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ವಿವಿಧ ಕಲಾ ತಂಡ ವಾದ್ಯಗೋಷ್ಠಿಗಳೊಂದಿಗೆ ಹಿಂದೂ ಮಹಾಗಣಪತಿಯನ್ನು ಮೆರವಣಿಗೆ ಮೂಲಕ ಪೆಂಡಾಲ್‍ಗೆ ತರಲಾಗುವುದು ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ ಎಲ್ಲಿಯೇ ಪ್ರತಿಷ್ಠಾಪಿಸುವ ಗಣಪತಿಯಲ್ಲಿ ರಾಷ್ಟ್ರೀಯತೆ, ದೇಶಭಕ್ತಿ, ಸಂಸ್ಕೃತಿಯನ್ನು ಬಿಂಬಿಸುವುದು ಕಂಡು ಬಂದಲ್ಲಿ ಅಂತಹ 25 ಗಣಪತಿಗಳಿಗೆ ಬಹುಮಾನ ನೀಡಲಾಗುವುದು. ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಬಜರಂಗದಳದ ನೀರಜ್ ತೊಗೇರಿಯಾ ಉದ್ಗಾಟಿಸುವರು ಎಂದು ನುಡಿದರು.

ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸಾಯಿ ಮೊಬೈಲ್ ಗಿಫ್ಟ್ ಗ್ಯಾಲರಿಯ ಬಿ.ನಯನ್ ಮಾತನಾಡಿ 21 ದಿನಗಳ ಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 26 ರಂದು ಕನಕ ವೃತ್ತದಿಂದ ಹೊರಡುವ ಬೈಕ್ ರ್ಯಾಲಿ ನಗರದೆಲ್ಲೆಡೆ ಸಂಚರಿಸಲಿದ್ದು, 28 ರಂದು ವಿಸರ್ಜಿಸಲಾಗುವುದೆಂದರು.

ಉತ್ಸವ ಸಮಿತಿಯ ಮಾರ್ಗದರ್ಶಕರು ಹಾಗೂ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರಿನಾಥ್ ಮಾತನಾಡಿ ಗರುಡಾರೂಢ ಪ್ರಭಾವಳಿ ಪೀಠ ಸೇರಿ ಈ ಬಾರಿಯ ಗಣಪತಿ 17 ಅಡಿ ಎತ್ತರದಲ್ಲಿದೆ. ಐದು ಎಲ್.ಇ.ಡಿ. ವ್ಯವಸ್ಥೆಯಿರುತ್ತದೆ. ಪ್ರತಿನಿತ್ಯ ಬೆಳಿಗ್ಗೆ 11-45 ರಿಂದ 12-15 ರವರೆಗೆ ಸಂಜೆ 7-45 ರಿಂದ 8-15 ರವರೆಗೆ ಹದಿಮೂರಕ್ಕೂ ಹೆಚ್ಚು ರೀತಿಯ ಮಹಾ ಮಂಗಳಾರತಿ ನಡೆಯಲಿದೆ. ಹಿಂದೂ ಮಹಾ ಗಣಪತಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಸಮಸ್ತ ಭಕ್ತರು ಹಾಗೂ ಸಾರ್ವಜನಿಕರು, ದಾನಿಗಳ ಸಹಕಾರವಿದೆ ಎಂದರು.

ಕಾರ್ಕಳ ಸಾಗರದವರು ಪೆಂಡಾಲ್ ನಿರ್ಮಿಸುತ್ತಿದ್ದು, ಅಂದಾಜು ಹದಿನಾರರಿಂದ ಹದಿನೇಳು ಲಕ್ಷ ರೂ.ಗಳ ವೆಚ್ಚವಾಗಲಿದೆ. ಎಲ್ಲವನ್ನು ಪಾರದರ್ಶಕವಾಗಿ ನಿಭಾಯಿಸಲಾಗುತ್ತಿದೆ ಎಂದು ತಿಳಿಸಿದರು.

ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ಸ್‍ನ ಶರಣ್, ಬಜರಂಗದಳದ ಜಿಲ್ಲಾ ಸಂಯೋಜಕ ಸಂದೀಪ್, ವಿಶ್ವಹಿಂದೂ ಪರಿಷತ್ ನಗರಾಧ್ಯಕ್ಷ ಈ.ಅಶೋಕ್, ಉಪಾಧ್ಯಕ್ಷ ಜಿ.ಎಸ್.ರಂಗಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Tags :
Advertisement