Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿಂದೂ ಮಹಾ ಗಣಪತಿ | ಸೆಪ್ಟೆಂಬರ್ 26 ರಂದು ಬೈಕ್ ರ‌್ಯಾಲಿ, 28 ರಂದು ಶೋಭಾಯಾತ್ರೆ : ನಯನ್ ಮಾಹಿತಿ

04:23 PM Sep 25, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 25 :
ಹಿಂದೂ ಮಹಾ ಗಣಪತಿಯ ಅಂಗವಾಗಿ ಸೆಪ್ಟೆಂಬರ್ 26 ರಂದು ಬೈಕ್ ರ‌್ಯಾಲಿ ಹಾಗೂ ಸೆಪ್ಟೆಂಬರ್ 28 ರಂದು ಶೋಭಾಯಾತ್ರೆಯನ್ನು ನಡೆಸಲಾಗುವುದೆಂದು 2024ರ ಹಿಂದೂ ಮಹಾ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ನಯನ ತಿಳಿಸಿದರು.

ನಗರದ ಹಿಂದೂ ಮಹಾ ಗಣಪತಿ ಸೇವಾ ಸಮಿತಿವತಿಯಿಂದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆ. 7 ರಿಂದ ಸೆ. 27ರವರೆಗೆ ಗಣಪತಿಗೆ ಪ್ರತಿ ದಿನ ಪೂಜೆಗಳನ್ನು ಮಾಡುವುದರ ಮೂಲಕ ಸಂಜೆ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗಣಪತಿ ಪುರಪ್ರವೇಶದಿಂದ ಹಿಡಿದು ಶೋಭಾಯಾತ್ರೆಯವರೆಗೂ ಎಲ್ಲರು ಸಹಾ ಸಹಕಾರವನ್ನು ನೀಡಿದ್ದಾರೆ. ಪ್ರತಿ ದಿನ ಸಾವಿರಾರು ಭಕ್ತಾಧಿಗಳು ಆಗಮಿಸಿ ಹಿಂದೂ ಮಹಾ ಗಣಪತಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ. ಸೆ. 23 ರಂದು ನಗರದ ವಿವಿಧ ದೇವತೆಗಳು ಆಗಮಿಸುವುದರ ಮೂಲಕ ವಿಶೇಷವಾದ ಪೂಜೆಯನ್ನು ಮಾಡಲಾಗಿತ್ತು ಇದ್ದಲ್ಲದೆ ಸೆ. 24 ರಂದು ಗಣಪತಿ ಹೋಮ ನಡೆಸಲಾಯಿತು ಎಂದರು.

Advertisement

ಸೆ. 26ರಂದು ನಗರದ ಕನಕ ವೃತ್ತದಿಂದ ಬೈಕ್ ರ್ಯಾಲಿಯನ್ನು ನಡೆಸಲಾಗುವುದು ಇದರಲ್ಲಿ ಸುಮಾರು 500 ರಿಂದ 700 ಜನ ಸೇರುವ ನೀರೀಕ್ಷೆ ಇದೆ. ಬೈಕ್ ರ್ಯಾಲಿಯನ್ನು ವಿಶ್ವ ಹಿಂದೂ ಪರಿಷತ್‍ನ ಜಗನ್ನಾಥ ಶಾಸ್ತ್ರಿ ರವರು ಉದ್ಘಾಟನೆ ಮಾಡಲಿದ್ದು, ಇದ್ದಲ್ಲದೆ ವಿವಿಧ ಮಠಾಧೀಶರು ಮುಖಂಡರು ಭಾಗವಹಿಸಲಿದ್ದಾರೆ. ಕನಕ ವೃತ್ತದಿಂದ ಪ್ರಾರಂಭವಾಗುವ ಬೈಕ್ ರ್ಯಾಲಿ ನಗರದ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತಿಮವಾಗಲಿದೆ. ಇದೇ ರೀತಿ ಸೆ. 28 ರಂದು ಶೋಭಾಯಾತ್ರೆಯೂ ಸಹಾ ನಡೆಯಲಿದ್ದು, ವಿವಿಧ ರೀತಿಯ ಜಾನಪದ ಕಲಾತಂಡಗಳು ಭಾಗವಹಿಸಲಿದ್ದು ಅಂದು ಸುಮಾರು 5 ರಿಂದ 6 ಲಕ್ಷ ಭಕ್ತಾಧಿಗಳು ಸೇರುವ ನಿರೀಕ್ಷೆ ಇದೆ ಎಂದರು.

ಹಿಂದೂ ಮಹಾ ಗಣಪತಿ ಭೇಟಿ ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚಿತ್ರದುರ್ಗದ ವಿವಿಧ ವೃತ್ತಗಳಲ್ಲಿ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ. ಚಿತ್ರದುರ್ಗ ನಗರವನ್ನು ಕೇಸರಿಮಯವಾಗಿದೆ. ಶೋಭಾಯಾತ್ರೆ ದಿನದಂದು ಗಣಪತಿಯ ಪೂಜಾ ಸಮಯದಲ್ಲಿ ಇರುವ ಜಗನ್ನಾಥ ಪುರಿ ಮಾದರಿ, ಧ್ವಜ, ಲಡ್ಡು, ನೋಟಿನ ಹಾರ ಮೂರು ದೊಡ್ಡದಾದ ಹಾರಗಳನ್ನು ಬಹಿರಂಗವಾಗಿ ಹರಾಜು ಹಾಕಲಾಗುವುದು. ಈ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಹೊರಗಿನಿಂದ ಅಲ್ಲದೆ ಸ್ಥಳಿಯರಿಗೂ ಸಹಾ ಅವಕಾಶವನ್ನು ನೀಡಲಾಗಿದೆ. ಚಂಡೆ, ಟ್ರಾಷ್ಯೂ, ತಂಡಗಳು ಬಾಗವಹಿಸಲಿದೆ ಎಂದು ತಿಳಿಸಿದರು.

ಶೋಭಾಯಾತ್ರೆಯಲ್ಲಿ ಯಾವುದೇ ರೀತಿಯ ಆತಂಕ ಇಲ್ಲದೆ ಶಾಂತಿ ಸಮಾಧಾನದಿಂದ ನಡೆಯಲಿದೆ ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ. ಸುರಕ್ಷೆಗಾಗಿ ರಕ್ಷಣಾ ಇಲಾಖೆಯೂ ಸಹಾ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ನುಡಿದರು.

ಗೋಷ್ಟಿಯಲ್ಲಿ ವಿಎಚ್.ಪಿ.ಯ ಜಿಲ್ಲಾಧ್ಯಕ್ಷರಾದ ಷಡಾಕ್ಷರಪ್ಪ, ಬದರಿನಾಥ್, ಪ್ರಭಂಜನ್, ಉಮೇಶ್ ಕಾರಜೋಳ, ಶರಣ ಕುಮಾರ್, ವಿಶ್ವನಾಥಯ್ಯ, ಚೇತನಬಾಬು, ಭಾನುಮೂರ್ತಿ, ಕೇಶವ್, ಚನ್ನಕೇಶವ್ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
bengaluruBike rallychitradurgaHindu Maha GanapatiShobhayatrasuddionesuddione newsಚಿತ್ರದುರ್ಗನಯನ್ಬೆಂಗಳೂರುಬೈಕ್ ರ್ಯಾಲಿಶೋಭಾಯಾತ್ರೆಸುದ್ದಿಒನ್ಸುದ್ದಿಒನ್ ನ್ಯೂಸ್ಹಿಂದೂ ಮಹಾ ಗಣಪತಿ
Advertisement
Next Article