ಚಿತ್ರದುರ್ಗ, ಶಿವಮೊಗ್ಗ ಸೇರಿ 10 ಜಿಲ್ಲೆಗಳಿಗೆ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ..!
ಬೆಂಗಳೂರು: ಇಂದು ಗೌರಿ ಹಬ್ಬ.. ನಾಳೆ ಗಣೇಶನ ಹಬ್ಬ. ಊರಲ್ಲೆಲ್ಲಾ ಪೆಂಡಾಲ್ ಹಾಕಿ ಗಣೇಶನನ್ನು ಕೂರಿಸಿ, ಜೋರಾಗಿ ಹಬ್ಬ ಮಾಡಲಿದ್ದಾರೆ.ಆದರೆ ಗಣೇಶನ ಆಹ್ವಾನದಂದು ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಹವಮಾನ ಇಲಾಖೆ ರಾಜ್ಯದ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚನೆ ನೀಡಿದೆ.
ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ರಾಯಚೂರು, ಬೆಳಗಾವಿ, ಯಾದಗಿರಿ ಜಿಲ್ಲೆಯಲ್ಲಿ ಜೋರು ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಜೊತೆಗೆ ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಿದ್ದಾರೆ. ನಾಳೆ ಗಣೇಶನ ಹಬ್ಬವನ್ನು ನಾಡಿನೆಲ್ಲೆಡೆ ಜೋರಾಗಿ ಆಚರಣೆ ಮಾಡಲಾಗುತ್ತದೆ. ಹೀಗಿರುವಾಗ ಮಾರುಕಟ್ಟೆಗಳಲ್ಲಿ, ಗಣೇಶನ ವ್ಯಾಪಾರದಲ್ಲಿ ಜನ ಸಿಕ್ಕಾಪಟ್ಟೆ ಬ್ಯುಸಿಯಾಗಲಿದ್ದಾರೆ. ಹೀಗಿರುವಾವ ಮಳೆ ಅಡ್ಡಿಯಾದರೆ ಹಬ್ಬದ ಜೋಶ್ ಕಡಿಮೆಯಾಗುವ ಸಾಧ್ಯತೆಯೂ ಇದೆ.
ಜಿಲ್ಲೆಗಳಿಗೆ ಭಾನುವಾರವೂ ಭಾರೀ ಮಳೆಯಾಗಲಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯೊಂದಿಗೆ ನಿರಂತರವಾಗಿ ಗಾಳಿ ಬೀಸಲಿದ್ದು, ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿಮೀ ಇರಲಿದೆ. ನಿನ್ನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಭಾರೀ ಗಾಳಿಮಳೆಯಾಗಿತ್ತು. ಬಂಗಾಳ ಕೊಲ್ಲಿ, ಪಶ್ಚಿಮ ಬಂಗಾಳ, ಒಡಿಶಾ, ಬಾಂಗ್ಲಾದೇಶದ ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳುತ್ತಿದೆ. ಇದರಿಂದ ಮಳೆ ಬರಲಿದೆ. ಆದರೆ ಕರ್ನಾಟಕಕ್ಕೆ ತೊಂದರೆ ಏನು ಇಲ್ಲ. ಮಳೆಯಿಂದಾಗಿ ಹಬ್ಬದ ವಾತಾವರಣ ಕುಂದದಿರಲಿ ಎಂದೇ ಗಣಪತಿಯ ಭಕ್ತರು ಬೇಡಿಕೊಳ್ಳುತ್ತಿದ್ದಾರೆ.