For the best experience, open
https://m.suddione.com
on your mobile browser.
Advertisement

ಆರೋಗ್ಯವೇ ಒಂದು ಆಸ್ತಿ, ಅದನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ : ಡಾ.ಜಿ.ಪ್ರಶಾಂತ್

08:58 PM Mar 10, 2024 IST | suddionenews
ಆರೋಗ್ಯವೇ ಒಂದು ಆಸ್ತಿ  ಅದನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ   ಡಾ ಜಿ ಪ್ರಶಾಂತ್
Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.10 : ಈ ಆಧುನಿಕ ಪೀಳಿಗೆಯಲ್ಲಿ ನಮ್ಮ ಆರೋಗ್ಯವೇ ಒಂದು ಆಸ್ತಿ, ಇದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.  ಆರು ತಿಂಗಳಿಗೊಮ್ಮೆ ವೈದ್ಯರ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಡಾ.  ಪ್ರಶಾಂತ್ ಜಿ ಹೇಳಿದರು.

Advertisement
Advertisement

ನಗರದ ಪಾರ್ಶ್ವ ಭವನದಲ್ಲಿ ಶ್ರೀ ಗೋಡಿ ಪಾರ್ಶ್ವನಾಥ್ ಜೈನ ಶ್ವೇತಾಂಬರ ಮೂರ್ತಿ ಪೂಜಕ್ ಸಂಘ (ರಿ.) ಹಾಗೂ ಭಾರತೀಯ ಜೈನ್ ಸಂಘಟನಾ, ಚಿತ್ರದುರ್ಗ ಡಯಾಬಿಟಿಕ್ ಸೆಂಟರ್, ವಾಸವಿ ಲ್ಯಾಬ್, ಹಾಗೂ ಇಂಡಿಯಾನಾ ಹಾರ್ಟ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ಮೆಗಾ ಹೆಲ್ತ್ ಚೆಕಪ್ ಕ್ಯಾಂಪ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಪ್ರತಿನಿತ್ಯ ಜೀವನದಲ್ಲಿ ಧ್ಯಾನ, ವ್ಯಾಯಾಮ, ಉತ್ತಮ ಆಹಾರ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಡಾ. ಕಾರ್ತಿಕ್ ಆರ್.ಎಸ್. ತಿಳಿಸಿದರು.

Advertisement
Advertisement

ಡಾ.ನಾರಾಯಣ ಮೂರ್ತಿ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಸರಿಸುಮಾರು 200 ಕ್ಕೂ ಹೆಚ್ಚು ಜನರಿಗೆ ವೈದ್ಯರ ತಪಾಸಣೆ, ವಿವಿಧ ರಕ್ತ ತಪಾಸಣೆ, ಬಿಪಿ-ಶುಗರ್ ತಪಾಸಣೆ, ಹೃದಯ ತಪಾಸಣೆ, ಇಕೋ ಹಾಗೂ ಇಸಿಜಿ ತಪಾಸಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ.  ಶೀತಲ್ ಪ್ರಶಾಂತ್ ಸೇರಿದಂತೆ ಹಲವು ವೈದ್ಯಕೀಯ ಸಿಬ್ಬಂದಿ ವರ್ಗ ಮತ್ತು ಸಂಘಟನಾ ಅಧ್ಯಕ್ಷರಾದ ವಿಕ್ರಾಂತ್ ಜೈನ್, ಯೋಜನಾ ಮುಖ್ಯಸ್ಥರು ವಿಪುಲ್ ಜೈನ್ ಹಾಗೂ ಆಶಿಕ್ ಜೈನ್, ಕಾರ್ಯದರ್ಶಿ ಉಪಸ್ಥಿತರಿದ್ದರು.

Advertisement
Tags :
Advertisement