Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಾಹಿತ್ಯ ಪರಂಪರೆಯಲ್ಲಿ ಗುರುನಾಥ್‍ ಮೇರು ವ್ಯಕ್ತಿತ್ವದವರು :   ಡಾ.ಎನ್.ಎಸ್.ಮಹಾಂತೇಶ್

06:13 PM Feb 12, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.12 : ಡಾ.ರಾಜ್‍ಕುಮಾರ್ ತಮ್ಮಲ್ಲಿರುವ ಅಗಾಧವಾದ ಕಲೆಯ ಮೂಲಕ ಮೇರು ನಟ ಎನಿಸಿಕೊಂಡು ಕನ್ನಡದ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಇಂದಿಗೂ ಉಳಿದಿದ್ದಾರೆಂದು ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಾಂತೇಶ್ ತಿಳಿಸಿದರು.

Advertisement

ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್, ಸಮತಾ ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಎಸ್.ಆರ್.ಗುರುನಾಥ್‍ರವರ ಸಂಶೋಧನಾ ಸಾಹಿತ್ಯ ಪರಿಚಯ, ಪರಿಷತ್ ಶಾಖೆಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಚಲನಚಿತ್ರ ಮೇರು ನಟಿ ಲೀಲಾವತಿರವರ ಸವಿನೆನಪು ರಾಜ್ಯ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮ  ಸನ್ಮಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ಸಾಹಿತ್ಯ ಪರಂಪರೆಯಲ್ಲಿ ಗುರುನಾಥ್‍ರವರದು ಮೇರು ವ್ಯಕ್ತಿತ್ವ. ಅವರ ಸಾಹಿತ್ಯ  ಓದಿದವರಿಗೆ ಮಾತ್ರ ಬರವಣಿಗೆ ಎಷ್ಟು ಸೂಕ್ಷ್ಮವಾಗಿತ್ತು ಎನ್ನುವುದು ಗೊತ್ತಾಗುತ್ತದೆ. ದಲಿತ, ಅಸ್ಪøಶ್ಯ ಸಮಾಜದಿಂದ ಬಂದ ಎಸ್.ಆರ್.ಗುರುನಾಥ್ ಜೀವನದಲ್ಲಿ ಎಲ್ಲವನ್ನು ಮೆಟ್ಟಿ ನಿಂತು ಬರವಣಿಗೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದರು. ಸುಮಾರು ಹದಿನೇಳು ಕೃತಿಗಳನ್ನು ರಚಿಸಿರುವ ಅವರು ಐವತ್ತು ವರ್ಷಗಳಿಂದಲೂ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದ್ದಾರೆಂದು ಗುಣಗಾನ ಮಾಡಿದರು.

ಕಥೆ, ಕಾದಂಬರಿ, ಲೇಖನ, ಕವನ, ಸಂಶೋಧನಾ ಸಾಹಿತ್ಯ ಅವರದು. ಸರಳ ಸಾತ್ವಿಕ ವ್ಯಕ್ತಿವುಳ್ಳವರಾಗಿದ್ದ ಎಸ್.ಆರ್.ಗುರುನಾಥ್‍ರವರಲ್ಲಿ ಇನ್ನು ಹೆಚ್ಚಿನ ವಿಚಾರ ತಿಳಿದುಕೊಳ್ಳಬೇಕೆನ್ನುವ ಹಂಬಲವಿತ್ತು. ಕಿಚ್ಚು, ಹೋರಾಟ, ಪ್ರತಿಭಟನೆ ಎಲ್ಲವನ್ನು ಬರವಣಿಗೆ ಮೂಲಕ ಹೊರ ಹಾಕಿದವರು ಎಂದು ಸ್ಮರಿಸಿದರು.

ಕಿರುತೆರೆ ನಟಿ ಶ್ರೀಮತಿ ಇಂದ್ರಸುಧಾ ಮಾತನಾಡಿ ಕಲಾವಿದರ ಬದುಕು ನಿಜವಾಗಿಯೂ ಸಂಕಷ್ಟದಲ್ಲಿದೆ. ಸರ್ಕಾರ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಜೊತೆಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಕಲಾವಿದರು ಬದುಕುಳಿಯಲು ಸಾಧ್ಯ. ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ಕಲೆಯ ಉಳಿವಿಗಾಗಿ ಹಿಂದಿನಿಂದಲೂ ಶ್ರಮಿಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಐ.ಎ.ಎಸ್. ಕೆ.ಎ.ಎಸ್. ತರಬೇತಿದಾರರು ರಾಷ್ಟ್ರೀಯ ವಿಶ್ವಕರ್ಮ ವಂಶಿಸೇನೆಯ ಜಿಲ್ಲಾಧ್ಯಕ್ಷೆ ಪಿ.ಜೆ.ಅನಿತಾಲಕ್ಷ್ಮಿ ಆಚಾರ್ಯ ಮಾತನಾಡುತ್ತ ನಟಿ ಲೀಲಾವತಿ ಸವಿ ನೆನಪು ಕಾರ್ಯಕ್ರಮದ ಮೂಲಕ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ಹೊಸ ಹೆಜ್ಜೆ ಇಡುತ್ತಿದೆ. ಡಾ.ರಾಜ್‍ಕುಮಾರ್ ಕಲೆಯ ಗ್ರಂಥಾಲಯವಿದ್ದಂತೆ. ಅವರ ಪುತ್ರ ಪುನಿತ್‍ರಾಜ್‍ಕುಮಾರ್ ಕೂಡ ಚಿಕ್ಕವಯಸ್ಸಿಗೆ ಅಪಾರ ಅಭಿಮಾನಿಗಳ ಮನಗೆದ್ದು ಎಲ್ಲರನ್ನು ಬಿಟ್ಟು ಅಗಲಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕಲಾವಿದರ ಜೀವನ ಕಷ್ಟದಲ್ಲಿದೆ. ಸರ್ಕಾರ ಕಲೆಯನ್ನು ಉಳಿಸಿ ಬೆಳೆಸಬೇಕು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸರ್ಕಾರ ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದಕ್ಕೆ ಅರವತ್ತು ವರ್ಷ ವಯಸ್ಸಿನ ಮಾನದಂಡ ವಿಧಿಸಿರುವುದು ಸರಿಯಲ್ಲ. ವಯಸ್ಸಿಗೆ ಬದಲಾಗಿದೆ ಕಲೆ, ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದರು.

ಕಲಾವಿದರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಧನ ಸಹಾಯ ನೀಡಬೇಕು. ಬೆಳ್ಳಿ ತೆರೆಯ ನಟ-ನಟಿಯರು ಮಾತ್ರ ಬೇಗ ಬೆಳಕಿಗೆ ಬರುತ್ತಾರೆ. ಗ್ರಾಮೀಣ ಭಾಗದ ಸೋಭಾನೆ, ಜಾನಪದ ಕಲಾವಿದರನ್ನು ಯಾರು ಗುರುತಿಸುವುದಿಲ್ಲ. ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರವರನ್ನು ಉಳಿಸಬೇಕಿದೆ ಎಂದು ಹೇಳಿದರು.

ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ರಾಜ್ಯಾಧ್ಯಕ್ಷ ಕೆ.ಪರಶುರಾಮ್ ಗೊರಪ್ಪರ್ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಡೀನ್ ಡಾ.ಹೆಚ್.ಶಿವಣ್ಣ, ಸಮತಾ ಸಾಹಿತ್ಯ ವೇದಿಕೆ ಅಧ್ಯಕ್ಷ ಓ.ವೆಂಕಟೇಶ್‍ನಾಯ್ಕ, ಆರ್.ತಿಪ್ಪೇಸ್ವಾಮಿ, ಹೆಚ್.ಸಿ.ದಿವುಶಂಕರ್, ಶ್ರೀಮತಿ ಜೆ.ಆಶಾ, ಶ್ರೀಮತಿ ಸೌಭಾಗ್ಯ ಮುಸ್ಟುಗೇರಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Advertisement
Tags :
chitradurgaDr. N.S. MahanteshGurunathheritageLiteraryPersonalitysuddionesuddione newsಗುರುನಾಥ್‍ ಮೇರು ವ್ಯಕ್ತಿತ್ವಚಿತ್ರದುರ್ಗಡಾ.ಎನ್.ಎಸ್.ಮಹಾಂತೇಶ್ಸಾಹಿತ್ಯ ಪರಂಪರೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article