For the best experience, open
https://m.suddione.com
on your mobile browser.
Advertisement

ತಟಸ್ಥವಾಗಿರುವ ಸಹಕಾರ ಸಂಸ್ಥೆಗಳನ್ನು ಕ್ರಿಯಾಶೀಲವಾಗಿಸಲು ಬೇಕಾದ ಮಾರ್ಗದರ್ಶನ ನೀಡಲು ಸಂಯುಕ್ತ ಸಹಕಾರಿ ಸಿದ್ದ : ಜಿ. ನಂಜನಗೌಡ

06:25 PM Aug 08, 2024 IST | suddionenews
ತಟಸ್ಥವಾಗಿರುವ ಸಹಕಾರ ಸಂಸ್ಥೆಗಳನ್ನು ಕ್ರಿಯಾಶೀಲವಾಗಿಸಲು ಬೇಕಾದ ಮಾರ್ಗದರ್ಶನ ನೀಡಲು ಸಂಯುಕ್ತ ಸಹಕಾರಿ ಸಿದ್ದ   ಜಿ  ನಂಜನಗೌಡ
Advertisement

Advertisement

ಚಿತ್ರದುರ್ಗ, ಆ. 07 :  ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ 101 ನೊಂದಾಯಿತ ಸೌಹಾರ್ದ ಸಹಕಾರ ಸಂಘಗಳಿವೆ.  ಜಿಲ್ಲೆಯಲ್ಲಿ ನಾಲ್ಕು ಸೌಹಾರ್ದ ಸಹಕಾರ  ಸಂಘಗಳು ಮಾತ್ರ ನಷ್ಟದಲ್ಲಿವೆ.  ತಟಸ್ಥವಾಗಿರುವ ಸಹಕಾರ ಸಂಸ್ಥೆಗಳನ್ನು ಕ್ರಿಯಾಶೀಲವಾಗಿಸಲು ಬೇಕಾದ ಸಲಹೆ, ಮಾರ್ಗ ದರ್ಶನ ನೀಡಲು ಸಹಕಾರಿ ಸಿದ್ದವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯ ಮಿತ ರಾಜ್ಯಾಧ್ಯಕ್ಷ ಜಿ. ನಂಜನಗೌಡ ಭರವಸೆ ನೀಡಿದರು.

ನಗರದ ಐಶ್ವರ್ಯ ಹೊಟೇಲ್ ನಲ್ಲಿ ಚಿತ್ರದುರ್ಗ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯ ನಿರ್ವಾಹಕರುಗಳಿಗೆ ಏರ್ಪಡಿಸಿದ್ದ ಸಂಪರ್ಕ ಸಭೆ ಹಾಗೂ ವಿಷಯಾಧಾರಿತ ತರಬೇತಿ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.

Advertisement

ಕ್ರಿಯಾಶೀಲವಲ್ಲದ ಸಹಕಾರ ಸಂಸ್ಥೆಗಳನ್ನು ನೊಂದಣಿ ಪುಸ್ತಕದಲ್ಲಿ ಟ್ಟುಕೊಳ್ಳುವ ಅಗತ್ಯವಿಲ್ಲವೆಂದು ತೀರ್ಮಾನಿಸಿದ್ದೇವೆ.  ಆದ್ದರಿಂದ ಎಲ್ಲಾ ಸಹಕಾರ ಸಂಸ್ಥೆಗಳು ಕ್ರಿಯಾಶೀಲ ವಾಗಿರಬೇಕು ಎಂದು ಎಚ್ಚರಿಸಿದರು.  ಸರ್ಕಾರ ಇತ್ತೀಚೆಗೆ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದಿರುವ ಕೆಲವು ಅಂಶ ಗಳು ಮಾರಕವಾಗಿವೆ.  ರಾಜ್ಯ ಉಚ್ಛ ನ್ಯಾಯಾಲಯದಿಂದ ಮಾರಕವಾಗು ವಂತ ಅಂಶಗಳ ಬಗ್ಗೆ ತಡೆಯಾಜ್ಞೆ ತರಲಾಗಿದೆ.  ಅಲ್ಲದೆ, ಸರ್ಕಾರದ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಮಾರಕವಾಗಬಹುದಾದ ಅಂಶಗಳನ್ನು ಕೈಬಿಡುವಂತೆ ಮನವೊಲಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಜಿ. ನಂಜನಗೌಡ ತಿಳಿಸಿದರು.

ಸಹಕಾರಿಯ ಉಪಾಧ್ಯಕ್ಷ ಎ. ಆರ್. ಪ್ರಸನ್ನಕುಮಾರ್ ಮಾತನಾಡಿ, ರಾಜ್ಯದ ಸೌಹಾರ್ದ ಸಹಕಾರಿಗಳ ಬೆಳವಣಿಗೆಗೆ ಇಂತಹ ಸಂಪರ್ಕ ಸಭೆ ಅವಶ್ಯವಾಗಿದೆ.  ಸೌಹಾರ್ದ ಚಳುವಳಿ ಗೆ 25 ವರ್ಷವಾಗಿರುವ ಹಿನ್ನೆಲೆಯಲ್ಲಿ 2025ರ ಜನವರಿ 01 ರಿಂದ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ.  ಇದೇ ತಿಂಗಳ 23 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಹಾ ಸಭೆಯಲ್ಲಿ ತೀರ್ಮಾನಿಸಲಾಗುವುದು.

ಸಂಯುಕ್ತ ಸಹಕಾರಿಯು ಕಾಲ ಕಾಲಕ್ಕೆ ಸಹಕಾರಿಗಳಿಗೆ ತರಬೇತಿ + ಶಿಕ್ಷಣ + ಪ್ರಚಾರ + ನಿಯಂತ್ರಣ ಮಾಡಿಕೊಂಡು ಬರುತ್ತಿದೆ.  ಸಹಕಾರಿಗಳು ತರಬೇತಿಯಲ್ಲಿ ಹೆಚ್ಚೆಚ್ಚು ಪಾಲ್ಗೊ ಳ್ಳಬೇಕೆಂದು ಕಿವಿಮಾತು ಹೇಳಿದರು.

ಸಂಯುಕ್ತ ಸಹಕಾರಿಯ ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಎಚ್. ಕೃಷ್ಣಾರೆಡ್ಡಿ ಸಭೆ ಯನ್ನು ಉದ್ದೇಶಿಸಿ ಮಾತನಾಡುತ್ತ ದೇಶದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆ ಗಳಿದ್ದು, 32 ಕೋಟಿ ಸದಸ್ಯರುಗಳಿದ್ದಾರೆ.  ದೇಶದ ಶೇ. 97 ರಷ್ಟು ವಿವಿಧ ಪರಿಕರಗಳಲ್ಲಿ ಸಹಕಾರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ.  ಹಾಗಾಗಿ ಕೇಂದ್ರ ಸರ್ಕಾರ ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿ, ಇಲಾಖೆ ನೋಡಿಕೊಳ್ಳಲು ಕ್ಯಾಬಿನೆಟ್ ಮತ್ತು ರಾಜ್ಯ ಸಚಿವರನ್ನು ನೇಮಿಸ ಲಾಗಿದೆ.

ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ಸಹಕಾರ ಕಾಯ್ದೆ ಬಹು ತೇಕ ಅಂಶಗಳು ಸಹಕಾರಿಗಳ ಪರ ವಾಗಿದ್ದರೂ ಕೆಲವು ಮಾರಕವಾಗಿವೆ.  ಮಾರಕ ಅಂಶಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದ್ದು, ಸರಿಪಡಿ ಸುವ ಪ್ರಯತ್ನದಲ್ಲಿದ್ದೇವೆ.
ಸರ್ಕಾರ ತಿದ್ದುಪಡಿ ಮಾಡಿರುವ ಸಹಕಾರಿ ಕಾಯ್ದೆಯಲ್ಲಿರುವ ಪೂರಕ ಹಾಗೂ ಮಾರಕ ಅಂಶಗಳ ಅನು ಕೂಲ ಹಾಗೂ ಅನಾನುಕೂಲಗಳ ಬಗ್ಗೆ ಸಭೆಯಲ್ಲಿದ್ದ ಸಹಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಹಕಾರಿಗಳ ಅನುಕೂಲಕ್ಕಾಗಿ ಸಂಯುಕ್ತ ಸಹಕಾರಿ ಪದಾಧಿಕಾರಿಗಳು ಮನವರಿಕೆ ಮಾಡಿಕೊಟ್ಟ ಮೇಲೆ ತಿದ್ದುಪಡಿ ಮಾಡಬೇಕಾದ ಅಂಶಗಳ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಸರ್ಕಾರದ ಸಹಕಾರ ಸಚಿ ವರು, ನಮ್ಮೊಡನೆ ಬೆಂಬಳಕ್ಕೆ ನಿಂತ ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ತಿನ ಸದಸ್ಯ ಕೆ.ಎಸ್. ನವೀನ್ ಹಾಗೂ ಸಹಕರಿಸಿದ ಎಲ್ಲ ರಿಗೂ ಸಂಯುಕ್ತ ಸಹಕಾರಿಯಿಂದ ಅಭಿನಂದನೆಗಳನ್ನು ಹೇಳಿದರು.

ಚಿತ್ರದುರ್ಗ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ವೀರಭದ್ರಬಾಬು ಮಾತನಾಡಿ, ಸಹ ಕಾರಿ ಸಂಘಗಳು ಸೌಹಾರ್ದ ಸಂ ಯುಕ್ತ ಸಹಕಾರಿಗೆ ನೀಡುವ ವಾರ್ಷಿಕ ವಂತಿಗೆಯಲ್ಲಿ ಇಂತಿಷ್ಟು ಎಂದು ಜಿಲ್ಲಾ ಸಹಕಾರಿ ಸಂಘಗಳು ಹಮ್ಮಿಕೊಳ್ಳು ವಂತ ಕಾರ್ಯಕ್ರಮಗಳಿಗೆ ನೀಡಿದರೆ ಸಹಕಾರಿಗಳಲ್ಲಿ ಉಪಯುಕ್ತ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕತೆ ಜಾಸ್ತಿಯಾಗುತ್ತದೆ.   ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಚಿಂತಿಸಲು ಸಲಹೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾ ಸಹಕಾರಿಗಳಿಗೆ ಅನುಕೂಲವಾಗುವಂತ ಇಂತಹ ವಿಷ ಯಾಧಾರಿತ ತರಬೇತಿಗಳು ನಿರಂತರ ವಾಗಿರಲಿ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ ಮರ್ಚೆಂಟ್ಸ್ ಬ್ಯಾಂ ಕಿನ ನಿರ್ದೇಶಕ ರಘುರಾಮ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಸಹಕಾರಿಗಳಿಗೆ ವಿಷಯಾಧಾರಿತ ವಿಷಯಗಳ ಬಗ್ಗೆ ತರಬೇತಿ ನೀಡಲು ರಾಜ್ಯ ಸಹಕಾರಿ ಸದಾ ಸಿದ್ಧ.  ತರಬೇತಿಗಳಿಗೆ ಸಹಕಾರಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಸಹಕಾರಿಗಳು ಸಹಕಾರಕ್ಕೆ ಸಂ ಬಂಧಿಸಿದ ಡಿಸಿಎಂ ಕೋರ್ಸ್ ಸೇರಿ.  ಜಿಲ್ಲೆಯ ಸಹಕಾರ ಸಂಸ್ಥೆಗಳನ್ನು ಇನ್ನೂ ಉತ್ತಮವಾಗಿ ಬೆಳೆಸಿ, ಜಿಲ್ಲೆಗೆ ಕೀರ್ತಿ ತರುವ ಹೊಣೆಗಾರಿಕೆ ಜಿಲ್ಲೆಯ ಎಲ್ಲಾ ಸಹಕಾರಿಗಳ ಮೇಲಿದೆ.  ಎಲ್ಲಾ ಸಹಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಕರೆ ನೀಡಿದರು.

ಶ್ರೀಮತಿ ಕವಿತಾ ಪ್ರಾರ್ಥಿಸಿದರು.  ಪ್ರಾಂತೀಯ ವ್ಯವಸ್ಥಾಪಕ ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಸೌಹಾರ್ದ ಡೆವಲಪ್‍ಮೆಂಟ್ ಅಧಿ ಕಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿ ಸಿದರು.  ಮರ್ಚೆಂಟ್ಸ್ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಮಲ್ಲಿಕಾರ್ಜುನ ವಂದಿಸಿದರು.

Tags :
Advertisement