Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗೋವಿಂದ ಕಾರಜೋಳ ಗೋ ಬ್ಯಾಕ್ ಎಂದು ಹೇಳಿರುವುದು ಬಿಜೆಪಿ ಪಕ್ಷದ ಕಾರ್ಯಕರ್ತರೇ ಹೊರತು ನಾವಲ್ಲ :  ಬಿ.ಟಿ. ಜಗದೀಶ್

04:54 PM Apr 06, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 06 : ಗೋವಿಂದ ಕಾರಜೋಳ ಗೋಬ್ಯಾಕ್ ಅನ್ನುವುದು ಬಿಜೆಪಿ ಕಾರ್ಯಕರ್ತರು ಆಗಿದೆ.. ಇದನ್ನು ಮುಖ್ಯಮಂತ್ರಿಯವರು ಹೇಳಿದ್ದಲ್ಲ... ಬಿಜೆಪಿಯವರು ಹೇಳಿದ್ದನ್ನು ಮುಖ್ಯಮಂತ್ರಿಗಳು ಪುನರ್ ಉಚ್ಚರಿಸಿದ್ದಾರೆ. ರಾಜ್ಯದಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಆದರೆ ಗೋವಿಂದ ಕಾರಜೋಳ್ ರವರು ಚಿತ್ರದುರ್ಗ ಜಿಲ್ಲೆಯ ಸ್ಪರ್ಧಿಸುವುದೇ ಅವರ ಪಕ್ಷದ ಕಾರ್ಯಕರ್ತರಿಗೆ ಇಷ್ಟವಿಲ್ಲ. ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಟಿ ಜಗದೀಶ್ ತಿಳಿಸಿದರು.

Advertisement

ನಗರದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೋವಿಂದ ಕಾರಜೋಳ್ ಗೋ ಬ್ಯಾಕ್ ಎಂದು ಹೇಳಿರುವುದು ನಾವಲ್ಲ.. ನಿಮ್ಮ ಪಕ್ಷದ ಕಾರ್ಯಕರ್ತರೇ ಹೇಳಿರುವುದು. ಆದ್ದರಿಂದ ನೀವು ಹೋದ ಪುಟ್ಟ. ಬಂದ ಪುಟ್ಟ ಅನ್ನುವಾಗ ಹಾಗೆ ನೀವು ವಾಪಸ್ ಹೋಗಬೇಕು.ನಮ್ಮ ಜಿಲ್ಲೆಯ ಜನ 500 ಕಿಮೀ ದೂರ  ಬಂದು ನಿಮ್ಮನ್ನು ನೋಡಲು ಇಷ್ಟಪಡುವುದಿಲ್ಲ. ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಸ್ಪರ್ಧಿಸಲಿಕ್ಕೆ ಜನರ ತೀರ್ಮಾನವಿತ್ತು... ಅದರಂತೆ ಅವರು ಅಲ್ಲಿ ಸ್ಪರ್ಧಿಸಿದರು.. ಸಿದ್ದರಾಮಯ್ಯರವರಿಗೆ  ರಾಜ್ಯದ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧಿಸಲಿಕ್ಕೆ ಕಾರ್ಯಕರ್ತರೇ ಆಹ್ವಾನಿಸುತ್ತಿದ್ದಾರೆ. ಆದರೆ ಗೋವಿಂದ ಕಾರಜೋಳ್ ರವರಿಗೆ ಅವರ ಪಕ್ಷದ ಕಾರ್ಯಕರ್ತರೇ ಗೋ ಬ್ಯಾಕ್ ಎಂದು ಹೇಳುತ್ತಿದ್ದಾರೆ ಎಂದರು.

ನೀವು ಸಚಿವರಾಗಿದ್ದಾಗ ಲೂಟಿ ಮಾಡಿದ ಹಣವನ್ನು ಖರ್ಚು ಮಾಡಲಿಕ್ಕೆ ಇಲ್ಲಿಗೆ ಬಂದಿದ್ದೀರಾ..? ಮಿಸ್ಟರ್ ಗೋವಿಂದ ಕಾರಜೋಳ್ ರವರೆ ನೀವು ಯಾವತ್ತೂ ಅಧಿಕಾರಕ್ಕೆ ಬಂದರೂ ಕುದುರೆ ವ್ಯಾಪಾರದ ಮೂಲಕ ಅಧಿಕಾರಕ್ಕೆ ಬಂದಿದ್ದೀರಿ... ಅದು ಸಹ ವಾಮಮಾರ್ಗದಿಂದ. ಚಿತ್ರದುರ್ಗ ಜಿಲ್ಲೆಗೆ ಗೋವಿಂದ ಕಾರಜೋಳ್ ರವರ ಕೊಡುಗೆ ಏನು..? ನಮ್ಮ ಪಕ್ಷದ ಅಭ್ಯರ್ಥಿ ಈ ಹಿಂದೆ ಸಂಸದರಾಗಿದ್ದವರು... ಅವರು ಸೋತರೂ ಸಹ ಜಿಲ್ಲೆಯ ಜನತೆ ಜೊತೆ ಇದ್ದಾರೆ... ಹಾಲಿ ಸಂಸದ ನಾರಾಯಣಸ್ವಾಮಿಯವರು ಏಕೆ ನಿಲ್ಲಲಿಲ್ಲ...? ಎಂದು ಜಗದೀಶ್ ಪ್ರಶ್ನಿಸಿದರು.

ಗೋಷ್ಟಿಯಲ್ಲಿ ಎನ್.ಡಿ.ಕುಮಾರ್, ವಲಿ ಖಾದ್ರಿ, ನರಹರಿ, ಮುದಸಿರ್, ಆಫ್ತಾಖ ಆಹ್ಮದ್, ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
B.T. JagadishbengaluruBJP party workerschitradurgaGo backGovinda Karjolasuddionesuddione newsಗೋ ಬ್ಯಾಕ್ಗೋವಿಂದ ಕಾರಜೋಳಚಿತ್ರದುರ್ಗಬಿ.ಟಿ.ಜಗದೀಶ್ಬಿಜೆಪಿ ಪಕ್ಷದ ಕಾರ್ಯಕರ್ತರೇಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article