For the best experience, open
https://m.suddione.com
on your mobile browser.
Advertisement

ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಗೋವಿಂದ ಕಾರಜೋಳರವರ ಗೆಲುವು ನಿಶ್ಚಿತ : ಬಿ.ಕಾಂತರಾಜ್

02:43 PM Apr 23, 2024 IST | suddionenews
ಬಿಜೆಪಿ   ಜೆಡಿಎಸ್ ಮೈತ್ರಿಯಿಂದ ಗೋವಿಂದ ಕಾರಜೋಳರವರ ಗೆಲುವು ನಿಶ್ಚಿತ   ಬಿ ಕಾಂತರಾಜ್
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.23  :
ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರ ಪರ ಜೆಡಿಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ತಾಲ್ಲೂಕಿನ ಹದಿನೈದು ಪಂಚಾಯಿತಿಗಳಲ್ಲಿ ಮಂಗಳವಾರ ಬಿರುಸಿನ ಮತಯಾಚಿಸಿದರು.

Advertisement
Advertisement

ಜಾನುಕೊಂಡ, ಗೊಡಬನಹಾಳ್, ಅನ್ನೆಹಾಳ್, ಸೊಂಡೆಕೊಳ, ಹುಲ್ಲೂರು, ಹಿರೇಗುಂಟನೂರು, ಬೊಮ್ಮನಹಳ್ಳಿ, ಭೀಮಸಮುದ್ರ, ಸಿದ್ದಾಪುರ, ಐನಳ್ಳಿ, ಲಕ್ಷ್ಮಿಸಾಗರ, ಹಾಲಘಟ್ಟ, ಮಠದಕುರುಬರಹಟ್ಟಿ, ಚೋಳಘಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ. ಅಭ್ಯರ್ಥಿ ಪರ ಮತಯಾಚಿಸಿದ ಬಿ.ಕಾಂತರಾಜ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ. ಜೆಡಿಎಸ್. ಮೈತ್ರಿ ಮಾಡಿಕೊಂಡಿರುವುದರಿಂದ ಅಭ್ಯರ್ಥಿಯ ಗೆಲುವು ನಿಶ್ಚಿತ. ಕೇಂದ್ರದಲ್ಲಿ ಮೂರನೆ ಬಾರಿಗೆ ನರೇಂದ್ರಮೋದಿ ಪ್ರಧಾನಿಯಾಗಬೇಕಾಗಿರುವುದರಿಂದ ಗೋವಿಂದ ಕಾರಜೋಳರವರನ್ನು ಬಹುಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಮತದಾರರಲ್ಲಿ ವಿನಂತಿಸಿದರು.

ಜೆಡಿಎಸ್. ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣತಿಮ್ಮಣ್ಣ, ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿನಾಯಕ, ವಿದ್ಯಾರ್ಥಿ ಘಟಕದ ಅಬ್ಬು ಹಾಗೂ ಜೆಡಿಎಸ್. ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

Tags :
Advertisement