For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಭರ್ಜರಿ ಮತಬೇಟೆ

10:02 PM Apr 08, 2024 IST | suddionenews
ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಭರ್ಜರಿ ಮತಬೇಟೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08  : ದೇಶದ ರಕ್ಷಣೆಗೆ ನರೇಂದ್ರಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗಬೇಕಾಗಿರುವುದರಿಂದ ಲೋಕಸಭೆ ಚುನಾವಣೆ ದೇಶದ ಚುನಾವಣೆ ಮೋದಿ ಚುನಾವಣೆ ಎನ್ನುವ ಮಹತ್ವ ಪಡೆದುಕೊಂಡಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

Advertisement

ಖಾಸಗಿ ಬಸ್‍ನಿಲ್ದಾಣದ ಸಮೀಪವಿರುವ ತರಕಾರಿ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ವ್ಯಾಪಾರಿಗಳ ಬಳಿ ಸೋಮವಾರ ಮತ ಯಾಚಿಸಿ ನಂತರ ಮಾತನಾಡಿದ ಗೋವಿಂದ ಕಾರಜೋಳ ಭಾರತದ ಕೀರ್ತಿ ಗೌರವವನ್ನು ವಿಶ್ವದಲ್ಲಿಯೇ ಎತ್ತರಕ್ಕೆ ತೆಗೆದುಕೊಂಡು ಹೋಗಿರುವ ಪ್ರಧಾನಿ ನರೇಂದ್ರಮೋದಿ ಕಳೆದ ಹತ್ತು ವರ್ಷಗಳಲ್ಲಿ ಮತದಾರರ ಜೊತೆ ಬೆರೆತಿದ್ದಾರೆ. ಒಂದು ಕಾಲದಲ್ಲಿ ಭಾರತವನ್ನು ಬಡ ರಾಷ್ಟ್ರ ಹಾವಾಡಿಗರ ದೇಶ ಎಂದು ಹೀಯಾಳಿಸುತ್ತಿದ್ದ ವಿದೇಶಿಗರು ಈಗ ಭಾರತದ ಕಡೆ ತಿರುಗಿ ನೋಡುತ್ತಿದ್ದಾರೆಂದರೆ ಅದಕ್ಕೆ ಮೋದಿ ಕಾರಣ ಎಂದು ಬಣ್ಣಿಸಿದರು.

ಶ್ರೀಮಂತರ ಪಟ್ಟಿಯಲ್ಲಿ ಭಾರತ ಈಗ ಐದನೆ ಸ್ಥಾನದಲ್ಲಿದೆ. ಇನ್ನು ಮೂರು ವರ್ಷದಲ್ಲಿ ಒಂದನೆ ಸ್ಥಾನಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ಕೋವಿಡ್ ಸಂದರ್ಭದಲ್ಲಿ ಮುಂದುವರೆದ ಅಮೇರಿಕಾ ಸೇರಿದಂತೆ ಅನೇಕ ದೇಶಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಪ್ರಾಚೀನ ಕಾಲದ ಸಂಸ್ಕøತಿ ನಮ್ಮದು. ಯುಗಾದಿ ಹಬ್ಬದ ವಿಶೇಷವೆಂದರೆ ದುಡಿದ ಹಣದಲ್ಲಿ ಹೊಟ್ಟೆ ಬಟ್ಟೆಗೆ ಬಳಸಿ ಉಳಿತಾಯ ಮಾಡುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಹಾಗಾಗಿ ಎಂತಹ ಸಂಕಷ್ಟ ಪರಿಸ್ಥಿತಿ ಎದುರಾದರೂ ನಮ್ಮ ದೇಶ ಆರ್ಥಿಕವಾಗಿ ದಿವಾಳಿಯಾಗುವುದಿಲ್ಲ. ಸಮತೋಲನದಲ್ಲಿರುತ್ತದೆ. ಪೂರ್ವಜರು ಯಾರು ಆರ್ಥಿಕ ತಜ್ಞರಾಗಿರಲಿಲ್ಲ ಎಂದು ತಿಳಿಸಿದರು.

ಇದೆ ತಿಂಗಳ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನನ್ನು ಬಹುಮತಗಳಿಂದ ಜಯಶಾಲಿಯನ್ನಾಗಿ ಮಾಡಿ ಮತ್ತೊಮ್ಮೆ ನರೇಂದ್ರಮೋದಿಯನ್ನು ದೇಶದ ಪ್ರಧಾನಿಯನ್ನಾಗಿಸುವಂತೆ ವ್ಯಾಪಾರಿಗಳಲ್ಲಿ ಗೋವಿಂದ ಕಾರಜೋಳ ಮನವಿ ಮಾಡಿದರು.

ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್, ಖಜಾಂಚಿ ಮಾಧುರಿ ಗಿರೀಶ್, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಬಸಮ್ಮ, ಶಿವಣ್ಣಾಚಾರ್, ವೆಂಕಟೇಶ್‍ಯಾದವ್, ರಾಮು ಇನ್ನು ಅನೇಕರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

Tags :
Advertisement