For the best experience, open
https://m.suddione.com
on your mobile browser.
Advertisement

ಮೋದಿಯವರ ಕೈ ಬಲಪಡಿಸಲು ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳರವರು ಗೆಲ್ಲಬೇಕು : ಮಾಜಿ ಶಾಸಕ ಎಸ್.ಕೆ.ಬಸವರಾಜನ್

04:54 PM Apr 10, 2024 IST | suddionenews
ಮೋದಿಯವರ ಕೈ ಬಲಪಡಿಸಲು ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳರವರು ಗೆಲ್ಲಬೇಕು   ಮಾಜಿ ಶಾಸಕ ಎಸ್ ಕೆ ಬಸವರಾಜನ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಏ. 10 : ದೇಶದ ಭದ್ರತೆ, ಸುರಕ್ಷತೆಗಾಗಿ ಮೋದಿಯವರ ಅಗತ್ಯವಾಗಿದ್ದಾರೆ ಅವರ ಕೈ ಬಲಪಡಿಸಬೇಕಾದರೆ ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳರವರು ಗೆಲ್ಲಬೇಕಿದೆ ಇದಕ್ಕೆ ನಮ್ಮೆಲ್ಲರ ಪರಿಶ್ರಮ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.

Advertisement
Advertisement

ನಗರದಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬರ ಮಾಡಿಕೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ನನ್ನ ಹಳೆಯ ಪಕ್ಷವಾಗಿದೆ ನನ್ನನ್ನು ಶಾಸಕರನ್ನಾಗಿ ಮಾಡಿದ ಪಕ್ಷವಾಗಿದೆ. ಮಹತ್ವದ ಚುನಾವಣೆಯಾಗಿದೆ ಬಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ.

ದೇಶ ಸುರಕ್ಷತೆ ಮತ್ತು ಭದ್ರತೆಯನ್ನು ಹೊಂದಬೇಕಿದೆ. ದೇಶವನ್ನು ಕಾಪಾಡುವ ಶಕ್ತಿ ಇರುವುದು ನರೆಂದ್ರ ಮೋದಿಯವರಿಗೆ ಮಾತ್ರ, ಕಳೆದ 10 ವರ್ಷದಲ್ಲಿ ಹಲವಾರು ಕಠಿಣ ಸಂದರ್ಭದಲ್ಲಿ ಉತ್ತಮವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದರ ಮೂಲಕ ದೇಶ ಮತ್ತು ಅದರಲ್ಲಿ ಜನತೆಯನ್ನು ರಕ್ಷಿಸಿದ್ದಾರೆ. ಇದರೊಂದಿಗೆ ಬೇರೆ ದೇಶಗಳ ಯುಧ್ದಗಳನ್ನು ನಿಯಂತ್ರಿಸುವ ಶಕ್ತಿ ಯಾರಿಗಾದರೂ ಇದ್ದರೆ ಅದು ನರೇಂದ್ರ ಮೋದಿಯವರಿಗೆ ಮಾತ್ರ ಎಂದರು.

ಕಳೆದ 70 ವರ್ಷದಿಂದ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಮಾಡಿತ್ತು. ಆದರೆ 10 ವರ್ಷದಲ್ಲಿ ಅಭಿವೃದ್ದಿಯನ್ನು ಮಾಡಬೇಕೆಂದರೆ ಕಷ್ಟವಾಗುತ್ತದೆ. ನಮ್ಮ ದೇಶದಲ್ಲಿ ಅಭಿವೃಧ್ದಿ, ಕಾರ್ಯಕ್ರಮಗಳು ಆಗಬೇಕಿತ್ತು ಯಾಕೆಂದರೆ ನಮ್ಮದು ಬಡ ದೇಶವಾಗಿದೆ. ದೇಶವನ್ನು ಉಳಿಸುವ ಕಾರ್ಯವನ್ನು ಮಾಡಬೇಕಿದೆ. ದೇಶ ಉಳಿದರೆ ಏನೆಲ್ಲಾ ಮಾಡಬಹುದಾಗಿದೆ. ಈಗ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾರೆ.

ದೇಶವನ್ನು 70 ವರ್ಷ ಆಡಳಿತ ಮಾಡಿದರೂ ಸಹಾ ಕಾಶ್ಮೀರವನ್ನ ಜೋಡಿಸುವ ಕಾರ್ಯವನ್ನು ಮಾಡಿರಲಿಲ್ಲ, ಅಲ್ಲಿ ಭಾರತದ ಬಾವುಟವನ್ನು ಹಾರಿಸದ ಪರಿಸ್ಥಿತಿ ಇತ್ತು ಈ ಸಮಯದಲ್ಲಿ ಮೋದಿಯವರು ಧೈರ್ಯದಿಂದ ಕಾಶ್ಮೀರವನ್ನು ಭಾರತಕ್ಕೆ ಮರಳಿ ನೀಡಿದ್ದಾರೆ. ಈಗ ಭಾರತವನ್ನು ಜೋಡಿಸುತ್ತೇವೆ ಎಂದು ಹೂರಟ್ಟಿದ್ದಾರೆ ಇದು ಬೂಟಾಟಿಕೆ ಚುನಾವಣೆಗಾಗಿ ಮಾಡುತ್ತಿರುವ ಕಾರ್ಯವಾಗಿದೆ. ಮೋದಿಯವರಿಗೆ ಯಾವುದೇ ಸ್ವಾರ್ಥ ಇಲ್ಲ ಕಳೆದ 10 ವರ್ಷದಲ್ಲಿ ದೇಶಕ್ಕಾಗಿ ದಿನದ 18 ಗಂಟೆಗಳ ಕಾಲ ಕೆಲಸವನ್ನು ಮಾಡುತ್ತಿದ್ದಾರೆ ಇಂತಹ ಪ್ರಧಾನ ಮಂತ್ರಿ ಮುಂದೆ ನಮಗೆ ಸಿಗುವುದಿಲ್ಲ, ತಮ್ಮ ಕೆಲಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಯಾವುದೇ ಹಗರಣದಲ್ಲಿ ಭಾಗಿಯಾಗದೆ ಬಿಳಿ ಹಾಳೆಯಂತೆ ಕೆಲಸವನ್ನು ದೇಶಕ್ಕಾಗಿ ಮಾಡುತ್ತಿದ್ದಾರೆ ಎಂದು ಬಸವರಾಜನ್ ತಿಳಿಸಿದರು.


ಬಿಜೆಪಿ ಅಭ್ಯರ್ಥಿಗಳಾದ ಗೋವಿಂದ ಕಾರಜೋಳ ರವರು ಸಚಿವರಾಗಿ ಅನುಭವವನ್ನು ಹೊಂದಿದ್ದಾರೆ.ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಸಚಿವರಾಗಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಇಂತಹರ ಅನುಭವ ನಮಗೆ ಅಗತ್ಯವಾಗಿದೆ ಇವರನ್ನು ಗೆಲ್ಲಿಸುವುದರ ಮೂಲಕ ನರೆಂದ್ರ ಮೋದಿಯವರ ಕೈಯನ್ನು ಬಲ ಪಡಿಸಬೇಕಿದೆ. ದಲಿತ ಮುಖ್ಯಮಂತ್ರಿ ಎಂಬ ಕೂಗ ಬಂದರೆ ಅದಕ್ಕೆ ಕಾರಜೋಳರವರ ಹೆಸರು ಮುನ್ನಲೆಯಲ್ಲಿ ಇದೆ. ಯಡೆಯೂರಪ್ಪರವರು ನಮ್ಮೆಲ್ಲರ ಮೇಲೆ ಭರವಸೆಯನ್ನು ಇಟ್ಟು ಕಾರಜೋಳರವರನ್ನು ಇಲ್ಲಿಗೆ ಕಳುಹಿಸಿದ್ದಾರೆ ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಇವರೊಂದಿಗೆ ದೇವೇಗೌಡರವರು ಸಹಾ ಕೈಜೋಡಿಸಿದ್ದಾರೆ ಇದರಿಂದ ಆನೆ ಬಲ ಬಂದಂತೆ ಆಗಿದೆ. ಇವರು ಗೆದ್ದರೆ ನಮ್ಮಲ್ಲಿ ನೆನೆಗುದ್ದಿಗೆ ಬಿದ್ದರು ಕೇಂದ್ರದ ಕೆಲಸವನ್ನು ಮಾಡಿಸಬಹುದಾಗಿದೆ. ಅನುದಾನ ತರಲು ಅನುಕೂಲವಾಗುತ್ತದೆ. ಇವರನ್ನು ಸೋಲಿಸಿದೆ ನಮ್ಮ ಜಿಲ್ಲೆಗೆ ನಷ್ಠವನ್ನು ಮಾಡಿಕೊಂಡಂತೆ ಆಗುತ್ತದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದರೆ ಲೋಕಸಭೆಯಲ್ಲಿ ವಿರೋಧ ಪಕ್ಷದಲ್ಲಿ ಇರುತ್ತಾರೆ ಇದರಿಂದ ನಮ್ಮ ಜಿಲ್ಲೆಗೆ ಅನುಕೂಲವಾಗುವುದಿಲ್ಲ. ಬಿಜೆಪಿ 400 ಸೀಟುಗಳನ್ನು ಗೆಲ್ಲಲಿದೆ ಇದರಲ್ಲಿ ನಮ್ಮ  ಚಿತ್ರದುರ್ಗ ಇರಬೇಕಿದೆ ಇಲ್ಲವಾದರೆ ನಮಗೆ ನಷ್ಠವಾಗುತ್ತದೆ ಇದು ಹಣದ ಚುನಾವಣೆ ಅಲ್ಲ ವಿಶ್ವಾಸ, ಅಭ್ಯರ್ಥಿಯ ಬಗ್ಗೆ ತಿಳಿಸುವ ದೇಶಕ್ಕೆ ಬಿಜೆಪಿ ಅನಿವಾರ್ಯತೆಯ ಬಗ್ಗೆ ಹೇಳುವ ಅಗತ್ಯ ಇದೆ. ಮತದಾರರಿಗೆ ಮನವೋಲಿಸುವ ಕಾರ್ಯವನ್ನು ಮಾಡಬೇಕಿದೆ ಇದರಿಂದ ನಮ್ಮ ಅಭ್ಯರ್ಥಿ ಗೆಲುವನ್ನು ಸಾಧಿಸಬೇಕಿದೆ ಎಂದು ಕರೆ ನೀಡಿದರು.

ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ದೇಶ ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಈಗಿನವರೆಗೂ ಹಲವಾರು ಪ್ರಧಾನ ಮಂತ್ರಿಗಳನ್ನು ಕಂಡಿದ್ದೇವೆ ಇದರಲ್ಲಿ ದೇಶವನ್ನು ಸಮರ್ಥವಾಗಿ ಆಳುವ ಶಕ್ತಿಯನ್ನು ನರೆಂದ್ರ ಮೋದಿಯವರು ಮಾತ್ರ ಹೊಂದಿದ್ದಾರೆ. ಕಳೆದ 2 3ವರ್ಷದಿಂದ ಯಾವುದೇ ರೀತಿಯ ಆಪಾದನೆಯನ್ನು ಹೊಂದದೆ ಸ್ವಜನ ಪಕ್ಷಪಾತವನ್ನು ಮಾಡದೇ ಕಳಂಕ ರಹಿತವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಪ್ರಪಂಚದಲ್ಲಿ ಭಾರತದ ಕೀರ್ತಿ, ಗೌರವನ್ನು ಹೆಚ್ಚಿಸಿದ್ದು ಮೋದಿಯವರು, ಕಾಂಗ್ರೆಸ್ನವರು ಲಜ್ಜೆಗೆಟ್ಟಿ ಪ್ರನಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ನಿರುದ್ಯೋಗಿಗಳಿಗೆ 1 ಲಕ್ಷ ಸಾಲ ಮನ್ನಾಕ್ಕೆ ಲಕ್ಷಾಂತರ ಕೋಟಿ ರೂ.ಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದೆ ಇದು ಲಕ್ಷ ಕೋಟಿಯಾಗಲಿದೆ ನಮ್ಮ ಆಯವ್ಯಯ 43 ಲಕ್ಷ ಕೋಟಿಯಾಗಲಿದೆ ಇವರು ನೀಡುವ ಹಣವೆಲ್ಲ ಬರೀ ಭರವಸೆಗಳಿಗೆ ಹೋಗಲಿದೆ ಹೀಗಾದರೆ ಅಭೀವೃದ್ದಿ ಯಾವಾಗ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಮೋಸದಾಟ ಚುನಾವಣೆಗೂ ಮುನ್ನ ಅಭಿವೃದ್ಧಿ ಕಾರ್ಯಗಳ ಭರವಸೆ ನೀಡಿದ್ದರು ಈಗ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಕಾಂಗ್ರೆಸ್ ಶಾಸಕರು ಮತ ಕೇಳಲು ಹೋಗಲು ಹೆದರುತ್ತಿದ್ದಾರೆ ಕಾಂಗ್ರೆಸ್ ಶಾಸಕರು ಮತ ಕೇಳಲು ಹೋದರೆ ಜನ ತಟ್ಟುತ್ತಾರೆ ರಸ್ತೆ, ಸೇತುವೆ, ಕೆರೆ ಕಟ್ಟೆ ನಿರ್ಮಾಣಕ್ಕೆ 1 ರೂ. ಅನುದಾನ ತರಲಾಗಿಲ್ಲ ಕಾಂಗ್ರೆಸ್‍ನ ಎಲ್ಲಾ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಒಂದೂ ಕೆಲಸ ಆಗುತ್ತಿಲ್ಲ ಎಂದು ಕೈ ಶಾಸಕರೇ ಹೇಳುತ್ತಿದ್ದಾರೆ ಮಂತ್ರಿಗಳು ಏಜೆಂಟರು ಹೇಳಿದಂತೆ ಕೇಳುತ್ತಿದ್ದಾರೆಂದು ಕೈ ಶಾಸಕರೇ ಹೇಳುತ್ತಿದ್ದಾರೆ ರಾಷ್ಟ್ರೀಯ ಕಾಂಗ್ರೆಸ್ ಬಜೆಟ್ ಗಿಂತ ಹೆಚ್ಚಿನ ಬಿಟ್ಟಿ ಬಗ್ಗೆ ಘೋಷಿಸಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ .ಜಯ್ಯಣ್ಣ, ಮಾಜಿ ಶಾಸಕರಾದ ಪ್ರೊ ಲಿಂಗಪ್ಪ, ಮಾಜಿ ಜಿ ಪಂ ಅದ್ಯಕ್ಷರಾದ ಸೌಭಾಗ್ಯ ಬಸವರಾಜನ್ ,ಮಾಜಿ ಜಿಪಂ ಸದಸ್ಯ ಲಕ್ಷ್ಮಣಪ್ಪ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಾಜ ರೆಡ್ಡಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಗೋವಿಂದ ಕಾರಜೋಳರವರು ತಮಟಗಲ್ಲು ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ನಂತರ ಕಾಲೋನಿಗಳಿಗೆ ತೆರಳಿ ಮತಯಾಚನೆ ಮಾಡಿದರು.

Advertisement
Tags :
Advertisement