Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೆಸರಿಗೆ ಮಾತ್ರ ಸರ್ಕಾರ, ಬೊಕ್ಕಸ ನೋಡಿದರೆ ಖಾಲಿ ಖಾಲಿ : ಬಂಗಾರು ಹನುಮಂತು

10:13 PM Feb 24, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆಬ್ರವರಿ. 24 :  ರಾಜ್ಯದ  ಕೈ ಸರ್ಕಾರ ಈಗ ಖಾಲಿ ಕೈ ಸರ್ಕಾರವಾಗಿದೆ, ಚುನಾವಣೆ ಸಮಯದಲ್ಲಿ ಮತದಾರರಿಗೆ ನೀಡಿದ ಗ್ಯಾರೆಂಟಿಗಳಿಗೆ ಹಣವನ್ನು ನೀಡುವ ಸಲುವಾಗಿ ಎಸ್.ಇ.ಪಿ. ಮತ್ತು ಟಿ.ಎಸ್.ಪಿ ಯೋಜನೆಯ ಹಣವನ್ನು ಪಡೆದು ದುರ್ಬಳಕೆಯನ್ನು ಮಾಡಿದೆ ಎಂದು ಬಿಜೆಪಿಯ ಪರಿಶಿಷ್ಟ ಪಂಗಡ ಘಟಕದ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು ಆರೋಪಿಸಿದ್ದಾರೆ.

Advertisement

ಚಳ್ಳಕೆರೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡದ ಮುನ್ನಡೆಯ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲೇಬೇಕು ಎಂಬ ದೃಷ್ಟಿಯಿಂದ ರಾಜ್ಯದ ಮತದಾರರಿಗೆ ವಿವಿಧ ರೀತಿಯ ಆಸೆ-ಆಮಿಷಗಳನ್ನು ನೀಡಿತು ಇದನ್ನು ನಂಬಿದ ಮತದಾರರು ಕಾಂಗ್ರೇಸ್‍ಗೆ ಮತವನ್ನು ಹಾಕುವುದರ ಮೂಲಕ ಅಧಿಕಾರವನ್ನು ನೀಡಿದರು. ಈಗ ಕಾಂಗ್ರೆಸ್ ಅಧಿಕಾರವನ್ನು ಹಿಡಿದು ಮತದಾರರಿಗೆ ನೀಡಿದ ಮಾತನ್ನು ಉಳಿಸುವ ಸಲುವಾಗಿ ವಿವಿಧ ಯೋಜನೆಗಳ ಹಣವನ್ನು ಪಡೆಯುವುದರ ಮೂಲಕ ಆ ಜನಾಂಗಕ್ಕೆ ಅನ್ಯಾಯವನ್ನು ಮಾಡುತ್ತಿದೆ ಇದು ನಮ್ಮ ನಾಯಕ ಜನಾಂಗಕ್ಕೂ ಸಹಾ ಆನ್ವಯಾಗುತ್ತಿದೆ, ನಮಗೂ ಸಹಾ ಕಾಂಗ್ರೆಸ್ ಪಕ್ಷ ಮೋಸಮಾಡುತ್ತಿದೆ ಎಂದು ತಿಳಿಸಿದರು.

ನಮ್ಮ ಜನಾಂಗಕ್ಕೆ ಮೀಸಲಾತಿಯನ್ನು ನೀಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ, ಆದರೆ ಇದರ ಬಗ್ಗೆ ಯಾವ ಸರ್ಕಾರವೂ ಸಹಾ ಗಮನ ನೀಡಿರಲಿಲ್ಲ ಅದರೆ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ನಮ್ಮ ಜನಾಂಗಕ್ಕೆ ಇದ್ದ ಶೇ.3ರ ಮೀಸಲಾತಿಯ ಪ್ರಮಾಣವನ್ನು ಶೇ7ಕ್ಕೆ ಹೆಚ್ಚಳ ಮಾಡುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಟ್ಟಿದೆ. ಸಂಘ ಪರಿವಾರದ ವಾದಿರಾಜು ರವರು ನಮ್ಮ ಜನಾಂಗದ ಮೇಲೆ ಆಪಾರವಾದ ಪ್ರೀತಿಯನ್ನು ಹೊಂದಿದ್ದಾರೆ ಇದರ ಪರಿಣಾಮವಾಗಿ ಸರ್ಕಾರ, ಸಮಾಜದ ಗುರುಗಳಿಗೆ ಹಾಗೂ ಎಸ್.ಸಿ.ಎಸ್.ಟಿ.ಗಳಿಗೆ ಸೇತುವೆ ರೀತಿಯಲ್ಲಿ ಕೆಲಸವನ್ನು ಮಾಡುವುದರ ಮೂಲಕ ಮೀಸಲಾತಿಯ ಪ್ರಮಾಣ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ನಮ್ಮ ಸಮುದಾಯ ಮೀಸಲಾತಿಯನ್ನು ಪಡೆಯುವಲ್ಲಿ ಅವರು ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ ಎಂದರು.

ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಆಡಳಿತವನ್ನು ನಡೆಸುತ್ತಿದೆ ಇದು ದರಿದ್ರ ಸರ್ಕಾರವಾಗಿದೆ. ಕೈ ಸರ್ಕಾರ ಖಾಲಿ ಸರ್ಕಾರವಾಗಿದೆ. ಹೆಸರಿಗೆ ಮಾತ್ರ ಕೈ ಸರ್ಕಾರವಾಗಿದೆ. ಆದರೆ ಬೋಕಸ ಖಾಲಿಯಾಗಿದೆ. ಎಸ್.ಸಿ.ಎಸ್.ಟಿ. ಅನುದಾನದ ಸುಮಾರು 11,134 ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಅನುದಾನವನ್ನು ರ್ದುಬಳಕೆ ಮಾಡಿಕೊಂಡಿದೆ. ಈಗ ನಾವುಗಳು ಒಗ್ಗಟಾಗಿ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನದಲ್ಲಿಯೂ ಸಹಾ ನಮ್ಮ ಪಾಲಿನ ಅನುದಾನವನ್ನು ರ್ದುಬಳಕೆ ಮಾಡಿಕೊಳ್ಳುವ ದಿನಗಳು ದೂರವಿಲ್ಲ, ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಇವರಿಗೆ ತಕ್ಕ ಪಾಠವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜ ಬಿಜೆಪಿಯೊಂದಿಗೆ ಕೈಜೋಡಿಸಿ ನರೇಂಧ್ರ ಮೋದಿಯವರನ್ನು ಮತ್ತೋಮ್ಮೆ ಪ್ರದಾನ ಮಂತ್ರಿಗಳನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುವುದರ ಮೂಲಕ ನಮ್ಮ ಪಾಲಿನ ಹಣವನ್ನು ಪಡೆಯಬೇಕಿದೆ.

 

ಕಳೆದ ವಿಧಾನಸಬಾ ಚುನಾವಣೆಯಲ್ಲಿ 15 ಪರಿಶಿಷ್ಟ ಪಂಗಡದ ಮೀಸಲಾತಿಯ ಕ್ಷೇತ್ರಗಳಲ್ಲಿ ಬಿಜೆಪಿ ಒಂದು ಕ್ಷೇತ್ರವನ್ನು ಸಹಾ ಗೆಲಲಿಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜೆಗಳನ್ನು ಸರಿಯಾದ ರೀತಿಯಲ್ಲಿ ಮತದಾರರಿಗೆ ತಲುಪಿಸುವ ಕಾರ್ಯವನ್ನು ಮಾಡದೇ ಇದ್ದ ಪರಿಣಾಮವಾಗಿ ನಾವುಗಳು ಸೋಲಬೇಕಾಯಿತು. ಹಾಗೇಯೇ ನಾವುಗಳು ಒಗ್ಗಟಾ ಇಲ್ಲದರ ಪರಿಣಾಮವಾಗಿ ಸೋಲಬೇಕಾಯಿತು. ನಾವು ಒಗ್ಗಟಾಗಬೇಕು ಇಲ್ಲಿ ಒಬ್ಬರನ್ನು ಒಬ್ಬರು ಕೈ-ಕಾಲು ಹಿಡಿದು ಎಳೆಯುವುದರಿಂದ ಉದ್ದಾರವಾಗುವುದಿಲ್ಲ, ರಾಜ್ಯಾಧ್ಯಕ್ಷನಾದ ಮೇಲೆ ಪ್ರವಾಸ ಮಾಡಿದಾಗ ನಮ್ಮ ಸಮಾಜದ ಬಗ್ಗೆ ಯಾರೂ ಸಹಾ ಚರ್ಚೆ ಮಾಡುತ್ತಿಲ್ಲ ಆವನು ಹೀಗೇ ಇವನು ಹಿಗೇ ಎಂದು ಒಬ್ಬರ ಮೇಲೆ ಒಬ್ಬರು ಚಾಡಿಯನ್ನು ಹೇಳುತ್ತಿದ್ದರೆ ಹೊರೆತು ಸಮಾಜವನ್ನು ಉದ್ದಾರ ಮಾಡಬೇಕೆಂದು ಯಾರು ಸಹಾ ಮುಂದೆ ಬಂದಿಲ್ಲ ಎಂದು ವಿಷಾಧಿಸಿದರು.

ಮಾಜಿ ಶಾಸಕರಾದ ನೇರ್ಲಗಂಟೆ ತಿಪ್ಪೇಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಿಜೆಪಿ ಸರ್ಕಾರ ಏನು ಮಾಡಿದೆ ಎಂಬುದನ್ನು ತಿಳಿಸುವ ಕಾರ್ಯ ಇದಾಗಿದೆ. ಈ ಜನಾಂಗವನ್ನು ಬರೀ ಚುನಾವಣೆಯಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ನಂತರ ಅವರನ್ನು ಬಿಡಲಾಗುತ್ತದೆ. ನಮ್ಮ ಸರ್ಕಾರ ಇವರಿಗಾಗಿ ಮಾಡಿದ ಕೆಲಸಗಳನ್ನು ತಿಳಿಸುವ ಕಾರ್ಯ ಇದಾಗಿದೆ. ಅಯೋಧ್ಯಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವುದರ ಮೂಲಕ ಜನತೆಯ ಭಕ್ತಿಯನ್ನು ಹೆಚ್ಚಿಸಿದ್ದಾರೆ. ರಾಷ್ಟ್ರಪತಿಗಳಾಗಿ ದ್ರೌಪತಿ ಮುರ್ಮ ಹಾಗೂ ಆಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆಯನ್ನು ತಿಳಿಸಲಾಗುವುದೆಂದರು.

ಈ ಪಕ್ಷದಲ್ಲಿ ಕಾಲೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ತಳ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೂ ಸಹಾ ಕಾಲೆಳೆಯುತ್ತಾರೆ. ಇದನ್ನು ಬಿಡಬೇಕು ಯಾರು ಬೇಕಾದರೂ ಬೆಳೆಯಲಿ ಎಂಬ ಮನೋಭಾವ ಇರಬೇಕಿದೆ. ಕಳೆದ 30 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿತು ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಸಹಾ ಇದರ ಬಗ್ಗೆ ಕೂಗಿ ಎತ್ತಲಾಗಿತ್ತಾರೆ ಅದು ಪ್ರಯೋಜನವಾಗಲಿಲ್ಲ, ಆದರೆ ಬಿಜೆಪಿ ಸರ್ಕಾರ ಇದ್ದಾಗ ಇದರ ಬಗ್ಗೆ ಗಮನ ನೀಡುವುದರ ಮೂಲಕ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಿದರು. ಇದನ್ನು ಮತದಾರರಿಗೆ ನಮ್ಮ ಸಮುದಾಯದವರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ಬಿಜೆಪಿ ಸರ್ಕಾರ ಮೀಸಲಾತಿಯನ್ನು ನೀಡಿದರು ಸಹಾ ವಿಧಾನಸಭಾ ಚುನಾವಣೆಯಲ್ಲಿ ಸೋಲಾಯಿತು, ಇದಕ್ಕೆ ನಮ್ಮವರೆ ಕಾರಣರಾಗಿದ್ದಾರೆ. ನಮ್ಮವರೆ ನಮ್ಮ ಕಾಲೆಳೆದಿದ್ದಾರೆ ಆಂತರಿಕದಿಂದ ಪಕ್ಷ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತೆಂದರು.

ರಾಜ್ಯದಲ್ಲಿ ನಮ್ಮ ಪಾಲಿನ ಹಣವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡು ಗ್ಯಾರೆಂಟಿಗಳಿಗೆ ನೀಡಿದ್ದಾರೆ ನಮ್ಮನ್ನು ಮೂಲೆ ಗುಂಪು ಮಾಡಿದ್ದಾರೆ. ಈಗಿನ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ, ಗೋಶಾಲೆಗಳನ್ನು ಇದುವರೆವಿಗೂ ತೆರೆದಿಲ್ಲ ಇರುವ ಕಡೆಯಲ್ಲಿ ಗೋವುಗಳಿಗೆ ಮೇವು ನೀರು ನೀಡಿಲ್ಲ ರೈತರ ಕಷ್ಟಗಳನ್ನು ಕೇಳುವವರಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಳ್ಳಾರಿ ಅಥವಾ ರಾಯಚೂರಿನಲ್ಲಿ ಟೀಕೇಟ್ ನೀಡಿದರೆ ಗೆದ್ದು ಬರುತ್ತೇವೆ ಪಕ್ಷ ಇದರ ಬಗ್ಗೆ ಪರೀಶೀಲನೆಯನ್ನು ನಡೆಸಬೇಕಿದೆ ಎಂದರು.

ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಎ.ಮುರಳಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಈ ಸಮುದಾಯಕ್ಕೆ ಉತ್ತಮವಾದ ಕೆಲಸವನ್ನು ಮಾಡಿದೆ ಇದೇ ರೀತಿ ಕೇಂದ್ರ ಸರ್ಕಾರವೂ ಸಹಾ ಮಾಡಿದೆ ಇದರ ಋಣವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತವನ್ನು ಹಾಕುವುದರ ಮೂಲಕ ಮತ್ತೋಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕಿದೆ, ಇದು ಸಮಾಜದ ಮೇಲೆ ಇರುವ ಋಣವಾಗಿದೆ. ಇದ್ದಲ್ಲದೆ ಕೇಂದ್ರ ಸರ್ಕಾರ ಈ ಸಮುದಾಯಕ್ಕೆ ಮಾಡಿದ ಕಾರ್ಯವನ್ನು ಪ್ರತಿಯೊಂದು ಗ್ರಾಮದ ಮತದಾರರಿಗೂ ತಿಳಿಸುವ ಕಾರ್ಯವನ್ನು ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕರ ಜನಸಂಖ್ಯೆ ಹೆಚ್ಚಾಗಿದೆ ಅಲ್ಲದೆ ಬಿಜೆಪಿ ಸರ್ಕಾರ ಇದ್ದಾಗ ಈ ಜನಾಂಗಕ್ಕೆ ನೀಡಿರುವ ವಿವಿಧ ರೀತಿಯ ಸೌಲಭ್ಯಗಳು ಹಾಗೂ ಕೇಂದ್ರ ಸರ್ಕಾರ ನೀಡಿದ ಸೌಲಭ್ಯಗಳನ್ನು ತಿಳಿಸುವ ಸಲುವಾಗಿ ಈ ಮುನ್ನಡೆ ಸಮಾವೇಶವನ್ನು ನಡೆಸುತ್ತಿರುವುದಾಗಿ ತಿಳಿಸಿದ ಅವರು ಪರಿಶಿಷ್ಟ ಪಂಗಡದಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ಇದಾಗಿದೆ ಇದು ಜಿಲ್ಲಾ ಮಟ್ಟದ ಸಮಾವೇಶ ಆಗಿರುವುದರಿಂದ ಪಂಚಾಯಿತಿಗೆ 25 ರಂತೆ ಪ್ರತಿ ತಾಲ್ಲೂಕಿನಿಂದ 200 ರಿಂದ 250 ಜನ ಆಯ್ದ ನಾಯಕರು ಮಾತ್ರ ಸಮಾವೇಶದಲ್ಲಿ ಭಾಗವಹಿಸಿದ್ದಾರೆ ಇವರು ಗ್ರಾಮಗಳಿಗೆ ಹೋಗಿ ಕೇಂದ್ರ ಸರ್ಕಾರದ ಸಾಧನೆಯನ್ನು ತಿಳಿಸುವ ಕಾರ್ಯವನ್ನು ಮಾಡಲಿ ಎಂದರು.

ಬಿಜೆಪಿ, ಜಿಲ್ಲಾಧ್ಯಕ್ಷ ಶಿವಣ್ಣ, ಪರಿಶಿಷ್ಟ ಘಟಕದ ಉಪಾಧ್ಯಕ್ಷ ಅನಿತ್, ಪ್ರಧಾನ ಕಾರ್ಯದರ್ಶಿ ರಾಮದಾಸ್, ವಾದಿರಾಜ್, ಶ್ರೀನಿವಾಸ್, ಜಯಪಾಲಯ್ಯ, ಓಬಳೇಶ್, ಸಂಪತ್ ದಗ್ಗೆ ಶಿವಪ್ರಕಾಶ್, ರಾಜೇಶ್ವರಿ, ಗೋಪಾಲಕೃಷ್ಣ, ಸೂರೇನಹಳ್ಳಿ ಶ್ರೀನಿವಾಸ್, ಅರುಣ್ ಕುಮಾರ್ ಗಂಗಾಧರ್, ವಿಜಯಕುಮಾರ್, ವೆಂಕಟೇಶ್, ಪಾಲಣ್ಣ, ಇತರರು ಭಾಗವಹಿಸಿದ್ದರು.

Advertisement
Tags :
bangaru HanumanbengaluruchitradurgaGovernmentsuddionesuddione newsಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article