ಕಾಂಗ್ರೆಸ್ ಅಭ್ಯರ್ಥಿ ಡಿ. ಟಿ. ಶ್ರೀನಿವಾಸ್ ಗೆ ಪ್ರಥಮ ಪ್ರಾಶಸ್ತ್ರದ ಮತ ನೀಡಿ : ರಾಮಚಂದ್ರಪ್ಪ ಮನವಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜೂ. 01 : ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ. ಟಿ. ಶ್ರೀನಿವಾಸ್ ಗೆ ಪ್ರಥಮ ಪ್ರಾಶಸ್ತ್ರದ ಮತ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್‍ರವರನ್ನು ಗೆಲ್ಲಿಸಲು ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕರಾದ ರಾಮಚಂದ್ರಪ್ಪ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಕಾಂತರಜ್ ವರದಿಯನ್ನು ಸ್ವೀಕಾರ ಮಾಡಿದ್ದಾರೆ ಮುಂದೆ ಅದನ್ನು ಅನುಷ್ಠಾನ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈಗಾಗಲೇ ಮೂರು ಚುನಾವಣೆಯನ್ನು ಜನತೆ ಎದುರಿಸುತ್ತಿದ್ದಾರೆ ಈ ಎಲ್ಲಾ ಚುನಾವಣೆಯಲ್ಲಿಯೂ ಸಹಾ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಉತ್ತಮ ಪರವಾಗಿ ಮತವನ್ನು ಚಲಾಯಿಸುವಂತೆ ಮನವಿ ಮಾಡಿತ್ತು. ಬಿಜೆಪಿ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು ಅದನ್ನು ಸರಿಪಡಿಸುವ ಕೆಲಸಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಬುದ್ದಿಜೀವಿಗಳಾದ ಶಿಕ್ಷಕರು ಹಾಗೂ ಉಪನ್ಯಾಸಕರು ಗಮನಿಸಿದ್ದಾರೆ ಸಿದ್ದರಾಮಯ್ಯನವgರು 7ನೇ ವೇತನ ಆಯೋಗದ ಜಾರಿ, ಎನ್ ಪಿ ಎಸ್ ನಿಂದ ಒ.ಪಿ.ಎಸ್ ಆದೇಶ ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು.
136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸಲು ವಿಧಾನ ಪರಿಷತ್ ನಲ್ಲಿ ಬಹುಮತ ಅಗತ್ಯವಾಗಿದ್ದು ಶಿಕ್ಷಕರು ಹಾಗೂ ಉಪನ್ಯಾಸಕರು ಕಾಂಗ್ರೆಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ರವರನ್ನು ಗೆಲ್ಲಿಸಲು ಮನವಿ ಮಾಡಿ ಮೂರು ಬಾರಿ ಆಯ್ಕೆ ಆಗಿರುವ ಬಿಜೆಪಿ ಅಭ್ಯರ್ಥಿ ಸಾಧನೆ ಶೂನ್ಯ. ಚುನಾವಣೆ ಸಂಧರ್ಭದಲ್ಲಿ ಬಂದು ಆಸೆ ಆಮಿಷಗಳನ್ನು ಒಡ್ಡಿ, ಕೊಡುಗೆಗಳನ್ನು ನೀಡಿ ಅವರು ಬರುವುದು ಮತ್ತೊಂದು ಚುನಾವಣೆಗೆ ಆದುದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಿ. ಟಿ. ಶ್ರೀನಿವಾಸ್ ರವರನ್ನು ಗೆಲ್ಲಿಸಿ ತಮ್ಮ ನೈಜ ಪ್ರತಿನಿಧಿಯನ್ನು ಹೊಂದಲು ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‍ಗೆ ಮತ ಚಲಾಯಿಸಿ ಎಂದರು.
ನಾವು ಯಾರ ಪರವಾಗಿಯೂ ನಿಲ್ಲುವುದಿಲ್ಲ ನಮ್ಮ ಹೋರಾಟ ನ್ಯಾಯದ ಪರವಾಗಿ ಇರುತ್ತದೆ ತಪ್ಪು ಮಾಡಿದವರು ಯಾರೇ ಆದರೂ ಸಹಾ ಅವರ ವಿರುದ್ದವಾಗಿಯೂ ಸಹಾ ನಮ್ಮ ಹೋರಾಟ ನಡೆಯುತ್ತದೆ, ಇಲ್ಲಿ ನಾವು ಕಾಂಗ್ರೆಸ್ ಪರ ಎನ್ನುವುದು ಸರಿಯಲ್ಲ, ನಾವು ನ್ಯಾಯದ ಪರವಾಗಿ ಇದ್ದೇವೆ ಎಂದು ರಾಮಚಂದ್ರಪ್ಪ ಸ್ಪಷ್ಟಪಡಿಸಿದರು.
ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕರಾದ ಆನಂತನಾಯ್ಕ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅನುಭವಿಗಳಾಗಿದ್ದು, ಕೆ ಎ ಎಸ್ ಆಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಶ್ರೀನಿವಾಸ್ ಅವರಿಗೆ ಶಿಕ್ಷಕರ ಸಮಸ್ಯೆಗಳ ಅರಿವು ಇದ್ದು ಅವರ ಒಳಿತುಗಾಗಿ ಶ್ರಮ ಪಡಲಿದ್ದಾರೆ ಎಂದು ಡಿ. ಬಸವರಾಜ್ ತಿಳಿಸಿದರು. ಬಿಜೆಪಿ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು. ಅದನ್ನು ಸರಿದಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ಪಠ್ಯವನ್ನು ಕೇಸರಿ ಮಯವಾಗಿಸಲು ಮುಂದಾಗಿತ್ತು ಪಠ್ಯದ ಗಂದವೇ ಇಲ್ಲದ ವ್ಯಕ್ತಿಯನ್ನು ಪಠ್ಯ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಪಠ್ಯದ ಕ್ರಮವನ್ನು ಹಾಳು ಮಾಡಿದ್ದರು. ಇದನ್ನು ಈಗ ಕಾಂಗ್ರೆಸ್ ಸರ್ಕಾರ ಸರಿಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಪಠ್ಯದಲ್ಲಿ ಹಲವಾರು ಉತ್ತಮವಾದ ಪಠ್ಯಗಳನ್ನು ತೆಗೆಯುವುದರ ಮೂಲಕ ಅದನ್ನು ಸಹಾ ಕೇಸರಿಕರಣ ಮಾಡಲು ಹೊರಟ್ಟಿತ್ತು ಅದನ್ನು ಈಗ ತಪ್ಪಿಸಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಸಮಾಜಿಕ ನ್ಯಾಯ ಸಿಗುತ್ತದೆ ಎಲ್ಲರನ್ನು ಸಹಾ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವೆಂಕಟರಾಮಯ್ಯ, ಆದರ್ಶ ಯಾದವ್, ರಾಮಕೃಷ್ಣ, ಎನ್,ಡಿ,ಕುಮಾರ್, ಮಂಜಪ್ಪ, ಸಿ.ಟಿ.ಕೃಷ್ಣಮೂರ್ತಿ, ರಘು, ಪ್ರಸನ್ನ, ಬಿ.ಟಿ.ಜಗದೀಶ್, ರಕ್ಷಿತಾ ಹಾಜರಿದ್ದರು.