Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

04:06 PM May 14, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಪ್ರಕಟ ಮಾಡಿದಂತೆ ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಗ್ರಾಮೀಣಾಭೀವೃದ್ದಿ ಬ್ಯಾಂಕ್, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಇತರೆ ಸಹಕಾರಿ ಸಂಘಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯನ್ನು ನೀಡುವಂತೆ ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಸಮಾಜಿಕ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಕುಮಾರ್, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ಕಾಯ್ದೆಗೆ ಅನುಗುಣವಾಗಿ ಜಿ.ಪಂ.ತಾ.ಪಂ.ಗ್ರಾ.ಪಂಯಲ್ಲಿ ಪ.ಜಾತಿ.ಪ.ಪಂಗಡ ಮಹಿಳೆ ಬಿಸಿಎಂ(ಎ) ಬಿಸಿಎಂ(ಬಿ) ಜಾತಿಗಳಿಗೆ ಮೀಸಲಾತಿಯನು ಹೊಂದಿರುತ್ತದೆ. ಇದೇ ರೀತಿಯಾಗಿ ಸಹಕಾರ ಸಂಘಗಳಿಗೂ ಸಹಾ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೂ ಸಹಾ ಮೀಸಲಾತಿಯನ್ನು ಪ್ರಕಟಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಹಕಾರ ಇಲಾಖೆಯ ಅಧೀನಕ್ಕೆ ಒಳಪಡುವ ಪ್ರಾಥಮಿಕ ಕೃಷಿ ಗ್ರಾಮೀಣಾಭಿವೃದ್ದಿ ಬ್ಯಾಂಕ್ ಹಾಲು ಉತ್ಪಾದಕರ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆ ಸಂಘ ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಕರ್ನಾಟಕ ಬೀಜ ನಿಗಮ, ಕರ್ನಾಟಕ ಹಾಲು ಮಂಡಳಿ ಟಿ.ಎ.ಪಿ.ಎಂ.ಸಿ. ಸೇರಿದಂತೆ ಇತರೆ ಸಹಕಾರ ಸಂಘಗಳಲ್ಲಿ ಮೀಸಲಾತಿಯನ್ನು ಹೊಂದಿರುವುದಿಲ್ಲ, ಈಗಾಗಲೇ ಸ್ವತಂತ್ರ ಬಂದು 75 ವರ್ಷಗಳಾದರು ಇಲ್ಲಿಯವರೆಗೂ ಶೋಷಿತ ವರ್ಗಗಳಾದ ಪ.ಜಾತಿ.ಪಂಗಡ ಮಹಿಳೆ, ಬಿಸಿಎಂ.(ಎ)ಬಿಸಿಎಂ(ಬಿ) ಜಾತಿಗಳಿಗೆ ಮೀಸಲಾತಿ ದೊರಕಿಲ್ಲ ಆದ್ದರಿಂದ ಈ ಜಾತಿಗಳಿಗೆ ಮೀಸಲಾತಿಯನ್ನು ಕೊಡುವಂತೆ ಮನವಿ ಮಾಡಿದ್ದಾರೆ.

ಸಹಕಾರ ಇಲಾಖೆಯ ಅಧೀನಕ್ಕೆ ಒಳಪಡುವ ಈ ಬ್ಯಾಂಕ್‍ಗಳಲ್ಲಿ ಇದುವರೆವಿಗೂ ಒಂದು ವರ್ಗ ಮಾತ್ರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಕೊಂಡು ಬಂದಿದೆ ಇದರಿಂದ ಬೇರೆ ಜನಾಂಗದವರಿಗೆ ಅನ್ಯಾಯವಾಗಿದೆ ಅಲ್ಲದೆ ಸರ್ಕಾರದ ವಿವಿಧ ರೀತಿಒಯ ಸೌಲಭ್ಯಗಳು ಸಿಗುವಲ್ಲಿಯೂ ಸಹಾ ಹಿಂದೆ ಬೀಳಲಾಗಿದೆ ಈ ಜನಾಂಗದವರು ಯಾರು ಪ್ರತಿನಿಧಿ ಇಲ್ಲದಿರುವುದರಿಂದ ಇವರನ್ನು ಕೇಳುವವರಿಲ್ಲ, ಇಲ್ಲಿ ಚುನಾವಣೆಗಳು ಸಹಾ ಪ್ರಜಾಪ್ರಭುತ್ವದಡಿಯಲ್ಲಿ ನಡೆಯುವುದರಿಂದ ಈ ಹಿನ್ನಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ನೀಡುವುದರು ಮೂಲಕ ನ್ಯಾಯವನ್ನು ನೀಡಬೇಕಿದೆ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗ ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ರಚನೆ ಮಾಡಬೇಕು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮಹಿಳಾ ಸದಸ್ಯರಿಗೆ ರೂ.1 ಲಕ್ಷಗಳನ್ನು ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸಮಾಜಿಕ ಸಂಘರ್ಷ ಸಮಿತಿಯ ಗೌರವಾಧ್ಯಕ್ಷರಾದ ದುರುಗೇಶಪ್ಪ ಮಾತನಾಡಿ ಸಹಕಾರ ಇಲಾಖೆಯ ಅಧೀನಕ್ಕೆ ಒಳಪಡುವ ಈ ಬ್ಯಾಂಕ್‍ಗಳಲ್ಲಿ ಮೀಸಲಾತಿಯನ್ನು ನೀಡುವ ಸಂಬಂಧ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವನ್ನು ಶೀಘ್ರದಲ್ಲಿ ಭೇಟಿ ಮಾಡುವುದರ ಮೂಲಕ ನಮ್ಮ ಒತ್ತಾಯವನ್ನು ಮಾಡಲಾಗುವುದು ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಮುಂದಿನ  ಹೋರಾಟವನ್ನು ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿನ ಆರು ತಾಲ್ಲೂಕುಗಳಲ್ಲಿ ಕೃಷಿ ಸಾಲವನ್ನು ವಿತರಣೆ ಮಾಡಿದ್ದು, ಜಿಲ್ಲೆಗೆ 890 ಕೋಟಿ ರೂ.ಗಳನ್ನು ನಿಗಧಿ ಮಾಡಲಾಗಿದ್ದು ಇದರಲ್ಲಿ 767.03 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 598.31 ಕೋಟಿ, ಎಸ್.ಸಿ.ಗೆ 115.90 ಕೋಟಿ ಎಸ್.ಟಿ.ಗೆ 52.82 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದೆ. ಹಾಗೇಯೇ ಸಾಮಾನ್ಯ ವರ್ಗದಲ್ಲಿ 77.20 ಕೋಟಿ, ಎಸ್.ಸಿ.ಯಲ್ಲಿ 30.95 ಕೋಟಿ, ಎಸ್.ಟಿ.ಯಲ್ಲಿ 14.82 ಕೋಟಿ ಸೇರಿದಂತೆ ಒಟ್ಟು 122.97 ಕೋಟಿ ರೂ.ಗಳ ಕೃಷಿ ಸಾಲವನ್ನು ವಿತರಣೆ ಮಾಡಬೇಕಿದೆ ಎಂದರು.
ಗೋಷ್ಟಿಯಲ್ಲಿ ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿಯ ಕಾರ್ಯದರ್ಶಿ ಚಿಕ್ಕಣ್ಣ, ಜಿಲ್ಲಾ ಸಂಚಾಲಕ ಪ್ರಹ್ಲಾದ್, ಖಂಜಾಚಿ ರಾಮಲಿಂಗಪ್ಪ ಉಪಸ್ಥಿತರಿದ್ದರು.

Advertisement
Tags :
bengaluruchitradurgaCo-operative societiescommitteepostsPresidentReservationsuddionesuddione newsurgesvice Presidentಅಧ್ಯಕ್ಷಉಪಾಧ್ಯಕ್ಷಒತ್ತಾಯಚಿತ್ರದುರ್ಗಬೆಂಗಳೂರುಮೀಸಲಾತಿರಾಜ್ಯ ಸಾಮಾಜಿಕ ಸಂಘರ್ಷ ಸಮಿತಿಸಹಕಾರಿ ಸಂಘಸುದ್ದಿಒನ್ಸುದ್ದಿಒನ್ ನ್ಯೂಸ್ಹುದ್ದೆ
Advertisement
Next Article