Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕುಂಚಿಗನಹಾಳ್ ಬಳಿ ತ್ಯಾಜ್ಯಕ್ಕೆ ಬೆಂಕಿ, ಕೆಟ್ಟ ವಾಸನೆಯ ದಟ್ಟ ಹೊಗೆ : ಸ್ಥಳೀಯರಲ್ಲಿ ಆತಂಕ

04:13 PM Jan 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 01 : ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ಇದರಿಂದಾಗಿ ಕೆಟ್ಟ ವಾಸನೆಯ ದಟ್ಟ ಹೊಗೆ ವ್ಯಾಪಿಸಿ ವಾಹನ ಸವಾರರು ಸ್ವಲ್ಪ ಕಾಲ ಪರದಾಡುವಂತಾಯಿತು.

Advertisement

ತಾಲ್ಲೂಕಿನ ಕುಂಚಿಗನಹಾಳ್ ಗ್ರಾಮದ ರಸ್ತೆಯ ಪಕ್ಕದ ಕೈಗಾರಿಕಾ ಪ್ರದೇಶದ ಬಳಿ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯಲಾಗಿದೆ. ಈ ತ್ಯಾಜ್ಯಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಬೆಂಕಿಯ ತೀವ್ರತೆ ಹೆಚ್ಚಾಗಿ ದಟ್ಟ ಹೊಗೆ ಆವರಿಸಿ ವಾಹನ ಸವಾರರು ಪರದಾಡಬೇಕಾಯಿತು. ಇದರ ಜೊತೆ ಕೆಮಿಕಲ್  ಪ್ಲೈವುಡ್ ಕಂಪನಿ ತ್ಯಾಜ್ಯವನ್ನು ತಂದು ಇದೇ ರಸ್ತೆಯ ಪಕ್ಕ ಎಸೆಯಲಾಗಿದೆ.

ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ದಟ್ಟ ಹೊಗೆ ಆವರಿಸಿದೆ. ಇನ್ನು ದಟ್ಟ ಹೊಗೆಗೆ ಈ ಮಾರ್ಗದ ಮೂಲಕ ಸಾಗಲು ವಾಹನ ಸವಾರರು ಪರದಾಡಬೇಕಾಯಿತು. ಇನ್ನು ಪಕ್ಕದಲ್ಲೇ ವಿದ್ಯುತ್ ಸರಬರಾಜು ಯೂನಿಟ್ ಹಾಗೂ ರೈತರ ಜಮೀನು ಕೂಡ ಇದ್ದು, ಅನಾಹುತ ಆದ್ರೆ ಯಾರು ಹೊಣೆ ಎಂದು ಘಟನೆಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement
Tags :
chitradurgafoul smellingGarbage fireKunchiganahalಕುಂಚಿಗನಹಾಳ್ಚಿತ್ರದುರ್ಗತ್ಯಾಜ್ಯಕ್ಕೆ ಬೆಂಕಿಸ್ಥಳೀಯರಲ್ಲಿ ಆತಂಕ
Advertisement
Next Article