For the best experience, open
https://m.suddione.com
on your mobile browser.
Advertisement

ಗಾಣಿಗ ಸಮಾಜಕ್ಕೂ ಮೀಸಲಾತಿ ಅಗತ್ಯ : ಜಯಬಸವಕುಮಾರ್ ಶ್ರೀಗಳು

02:48 PM Feb 09, 2024 IST | suddionenews
ಗಾಣಿಗ ಸಮಾಜಕ್ಕೂ ಮೀಸಲಾತಿ ಅಗತ್ಯ   ಜಯಬಸವಕುಮಾರ್ ಶ್ರೀಗಳು
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಫೆ. 09 :  ಸರ್ಕಾರ ಕಾಯಕ ಸಮಾಜಕ್ಕೆ ಮೀಸಲಾತಿಯನ್ನು ನೀಡುವ ಸಂಬಂಧ ಇರುವ ತೊಂದರೆಯನ್ನು ಬಗೆಹರಿಸಿ ಈ ಸಮಾಜಕ್ಕೆ ಮೀಸಲಾತಿಯನ್ನು ನೀಡಬೇಕಿದೆ ಎಂದು ವಿಜಯಪುರದ ವನಶ್ರೀ ಸಂಸ್ಥಾನದ ಗಾಣಿಗ ಸಮಾಜದ ಶ್ರೀ ಜಯಬಸವಕುಮಾರ್ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಜಿಲ್ಲಾ ಅಖಿಲ ಭಾರತ ಗಾಣಿಗ ಸಮಾಜ, ಚಿತ್ರದುರ್ಗ ತಾಲ್ಲೂಕು ಗಾಣಿಗ ಸಮಾಜ ಹಾಗೂ ಗಾಣಿಗ ಮಹಿಳಾ ಸಮಾಜ ಚಿತ್ರದುರ್ಗ ತಾಲ್ಲೂಕು ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.


ಲಿಂಗಾಯತ ಸಮಾಜದಲ್ಲಿ ವಿವಿಧ ರೀತಿಯ ಉಪ ಸಮಾಜಗಳಿವೆ ಇದರಲ್ಲೂ ಸಹಾ ಬಡ ಜನತೆ ಇದ್ದಾರೆ ಇವರ ಆರ್ಥಿಕ ಪರಿಸ್ಥಿತಿ ಅಷ್ಠಾಗಿ ಸರಿ ಇಲ್ಲ. ಶೈಕ್ಷಣಿಕವಾಗಿಯೂ ಸಹಾ ಹಿಂದುಳಿದಿದ್ದಾರೆ, ಅವರು ಸಹಾ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕಿದೆ. ಇದಕ್ಕೆ ಮೀಸಲಾತಿ ಅತಿ ಅಗತ್ಯವಾಗಿದೆ ಎಂದ ಶ್ರೀಗಳು, ಚರಿತ್ರೆಯನ್ನು ಬೇರೆಯವರಿಂದ ಬರೆಸಬಹುದು ಆದರೆ ಚಾರಿತ್ರ್ಯವನ್ನು ನಾವೇ ಬರೆಬೇಕಿದೆ. ಗಾಣಿಗ ಸಮಾಜಕ್ಕೆ ಚರಿತ್ರೆ ಹಾಗೂ ಚಾರಿತ್ರ್ಯ ಎರಡು ಸಹಾ ಇದೆ. ನಮ್ಮದು ಕಾಯಕ ಸಮಾಜ ದುಡಿದು ತಿನ್ನುವ ಶ್ರಮಿಕ ಜನಾಂಗವದರು, ಅನುಭವ ಮಂಟಪದಲ್ಲಿ ಎಲ್ಲಾ ಶರಣರು ತಮ್ಮ ಪಾಲಿನ ಕಾಯಕವನ್ನು ಮುಗಿಸಿ ತದ ನಂತರ ಅನುಭವ ಮಂಟಪದಲ್ಲಿ ಬೆಳಿಗ್ಗಿನಿಂದ ಸಂಜೆಯವರೆಗೆ ಆದ ಅನುಭವನ್ನು ಹಂಚಿಕೊಳ್ಳುತ್ತಿದ್ದರು ಎಂದರು.


ಹಿಂದಿನ  ಕಾಲದಲ್ಲಿ ವೃತ್ತಿಗಳಿದ್ದವು ಅದರ ಮೂಲಕ ಜನತೆಯನ್ನು ಗುರುತಿಸಲಾಗುತ್ತಿತು ಆದರೆ ಈಗ ಅದೇ ವೃತ್ತಿಗಳು ಜಾತಿಗಳಾಗಿವೆ. ಈಗ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡುವುದು ಅನಿವಾರ್ಯವಾಗಿದೆ. ಎಲ್ಲಯೂ ಸಹಾ ನಮ್ಮ ಜಾತಿಯನ್ನು ಹೇಳಿಕೊಂಡು ವ್ಯವಹಾರವನ್ನು ಮಾಡಿಲ್ಲ ಸಂಬಂಧವನ್ನು ಸಹಾ ಬೆಳಸಿಲ್ಲ, ಇದರ ಬದಲಾಗಿ ಗಾಣದ ಎತ್ತಿನಂತೆ ತಿರುಗಾಡಿ ದೇವರ ಮನೆ ದೀಪಕ್ಕೂ ಊಟಕ್ಕೂ ಸಹಾ ಎಣ್ಣೆಯನ್ನು ನೀಡಲಾಗುತ್ತಿದೆ. ಒದನ್ನು ನಂಬಿದರೆ ಅದನ್ನು ಪೂರೈಸುವುದು ನಮ್ಮ ಸಮಾಜ, ನಮ್ಮ ಸಮಾಜದವರ ತಾವು ಬೆಳೆಯುವುದಕ್ಕಿಂತ ಬೇರೆಯವರನ್ನು ಹೆಚ್ಚಾಗಿ ಬೆಳಸುತ್ತಾರೆ. ನಮ್ಮ ಸಮುದಾಯದಲ್ಲಿಯೂ ಸಹಾ ಬಡವರಿದ್ದಾರೆ. ಅರ್ಥಿಕವಾಗಿ ಶೈಕ್ಷಣಿಕವಾಗಿ ಸಮಾಜಿಕವಾಗಿ ಹಿಂದೆ ಉಳಿದಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕಿದೆ ಇದಕ್ಕೆ ಮೀಸಲಾತಿ ಅಗತ್ಯವಾಗಿದೆ. ಈ ಮೀಸಲಾತಿಯನ್ನು ನೀಡಲು ಇರುವ ತಾತ್ವಿಕ ತೊಡಕನ್ನು ಸರ್ಕಾರ ನಿವಾರಣೆ ಮಾಡುವುದರ ಮೂಲಕ ನಿಜವಾದ ಕಾಯಕ ಸಮಾಜಗಳಿಗೆ ಮೀಸಲಾತಿಯನ್ನು ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ ಶ್ರೀಗಳು. ಈಗ ಜಾತಿಯ ಸಮೀಕ್ಷೆ ನಡೆದಿದೆ ಅದನ್ನು ಸರ್ಕಾರ ತರಿಸಿಕೊಂಡು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡುವ ಕಾರ್ಯವನ್ನು ಮಾಡಲು ಸರ್ಕಾರ ಮುಂದಾಗಬೇಕೆಂದು ತಿಳಿಸಿದರು.

ನಮ್ಮ ಸಮಾಜದವರನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಿಗೆ ಸದಸ್ಯರನ್ನಾಗಿ ನೇಮಕವನ್ನು ಮಾಡುವಲ್ಲಿ ನಾಗರಾಜು ಮುತುವರ್ಜಿಯನ್ನು ವಹಿಸಬೇಕಿದೆ. ಇದ್ದಲ್ಲದೆ ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡುವುದರ ಮೂಲಕ ಮಹಿಳೆಯರಿಗೆ ಸ್ವಾವಲಂಭಿಯ ಬದುಕನ್ನು ರೂಪಿಸಿ, ಬ್ಯಾಂಕ್ ಸ್ಥಾಪನೆಯಲ್ಲಿ ಎಲ್ಲರು ಸಹಾ ಪಾತ್ರವನ್ನು ವಹಿಸಬೇಕಿದೆ. ಇದರಿಂದ ನಮ್ಮ ಸಮಾಜದ ಶಕ್ತಿ ಹೆಚ್ಚಾಗಲಿದೆ. ನಾವು ಬೆಳೆಯಬೇಕು ಸಮಾಜವನ್ನು ಸಹಾ ಬೆಳೆಸಬೇಕಿದೆ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಬೇಕಿದೆ ಎಂದರು.

ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಶೈವ ಸಮಾಜದ ಉಪಾಧ್ಯಕ್ಷರಾದ ಕೆ.ಸಿ.ನಾಗರಾಜ್ ಮಾತನಾಡಿ, ಸಮಾಜದ ಏಳ್ಗೆಗಾಗಿ ಎಲ್ಲರು ಒಗ್ಗಟಾಗಬೇಕಿದೆ. ನಮ್ಮ ಸಮಾಜಕ್ಕೆ ಅಗತ್ಯವಾಗಿ ಕಟ್ಟಡವಾಗಬೇಕಿದೆ. ಇದಕ್ಕೆ ಸಮಾಜದವರು ನಗರಸಭೆಗೆ ನಿವೇಶನಕ್ಕೆ ಅರ್ಜಿಯನ್ನು ಹಾಕಿ ನಾನು ಸಹಾಯ ಮಾಡುತ್ತೇನೆ, ನಮ್ಮ ಸಮಾಜಕ್ಕೆ ರಾಜ್ಯದ ಬೇರೆ ಕಡೆಯಲ್ಲಿ 2ಎ ಪ್ರಮಾಣ ಪತ್ರವನ್ನು ನೀಡುತ್ತಾರೆ ಆದರೆ ಚಿತ್ರದುರ್ಗದಲ್ಲಿ ನೀಡುತ್ತಿಲ್ಲ, ಇದರ ಬಗ್ಗೆ ಸರ್ಕಾರದ ಬಳಿ ಚರ್ಚೆ ಮಾಡಬೇಕಿದೆ.

ಪ್ರಮಾಣಪತ್ರ ಸಿಕ್ಕರೆ ಸಮಾಜದವರಿಗೆ ಅನುಕೂಲವಾಗುತ್ತದೆ. ಸಮಾಜಕ್ಕೆ ಮುಂಚೆ ಸದಸ್ಯರಾಗಿ ನಮ್ಮ ಸಂಘಟನೆಯನ್ನು ಬಲ ಪಡಿಸಿದಾಗ ಸರ್ಕಾರದ ಮಟ್ಟದಲ್ಲಿ ಏನು ಬೇಕಾದರೂ ಕೇಳಬಹುದು, ನಮ್ಮ ಸಮಾಜದ್ದೇ ಆದ ಬ್ಯಾಂಕ್ ನಿರ್ಮಾಣಕ್ಕೆ ಎಲ್ಲರು ಮುಂದಾಗಬೇಕಿದೆ. ಇದಕ್ಕೆ ನಾನು ಸಹಾ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ನೀಡಿ ಚಿತ್ರದುರ್ಗದಲ್ಲಿ ಎಲ್ಲಿಯೂ ಸಹಾ ಬಸವೇಶ್ವರರ ಪುತ್ತಳಿ ಇಲ್ಲ ಇದನ್ನು ಸ್ಥಾಪನೆ ಮಾಡಲು ಎಲ್ಲರು ಮುಂದಾಗಬೇಕು ಇದೇ ರೀತಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಸಹಾ ಬಸವೇಶ್ವರ ಪುತ್ತಳಿ ಸ್ಥಾಪನೆ ಮಾಡಲು ಸಮಾಜದ ಮುಖಂಡರು ಮುಂದಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಅಖಿಲ ಭಾರತ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಡಿಎಸ್.ಸುರೇಶಬಾಬು ಮಾತನಾಡಿ, ನಮ್ಮ ಸಮಾಜದಲ್ಲಿ ಹೊಳಲ್ಕೆರೆ ರಸ್ತೆಯಲ್ಲಿ ನಮ್ಮ ಸಮಾಜದ ಜಾಗ ಇದೇ ಅದರಲ್ಲಿ ಸಮುದಾಯಭವನ ನಿರ್ಮಾಣ ಮಾಡಲು ಸಮಾಜದ ಬಾಂಧವರು ಮುಂದಾಗಬೇಕಿದೆ ನಮ್ಮಲ್ಲಿ ಒಗ್ಗಟಿನ ಕೂರತೆ ಇದೆ. ಅದನ್ನು ಸರಿಪಡಿಸಿಕೊಳ್ಳಬೇಕಿದೆ ಎಲ್ಲರು ಒಗ್ಗಟಾಗಬೇಕಿದೆ. ಒಗ್ಗಟಾಗಿ ಇದ್ದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ. ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವುದರ ಮೂಲಕ ಜ್ಞಾನ ದಾನವನ್ನು ಮಾಡುತ್ತಿದ್ದಾರೆ. ಇದೇ ರೀತಿ ಚಿತ್ರದುರ್ಗದಲ್ಲಿಯೂ ಸಹಾ ಶಾಲೆಯನ್ನು ನಿರ್ಮಾಣ ಮಾಡುವುದಾದರೆ ಸಹಾಯವನ್ನು ಮಾಡಲಾಗುವುದು ನಮ್ಮ ಸಮಾಜವನ್ನು 2ಎಗೆ ಸೇರಿಸಲು ಎಲ್ಲರು ಒಗ್ಗಟಾಗಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದವರಾದ ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವಿರೇಂದ್ರಕುಮಾರ್, ನಿರ್ದೇಶಕರಾದ ಶ್ರೀಮತಿ ಕೆ.ಸಿ.ವೀಣಾಸುರೇಶ್, ಶ್ರೀಮತಿ ತ್ರಿವೇಣಿಪ್ರಸನ್ನಕುಮಾರ್, ಸರ್ಕಾರಿ ವಿಜ್ಞಾನ ಕಾಲೇಜಿನ ಅಭೀವೃದ್ದಿ ಸಮಿತಿಯ ಸದಸ್ಯರಾದ ಶ್ರೀಮತಿ ಸಿ.ಬಿ.ಶೈಲಾವಿಜಯಕುಮಾರ್, ಎಸ್.ಸಿ.ವರದಶಂಕರ್ ಹಾಗೂ ಸಾವಿತ್ರಿ ಬಾಯಿ ಪುಲೆ ಪ್ರಶಸ್ತ್ರಿ ಪುರಸ್ಕøತರಾದ ಶಿಕ್ಷಕಿ ಶ್ರೀಮತಿಲತಾರವರನ್ನು ಸಮಾಜದವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗಾಣಿಗ ಮಹಿಳಾ ಸಮಾಜ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಪುಷ್ಟ ಸುರೇಶಬಾಬು ಉಪಸ್ಥಿತರಿದ್ದರು, ಶ್ರೀಮತಿ ಶೋಭಾ ಮಂಜುನಾಥ್ ಪ್ರಾರ್ಥಿಸಿದರೆ, ಚಿತ್ರದುರ್ಗ ತಾಲ್ಲೂಕು ಗಾಣಿಗ ಸಮಾಜದ ಅಧ್ಯಕ್ಷರಾದ ಎ.ಆರ್.ತಿಪ್ಪೇಸ್ವಾಮಿ ಸ್ವಾಗತಿಸಿದರು, ಶ್ರೀಮತಿ ಜಯಲಕ್ಷ್ಮೀ ವಂದಿಸಿದರೆ, ಜ್ಞಾನಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Advertisement