For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಗಣೇಶ ಚತುರ್ಥಿ : ಗಮನ ಸೆಳೆದ ವೈವಿಧ್ಯಮಯ ಮೂರ್ತಿಗಳು

05:21 PM Sep 09, 2024 IST | suddionenews
ಚಿತ್ರದುರ್ಗದಲ್ಲಿ ಗಣೇಶ ಚತುರ್ಥಿ   ಗಮನ ಸೆಳೆದ ವೈವಿಧ್ಯಮಯ ಮೂರ್ತಿಗಳು
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ವಿಘ್ನಗಳ ನಿವಾರಕ ವಿನಾಯಕ ಚತುರ್ಥಿ ಪ್ರಯುಕ್ತ ನಗರದ ವಿವಿಧೆಡೆ ಬಗೆ ಬಗೆಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತಿದೆ.

ಬಸವೇಶ್ವರ ನಗರದ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ವಸತಿಗೃಹಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇಲ್ಲಿನ ಎಲ್ಲಾ ವಸತಿಗೃಹಗಳ ನಿವಾಸಿಗಳು ಒಂದೇ ಕುಟುಂಬದವರಂತೆ ಒಂದುಗೂಡಿ ಪ್ರತಿವರ್ಷವೂ ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ಈ ಹಬ್ಬದ ಸಂದರ್ಭದಲ್ಲಿ ಮಕ್ಕಳು ಅತ್ಯಂತ ಸಡಗರ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುವುದು ಇಲ್ಲಿನ ವಿಶೇಷ.


ಜೋಗಿಮಟ್ಟಿ ರಸ್ತೆಯಲ್ಲಿರುವ ಫ್ರೆಂಡ್ಸ್ ಗಣಪತಿ ಒಂದು ಕೈಯಲ್ಲಿ ಚಕ್ರ ಹಾಗೂ ಮತ್ತೊಂದು ಕೈಯಲ್ಲಿ ಶಂಖು ಹಿಡಿದು ಭಕ್ತರ ಗಮನ ಸೆಳೆಯುತ್ತಿದೆ. ಕರುವಿನಕಟ್ಟೆ ವೃತ್ತದಲ್ಲಿ ಮಹಾರಾಜ್ ಗಣಪ ಭಕ್ತರನ್ನು ಆಕರ್ಷಿಸುತ್ತಿದೆ. ಹೊಳಲ್ಕೆರೆ ರಸ್ತೆಯಲ್ಲಿ ಸ್ನೇಹ ಜೀವಿ ಬಳಗದಿಂದ ಪ್ರತಿಷ್ಠಾಪನೆಗೊಂಡಿರುವ ಗಣಪತಿ ಕೈಯಲ್ಲಿ ಕತ್ತಿ ಹಿಡಿದು ರಾರಾಜಿಸುತ್ತಿದೆ. ಮತ್ತೊಂದು ಗಣಪ ತಲೆಗೆ ಪೇಟ ಸುತ್ತಿಕೊಂಡು ವಿರಾಜಮಾನವಾಗಿರುವುದು ಮತ್ತೊಂದು ವಿಶೇಷ.


ನಗರದೆಲ್ಲೆಡೆ ಅಲ್ಲಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣೇಶ ಮೂರ್ತಿಗೆ ದಿನವೂ ಒಂದೊಂದು ಬಗೆಯ ಪ್ರಸಾದದ ನೈವೇದ್ಯವಿರಿಸಿ ಪೂಜಿಸಲಾಗುತ್ತಿದೆ.

ವಿಶ್ವಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗರುಡಾವಳಿ ಗಣಪನನ್ನು ಕಣ್ತುಂಬಿಕೊಳ್ಳಲು ದಿನವೂ ಬೆಳಗಿನಿಂದ ಸಂಜೆಯತನಕ ಸಾವಿರಾರು ಭಕ್ತರು ಧಾವಿಸುತ್ತಿದ್ದಾರೆ. ಅಲ್ಲಲ್ಲಿ ಭಜನೆ, ಸುಗಮ ಸಂಗೀತ, ಜಾನಪದ ನೃತ್ಯಗಳು ಮೇಳೈಸುತ್ತಿವೆ.

Tags :
Advertisement