For the best experience, open
https://m.suddione.com
on your mobile browser.
Advertisement

ಈ ಪೋತಪ್ಪನಿಗೆ ಹೆದರಿ ಸುಮ್ಮನಿರಲು ಆಗಲ್ಲ : ಚಂದ್ರಪ್ಪ ವಿರುದ್ಧ ಸಿಡಿದೆದ್ದ ತಿಪ್ಪಾರೆಡ್ಡಿ

02:16 PM Mar 30, 2024 IST | suddionenews
ಈ ಪೋತಪ್ಪನಿಗೆ ಹೆದರಿ ಸುಮ್ಮನಿರಲು ಆಗಲ್ಲ   ಚಂದ್ರಪ್ಪ ವಿರುದ್ಧ ಸಿಡಿದೆದ್ದ ತಿಪ್ಪಾರೆಡ್ಡಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಮಾ. 30 : ನಾನು ಶಾಸಕನಾದಾಗ ಅವನು ಚಳ್ಳಕೆರೆಯಲ್ಲಿ ನಿಕ್ಕರ್ ಹಾಕಿಕೊಳ್ಳುತ್ತಿದ್ದನೋ ಇಲ್ಲವೋ ಗೊತ್ತಿಲ್ಲ, ನಾನು ಅವನಿಗಿಂತ ವಯಸ್ಸಿನಲ್ಲಿ ಹಿರಿಯನು, ನಾನು ಪಕ್ಷದ ವಿವಿಧ ಹುದ್ದಗಳಲ್ಲಿ ಕೆಲಸ ಮಾಡಿದ್ದೇನೆ ಇಡೀ ಜಿಲ್ಲೆಯ ಪ್ರತಿ ಪ್ರದೇಶದ ಚಿತ್ರಣ ನನಗೆ ಗೊತ್ತಿದೆ ವರಿಷ್ಠರು ಮಾಹಿತಿ ಕೇಳಿದಾಗ ನನ್ನ ಅಭಿಪ್ರಾಯ ಹೇಳಿದ್ದೇನೆ. ಈ ಪೋತಪ್ಪ ನಾಯಕನಿಗೆ ಹೆದರಿ ಸುಮ್ಮನಿರಲು ಆಗಲ್ಲ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

Advertisement
Advertisement

ಚಿತ್ರದುರ್ಗ ನಗರದ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಬಿ.ಎಸ್. ವೈಗಿಂತ ದೊಡ್ಡ ವ್ಯಕ್ತಿ ನಿನ್ನೆ ಬೆಂಬಲಿಗರ ಸಭೆ ನಡೆಸಿದ್ದಾರೆ. ಬಿಎಸ್ ವೈ ಹಾಗೂ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ಇನ್ನು ಮುಂದೆ ನಾನು ಅವನ ಬಗ್ಗೆ ಏಕವಚನದಲ್ಲಿ ಮಾತಾಡುತ್ತೇನೆ ಬಿಎಸ್ ವೈ, ವಿಜಯೇಂದ್ರ ಭೇಟಿಯಾಗಿ ಸುಮಾರು ದಿನಗಳೇ ಆಗಿವೆ. ಈ ಹಿಂದೆ ವಿಜಯೇಂದ್ರ ಭೇಟಿಯಾದಾಗ ಈ ಮಹಾ ನಾಯಕನು ಇದ್ದನು ಅವನ ಮಗನಿಗೆ ಟಿಕೆಟ್ ತಪ್ಪಿಸಲು ಅವನೇನು ದೊಡ್ಡ ಲೀಡರ್ ಅಲ್ಲ. ಕೋಲಾರದಲ್ಲಿ ಜೆಡಿಎಸ್ ಜತೆ ನಮ್ಮ ಪಕ್ಷದ ಹೊಂದಾಣಿಕೆ ಆಗಿದೆ. ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕಿದ್ದು, ವರಿಷ್ಠರು ಗೋವಿಂದ ಕಾರಜೋಳಗೆ ಟಿಕೆಟ್ ನೀಡಿದ್ದಾರೆ.  ಪೋತಪ್ಪ ನಾಯಕನಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆಂದು ಇರಲಿಲ್ಲ.  ಈ ಹಿಂದೆ ಎ.ನಾರಾಯಣಸ್ವಾಮಿಗೆ ಟಿಕೆಟ್ ಕೊಡಿಸಿದ್ದೇ ನಾನು ಬಿಜೆಪಿಯಲ್ಲಿ ಈ ಹಿಂದೆಯೇ ರಘುಚಂದನ್‍ಗೆ ಟಿಕೆಟ್ ಭರವಸೆ ನೀಡಿದ್ದರು ಎಂದಿದ್ದಾನೆ ಕೋರ್ ಕಮಿಟಿ ಸಭೆ ನಡೆದಾಗ ನಾನು ಸಹ ಅಲ್ಲಿದ್ದೆನು ಕ್ಷೇತ್ರದಲ್ಲಿ ಮತಗಳ ಕಾಂಬಿನೇಷನ್ ಬಗ್ಗೆ ನಾನು ಹೇಳಿದ್ದೆನು ಆ ಸಭೆಯಲ್ಲಿ ಪೋತಪ್ಪ ನಾಯಕ ಮಾಜಿ ಶಾಸಕನೂ ಇದ್ದನು ಎಂದರು.

ಚಿತ್ರದುರ್ಗದಲ್ಲಿ ಜನತಾ ಬಜಾರ್ ಎಂದು ಇತ್ತು ಅಲ್ಲಿ ಕೈಕಾಲು ಹಿಡಿದು ಸಕ್ಕರೆ ಸೀಮೆ ಎಣ್ಣೆ ತೂಗಲು ಇವನು ಸೇರಿಕೊಂಡಿದ್ದನು ಎರಡ್ಮೂರು ನ್ಯಾಯ ಬೆಲೆ ಅಂಗಡಿ ಮಾಡಿಕೊಂಡಿದ್ದನು ಸೀಮೆ ಎಣ್ಣೆ ಹಂಚುತ್ತಿದ್ದೇನೆಂದು ಜನರ ಬಳಿ ಹೇಳುತ್ತಿದ್ದನು 1979ರಲ್ಲಿ ಪುರಸಭೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದನು. 2023ರ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿ ಪರ ಕೆಲಸ ಯಾರೋ ದೊಡ್ಡ ವ್ಯಕ್ತಿಗೆ ಐವತ್ತು ಲಕ್ಷ ಕೊಡಿಸಲು ಪ್ರಯತ್ನಿಸಿದ್ದನು ಹಿಂದೆ ಕೆಟ್ಟದಾಗಿ ಬೈಯುವುದು ಮುಂದೆ ಕಾಲು ಮುಗಿಯುವ ಕೆಲಸ ದೊಡ್ಡ ಉಳ್ಳಾರ್ತಿ ಸ್ವಗ್ರಾಮದಲ್ಲೇ ಅವನಿಗೆ ಯಾರೂ ಮಾತಾಡಿಸಲ್ಲ. ಅವನು ಸತ್ತರೆ 20ಸಾವಿರ ಜನ, ನಾನು ಸತ್ತರೆ 4ಜನ ಸೇರಲ್ಲ ಅಂದಿದ್ದಾನೆ ಅದನ್ನು ಹೇಗೆ ನಾವು ಟ್ರೈಲರ್ ನೋಡುವುದು ಈಗ ಎಂದು ವ್ಯಂಗ್ಯ ಅನೇಕರ ಬಳಿ ಕಾಲೇಜು ಸರ್ಟಿಫಿಕೇಟ್ ವಿಚಾರಕ್ಕೆ ಹಣ ಕೇಳಿದ್ದಾನೆ ಅಂಥವರು ಇವನು ಸತ್ತಾಗ ಬೈಯಲು ಬರಬಹುದು ಎಂದು ವ್ಯಂಗ್ಯವಾಡಿದರು.

ಬಿಎಸ್ ವೈ, ಬಿ ಎಲ್ ಸಂತೋಷ ಭರವಸೆ ನೀಡಿದ್ದರು ಎಂದಿದ್ದಾನೆ ಆದರೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ಟರೆ ಕೊಡಲಿ ಇಲ್ಲ ಬಿಡಲಿ ಎಂದಿದ್ದನು ಈ ಬಗ್ಗೆ ಅವನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಲಿ ಬಿಎಸ್ ವೈಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೆನು ಎಂದಿದ್ದಾನೆ ಬಿಎಸ್ ವೈ ಅವರು ಚಂದ್ರಪ್ಪಗೆ ಕೆಎಸ್ ಆರ್ ಟಿಸಿ ಚೇರ್ ಮೆನ್ ಕೊಟ್ಟಿದ್ದರು ಅವಕಾಶ ಇಲ್ಲದಿದ್ದರು ಸೈರನ್ ಹಾಕಿಕೊಂಡು ಓಡಾಡಿದ್ದನು ಬಿಎಸ್ ವೈ ಆಶೀರ್ವಾದದಿಂದ KSRTC ಚೇರ್ಮನ್ ಆಗಿದ್ದು ಮರೆತಿದ್ದಾನೆ ಎಂದ ತಿಪ್ಪಾರೆಡ್ಡಿಯವರು,  ನಿನ್ನೆ ಅವನು ಕರೆದ ಸಭೆಯಲ್ಲಿ ಕೆಲ ಬಿಜೆಪಿ ಬೆಂಬಲಿಗರು ಇದ್ದರು ಅಂತೆಯೇ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದವರು ಸಭೆಯಲ್ಲಿದ್ದರು 1994ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದು ಗೃಹಮಂಡಳಿ ಅಧ್ಯಕ್ಷ ಆಗಿದ್ದೆನು ಎರಡನೇ ಸಲವು ಪಕ್ಷೇತರ ಶಾಸಕನಾಗಿ ಗೆದ್ದಿದ್ದೆನು ನಾನು ತಿಪ್ಪಾರೆಡ್ಡಿಗೆ ಎಂಎಲ್ಸಿ ಮಾಡಿದ್ದೆನೆಂದು ಹೇಳುತ್ತಾನೆ ಅಧಿಕ ಲೀಡ್ ನಲ್ಲಿ ನಾನು 2009ರಲ್ಲಿ ಒಐಅ ಆಗಿದ್ದೆನು ಃಎP ಒಐಅ ಗಳಿಗೆ ಬೇಕಿದ್ದರೆ ಕೇಳಲಿ ಅವನು ಯಾವತ್ತು ಪಕ್ಷದ ಪರ ಚುನಾವಣೆ ಮಾಡಿಲ್ಲ  ಜಿಲ್ಲೆಯಲ್ಲಿ ಎಲ್ಲರೂ ಸೋತು ನಾನು ಗೆದ್ದರೆ ಮಂತ್ರಿ ಆಗುತ್ತೇನೆ ಎಂಬ ಭಾವನೆ ಅವನಲ್ಲಿದೆ ಎಂದಿದರು.

ಹೊಳಲ್ಕೆರೆ ಬಿಜೆಪಿ ಪ್ರಭಾವವಿರುವ ಕ್ಷೇತ್ರ ಅಲ್ಲಿ ಯಾರು ಸ್ಪರ್ಧಿಸಿದರೂ ಬಿಜೆಪಿ ಗೆಲ್ಲುತ್ತದೆ ನನಗೆ ಜೆ ಹೆಚ್ ಪಟೇಲರು ಒಮ್ಮೆ ಹೇಳಿದ್ದರು ಬೆಳಗ್ಗೆ ನನ್ನ ಬಳಿ ಬಂದು ನನಗೆ ತುಂಬಾ ಹೊಗಳುತ್ತಾನೆ ಸಂಜೆ ದೇವೇಗೌಡರ ಬಳಿ ಹೋಗಿ ನನ್ನ ತೆಗಳುತ್ತಾನೆ ಎಂದಿದ್ದರು ಪುತ್ರನಿಗೆ ಲೋಕಸಭೆ ಟಿಕೆಟ್ ಗಾಗಿ ನನ್ನ ಜತೆ ರಾಜಿಗೆ ಪ್ರಯತ್ನಿಸಿದ್ದನು ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್ ಗೆ ಕಳಿಸಿದ್ದನು ಜೋಗಿಮಟ್ಟಿಯಲ್ಲಿ ಪಾರ್ಟಿಗೆ ಸೇರೋಣ ಎಂದು ಹೇಳಿ ಕಳಿಸಿದ್ದನು ನಾನು ಭೇಟಿಗೆ ನಿರಾಕರಿಸಿ ವಾಪಸ್ ಕಳಿಸಿದ್ದೆನು ಅವನು ನನಗೆ ಎಂಎಲ್ ಎ, ಎಂಎಲ್ಸಿ ಮಾಡುವುದಾದರೆ ನನಗೆ ಎಂಎಲ್‍ಎಗಿರಿನೇ ಬೇಡ ಬಿಜೆಪಿ ಕಚೇರಿ ಮೊಟ್ಟೆ, ಕಲ್ಲು ಹೊಡೆದರೆ ಮುಗಿಯಲ್ಲ ನಾನು ಅವನಿಗಿಂತ ಎರಡು ಸಲ ಹೆಚ್ಚು ಗೆದ್ದಿದ್ದೇನೆ ಎರಡು ಸಲ ಪಕ್ಷೇತರವಾಗಿ ಗೆದ್ದು ಶಾಸಕನಾಗಿದ್ದೇನೆ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.

ರಾಷ್ಟೀಯ ವಿಚಾರಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ವಿಜಯೇಂದ್ರ ಕಾಲಿಡದೇ KSRTC ಚೇರ್ ಮೆನ್ ಆಗಿದ್ದನು ಅವನು ನನ್ನ ಮಗನ ಟಿಕೆಟ್ ತಪ್ಪಿಸಿದವರ ಮಕ್ಕಳಿಗೂ ತೊಂದರೆ ಅಂದಿದ್ದಾನೆ ಅವನು ಶಾಪ ಹಾಕುತ್ತಿದ್ದಾನೆ, ಅವನು ಹೇಳಿದಂತೆ ಆಗುತ್ತದಾ ಎಂದು ವ್ಯಂಗ್ಯವಾಡಿ  ರಾಜಕೀಯವಾಗಿ ಪಕ್ಷ ಸೋತರೂ ಪರವಾಗಿಲ್ಲ, ವರಿಷ್ಠರು ಗಮನಿಸುತ್ತಾರೆ ಪಕ್ಷ ವಿರೋಧಿಗಳ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸುತ್ತಾರೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ಗೋಷ್ಟಿಯಲ್ಲಿ ಕೋವೆರಹಟ್ಟಿ ದ್ಯಾಮಣ್ಣ, ಮಾಳಪ್ಪನ ಹಟ್ಟಿ ಈಶ್ವರಪ್ಪ, ಕವನ, ಅರುಣ್, ಮೈಲಾರಪ್ಪ, ಲೋಕೇಶ್, ಸುರೇಶ್, ರಾಮಣ್ಣ, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
Advertisement