Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬ್ರಾಹ್ಮಣರಿಂದ ಹಿಡಿದು ದಲಿತರವರೆಗೆ ಎಲ್ಲರಿಗೂ ಸಮಾಜವನ್ನು ಪರಿವರ್ತಿಸುವ ಹೊಣೆಗಾರಿಕೆಯಿದೆ : ಪ್ರೊ.ಕಾಳೇಗೌಡ ನಾಗವಾರ

05:21 PM Jun 16, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂ.16 : ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಜವಾಬ್ದಾರಿ ಬರಹಗಾರನ ಮೇಲಿದೆ ಎಂದು ಖ್ಯಾತ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು.

Advertisement

ಅಭಿರುಚಿ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಡಾ.ದೊಡ್ಡಮಲ್ಲಯ್ಯರವರ ಕಂಡುಂಡ ಕಥೆಗಳು ಹಾಗೂ ಮೂಕ ಲಹರಿ ಎರಡು ಕೃತಿಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬ್ರಾಹ್ಮಣರಿಂದ ಹಿಡಿದು ದಲಿತರವರೆಗೆ ಎಲ್ಲರಿಗೂ ಸಮಾಜವನ್ನು ಪರಿವರ್ತಿಸುವ ಹೊಣೆಗಾರಿಕೆಯಿದೆ. ಬದುಕು ಎನ್ನುವುದು ದೊಡ್ಡದು. ಡಾ.ದೊಡ್ಡಮಲ್ಲಯ್ಯ ಪಶುವೈದ್ಯರಾಗಿದ್ದುಕೊಂಡು ಸಾಹಿತ್ಯ ಅರ್ಪಣೆ ಮನೋಭಾವ ಬೆಳೆಸಿಕೊಂಡಿದ್ದಾರೆ. ಎಲ್ಲಾ ಮನಸ್ಸುಗಳು ಒಟ್ಟಿಗೆ ಬೆರೆಯಬೇಕಾದರೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಗಾಂಧೀಜಿಯವರ ಅನೇಕ ವಿಚಾರಗಳು ಅವೈಜ್ಞಾನಿಕವಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಲೋಹಿಯಾ ಇವರುಗಳ ಕಾಣಿಕೆ ಸಮಾಜಕ್ಕೆ ದೊಡ್ಡದಿದೆ.

ಬುಡಕಟ್ಟು ಜನಾಂಗದ ಜೀವನ ಪದ್ದತಿ, ಆರೋಗ್ಯಕರ ಚಿಂತನೆ ಕುರಿತು ಕೃತಿಯಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಸತ್ಯವಿರಬೇಕು. ಕಾಡುಗೊಲ್ಲರಲ್ಲಿ ಸಾಂಸ್ಕøತಿಕ ಚಿಂತನೆಯಿದೆ. ವಿಚಾರ, ಮುಗ್ದತೆಯ ಪ್ರತಿರೂಪ, ಕಲ್ಮಶ ಗೊತ್ತಿಲ್ಲದ ಜನ. ಡಾ.ದೊಡ್ಡಮಲ್ಲಯ್ಯ ಪಶುವೈದ್ಯರಾಗಿದ್ದುಕೊಂಡೆ ಬರವಣಿಗೆಯಲ್ಲಿ ತೊಡಗಿಕೊಂಡಿರುವುದನ್ನು ನೋಡಿದರೆ ಅವರಲ್ಲಿ ಬರವಣಿಗೆ ಬಗ್ಗೆ ಆಸಕ್ತಿಯಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.

ವಾಟ್ಸ್ ಆಪ್, ಫೇಸ್‍ಬುಕ್‍ಗಳ ಮಾಯಾಲೋಕದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ವಾಟ್ಸ್ ಆಪ್, ಫೇಸ್‍ಬುಕ್‍ಗಳ ಮಾಯಾಲೋಕದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬರವಣಿಗೆ, ಸೃಜನಶೀಲತೆ ನಿಂತಿದೆ. ಕಂಪ್ಯೂಟರ್ ಯುಗದಲ್ಲಿ ಕೈಬರವಣಿಗೆಯೇ ಕಾಣೆಯಾಗಿರುವುದರಿಂದ ಕನ್ನಡಕ್ಕೆ ಸಾಹಿತ್ಯದ ಶಕ್ತಿಯನ್ನು ತುಂಬಬೇಕಾಗಿದೆ ಎಂದು ಹೇಳಿದರು.

ಬುಡಕಟ್ಟು ಜನಾಂಗದಲ್ಲಿ ಜನಿಸಿದ ಡಾ.ದೊಡ್ಡಮಲ್ಲಯ್ಯ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಕಂಡುಂಡ ಕಥೆಗಳು ಹಾಗೂ ಮೂಕ ಲಹರಿ ಕೃತಿಗಳಲ್ಲಿ ಗ್ರಾಮೀಣ ಭಾಷೆಯಿರುವುದರಿಂದ ಸರಳವಾಗಿ ಅರ್ಥವಾಗುವಂತಿದೆ. ಅಲ್ಲಲ್ಲಿ ಹಾಸ್ಯವೂ ಇದೆ. ಮೂಕ ಪ್ರಾಣಿಗಳ ಸೇವೆ ಮಾಡುವುದರ ಜೊತೆಗೆ ಸಾಹಿತ್ಯದ ಸೇವೆಗೂ ಬದ್ದರಾಗಿರುವ ಡಾ.ದೊಡ್ಡಮಲ್ಲಯ್ಯನವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಹಾರೈಸಿದರು.

ಪುಸ್ತಕಗಳನ್ನು ಶೋಕೇಸ್‍ಗಳಲ್ಲಿ ಇಡುವಂತಾಗಬಾರದು. ಓದಬೇಕು. ಕೃತಿ ಮತ್ತು ಸಾಹಿತ್ಯ ಪ್ರತಿಯೊಬ್ಬರ ಮನಸ್ಸಿಗೆ ಗಳೆಯನಿದ್ದಂತೆ. ಇಂದಿನ ದಿನಗಳಲ್ಲಿ ಕೃಷಿ, ಪಶುಪಾಲನೆ ವಿರಳವಾಗುತ್ತಿದೆ. ಕೃತಿಗಳನ್ನು ಓದಿದರೆ ಭಾಷೆ ಬಗ್ಗೆ ಗೌರವ ಮೂಡುತ್ತದೆ ಎಂದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಪಿ.ವೀರೇಂದ್ರಕುಮಾರ್ ಕಂಡುಂಡ ಕಥೆಗಳು ಕೃತಿ ಕುರಿತು ಮಾತನಾಡುತ್ತ ಆರೋಗ್ಯಕರ ಅಭಿರುಚಿ ಇಂದಿನ ಸಮಾಜಕ್ಕೆ ಬೇಕು. ಬರಹ, ಆಲೋಚನೆಗಳು ಸಮಾಜಕ್ಕೆ ಪೂರಕವಾಗಿರಬೇಕು. ಡಾ.ದೊಡ್ಡಮಲ್ಲಯ್ಯನವರು ಪಶುವೈದ್ಯರಾಗಿದ್ದುಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಬರವಣಿಗೆಯಲ್ಲಿ ತೊಡಗುವವರು ತುಂಬಾ ಕಡಿಮೆಯಿರುವ ಪ್ರಸ್ತುತ ದಿನಮಾನಗಳಲ್ಲಿ ಇಂತಹ ಕೃತಿಗಳು ಹೊರಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಕೃತಿಕಾರ ಡಾ.ದೊಡ್ಡಮಲ್ಲಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಓದು ನನ್ನ ಬರವಣಿಗೆಯಲ್ಲಿ ಆಸೆ, ಸಡಗರ, ಸಂಭ್ರಮವನ್ನು ಹುಟ್ಟಿಸುತ್ತಿತ್ತು. ಹಾಗಾಗಿಯೇ ನಾನು ಕೃತಿಗಳನ್ನು ಹೊರತರಲು ಪ್ರೇರಣೆಯಾಯಿತು. ಕೆಲವು ಜನ ಮೂಕ ಪ್ರಾಣಿಗಳಿಗಿಂತಲೂ ಕಡೆಯಾಗಿರುತ್ತಾರೆ. ಆದ್ದರಿಂದ ಮೂಕ ಪ್ರಾಣಿಗಳ ಸೇವೆ ಮಾಡುವುದರಲ್ಲಿ ನನಗೆ ತೃಪ್ತಿಯಿದೆ. ನಿತ್ಯ ಜೀವನ ಹಾಗೂ ಸುತ್ತಮುತ್ತಲಿನ ಪರಿಸರ ನನ್ನನ್ನು ಬರವಣಿಗೆ ಕಡೆ ಸೆಳೆಯಿತು. ಪರಿಸರದ ಅನುಭವ ಮೂಕ ಪ್ರಾಣಿಗಳ ಸೇವೆ, ಪ್ರಕೃತಿಯ ಅನೇಕ ರಹಸ್ಯ, ಸೂಕ್ಷ್ಮತೆಗಳ ಪಾಠ ನನ್ನ ತಂದೆಯಿಂದ ಕಲಿತೆ ಎಂದು ಸ್ಮರಿಸಿದರು.

ಅಭಿರುಚಿ ಸಹ ಸಂಚಾಲಕರು ಹಾಗೂ ಸಾಹಿತಿ ಸಿ.ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಹಾಗೂ ಪತ್ರಕರ್ತ ಮಂಜುನಾಥ ಅದ್ದೆ, ಶಿವಮೊಗ್ಗ ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಸ್.ಬಿ.ರವಿಕುಮಾರ್, ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಕಲ್ಲಪ್ಪ, ಬೆಂಗಳೂರು ಮಹಾರಾಣಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮಿಪತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ವೇದಿಕೆಯಲ್ಲಿದ್ದರು.

ಡಾ.ದೊಡ್ಡಮಲ್ಲಯ್ಯನವರ ಅಪಾರ ಅಭಿಮಾನಿಗಳು ಕೃತಿಗಳ ಲೋಕಾರ್ಪಣೆಯಲ್ಲಿ ಭಾಗವಹಿಸಿದ್ದರು.
ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು. ಡಾ.ಅಭಿನವ ಡಿ.ಎಂ. ವಂದಿಸಿದರು. ಶ್ರೀಮತಿ ಜಯಾ ಪ್ರಾಣೇಶ್ ನಿರೂಪಿಸಿದರು.

Advertisement
Tags :
bengaluruBrahminschitradurgadalitsProf. Kalegowda Nagawarasuddionesuddione newstransform societyಚಿತ್ರದುರ್ಗದಲಿತಪ್ರೊ.ಕಾಳೇಗೌಡ ನಾಗವಾರಬೆಂಗಳೂರುಬ್ರಾಹ್ಮಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article