Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

07:19 PM May 06, 2024 IST | suddionenews
Advertisement

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Advertisement

ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ 7ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಧಾರ್ಮಿಕ ಪರಿಕಲ್ಪನೆಗಳು ಮತ್ತು ಪ್ರಯೋಗಶೀಲತೆ ಕುರಿತು ಡಾ. ಲೋಕೇಶ್ ಅಗಸನಕಟ್ಟೆ, ಮೇ 8ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಸಾಮಾಜಿಕ ಚಿಂತನೆಗಳು ಕುರಿತು ಡಾ. ಎನ್. ಮಮತ, ಮೇ 9ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಾದಿ ಶರಣರ ಆರ್ಥಿಕ ಚಿಂತನೆಗಳು ಕುರಿತು ಡಾ. ಟಿ.ಆರ್. ಚಂದ್ರಶೇಖರ್ ಮತ್ತು ಮೇ 10ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಚಿಂತನೆಯ ಪ್ರಸ್ತುತತೆ ಕುರಿತು ಚಂದ್ರಶೇಖರ ತಾಳ್ಯ ಅವರು ಚಿಂತನೆ ನೀಡಲಿದ್ದಾರೆ.

ಮೇ 8ರಂದು ಸಂಜೆ 6 ಗಂಟೆಗೆ ವಚನಕಾರರ ದೃಷ್ಟಿಯಲ್ಲಿ ಬಸವಣ್ಣ ವಿಷಯ ಕುರಿತು ಚಿಂತನಗೋಷ್ಠಿ ನಡೆಯಲಿದೆ. ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ವಿಷಯಾವಲೋಕನ ಮಾಡಲಿದ್ದು, ಸಿಂಧನೂರು ಬಸವಕೇಂದ್ರ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ ಭಾಗವಹಿಸುವರು.

Advertisement


ಮೇ 9ರಂದು ಬೆಳಗ್ಗೆ ವಚನ ಕಂಠಪಾಠ ಸ್ಪರ್ಧೆ, 12ನೇ ಶತಮಾನದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮತ್ತು ಬಸವಾದಿ ಶಿವಶರಣರ ಕುರಿತಾದ ಭಜನಾ ಸ್ಪರ್ಧೆಗಳು ನಡೆಯಲಿವೆ. ಅದೇದಿನ ಸಂಜೆ 6 ಗಂಟೆಗೆ ಶರಣ ಸ್ಥಲದ ನೆಲೆಯಲ್ಲಿ ಬಸವಣ್ಣ ವಿಷಯ ಕುರಿತು ಚಿಂತನ ಗೋಷ್ಠಿ ನಡೆಯಲಿದ್ದು, ಅಶೋಕ ಬರಗುಂಡಿ ಗದಗ ಇವರು ವಿಷಯಾವಲೋಕನ ಮಾಡುವರು.

ಬೆಂಗಳೂರು ಬಸವ ಟಿವಿ ಅಧ್ಯಕ್ಷ ಕೃಷ್ಣಪ್ಪ ಮುಖ್ಯಅತಿಥಿಯಾಗಿ ಭಾಗವಹಿಸುವರು.
ಮೇ 10 ರಂದು ಬೆಳಗ್ಗೆ 9.45 ಗಂಟೆಗೆ ಬಸವತತ್ತ್ವ ಧ್ವಜಾರೋಹಣ ಹಾಗೂ ಬಸವಣ್ಣನವರ ಜಯಂತ್ಯೋತ್ಸವ ನಡೆಯಲಿದೆ.

ಶಿವಯೋಗಿ ಸಿ. ಕಳಸದ, ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಮುರುಘರಾಜೇಂದ್ರ ಮಠ ಹಾಗು ಎಸ್.ಜೆ.ಎಂ. ವಿದ್ಯಾಪೀಠ ಇವರು ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಪಿ.ಎಸ್. ಶಂಕರ್, ಚಂದ್ರಶೇಖರ್ ಎಸ್.ಎನ್., ಡಾ. ಬಸವಕುಮಾರ ಸ್ವಾಮಿಗಳು ಭಾಗವಹಿಸುವರು. ಶಿವಮೊಗ್ಗದ ಪ್ರಭುದೇವ ಜ್ಞಾನಕೇಂದ್ರದ ಶ್ರೀ ಬಸವ ನವಲಿಂಗ ಶರಣರು ಸಾಂಸ್ಕøತಿಕ ನಾಯಕ ಬಸವಣ್ಣ ಕುರಿತು ವಿಷಯಾವಲೋಕನ ಮಾಡುವರು.

ಕಾರ್ಯಕ್ರಮದಲ್ಲಿ ಶ್ರೀ ಬಸವನವಲಿಂಗ ಶರಣರು ಬರೆದಿರುವ ಜಗಜ್ಯೋತಿ ಬಸವಧರ್ಮ ಗ್ರಂಥ ಬಿಡುಗಡೆಯಾಗಲಿದೆ. ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಭಾಗಗಳ ಧಾರ್ಮಿಕ ಮುಖಂಡರುಗಳು ಭಾಗವಹಿಸುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

Advertisement
Tags :
bengaluruchitradurgasuddionesuddione newsಕಾರ್ಯಕ್ರಮಗಳ ವಿವರಚಿತ್ರದುರ್ಗಬಸವ ಜಯಂತಿಬೆಂಗಳೂರುಮುರುಘಾಮಠಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article