Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಮ್ಮ ವಿದ್ಯಾಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ : ಡಾ.ಕೆ.ಎಂ.ವಿರೇಶ್

06:21 PM May 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮೇ. 21:  ನನ್ನ ವಿದ್ಯಾ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಧ್ಯವಾದಷ್ಟು ಉಚಿತವಾದ ಶಿಕ್ಷಣವನ್ನು ನೀಡಲಾಗುವುದು ಎಂದು ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ.ಕೆ.ಎಂ.ವಿರೇಶ್ ಭರವಸೆ ನೀಡಿದರು.

Advertisement

ಭಾರತ ಕಮ್ಯೂನಿಸ್ಟ್ ಪಕ್ಷ, ಎ.ಐ.ಟಿ.ಯು.ಸಿ. ಚಿತ್ರದುರ್ಗ ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕೆ.ಎಸ್.ಆರ್.ಟಿ.ಸಿಯ ಬಸ್ ನಿಲ್ದಾಣದ ಬಳಿಯ ಎಐಟಿಯುಸಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ 47ನೇ ಹುತ್ಮಾತರ ಕಾರ್ಮಿಕರ ಮೇ ದಿನಾಚರಣೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ತನಗೆ ಆದ ಅವಮಾನ ಆದಾಗ ಮುಂದಿನ ದಿನದಲ್ಲಿ ಸನ್ಮಾನವಾಗುತ್ತದೆ ಕಷ್ಟಗಳು ಬಂದಾಗ ಮುಂದಿನ ದಿನದಲ್ಲಿ ಸುಖ ಬರುತ್ತದೆ ಅದಕ್ಕಾಗಿ ಕಾಯಬೇಕಿದೆ. ನನ್ನ ವಿದ್ಯಾ ಸಂಸ್ಥೆಯಲ್ಲಿ 1 ರಿಂದ 10ನೇ ತರಗತಿ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತದೆ ಇದರಲ್ಲಿ 1 ರಿಂದ 10ನೇ ತರಗತಿಯವರೆಗೂ ಕಾರ್ಮಿಕ ಮಕ್ಕಳಿಗೆ ಸಾಧ್ಯವಾದಷ್ಟು ಉಚಿತವಾದ ಶಿಕ್ಷಣವನ್ನು ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು.
ಸರ್ಕಾರಗಳು ಶಿಕ್ಷಣ ನೀತಿಯನ್ನು ಜಾರಿ ಮಾಡಿದಾಗ ಮಾತ್ರ ಎಲ್ಲಾ ಮಕ್ಕಳು ಸಹಾ ಉತ್ತಮವಾದ ಶಿಕ್ಷಣವನ್ನು ಪಡೆಯಲು ಸಾಧ್ಯವಿದೆ ಆದರೆ ಇದರ ಬಗ್ಗೆ ಸರ್ಕಾರವಾಗಲಿ ಜನ ಪ್ರತಿನಿಧಿಗಳಾಗಲು ಗಮನ ನೀಡುತ್ತಿಲ್ಲ ಇದು ಜಾರಿಯಾದಾಗ ಮಾತ್ರ ಬಡವರ ಮಕ್ಕಳು ಸಹಾ ಡಾಕ್ಟರ್ ಇಂಜಿನಿಯರ್ ಆಗಲು ಸಾಧ್ಯವಿದೆ ಎಂದ ಅವರು, ಈ ಹಿಂದೆ ಹಲವಾರು ಕೈಗಾರಿಕೆಗಳು ಹೆಚ್ಚಾಗಿದ್ದವು ಅಗ ಕಾರ್ಮಿಕರು ಹೆಚ್ಚಾಗಿದ್ದರು ಇದರಿಂದ ಕಾರ್ಮಿಕ ಸಂಘಟನೆಗಳು ಉತ್ತಮವಾದ ಕೆಲಸವನ್ನು ಮಾಡುವುದರ ಮೂಲಕ ಕಾರ್ಮಿಕರ ಹಿತವನ್ನು ಕಾಯುತ್ತಿದ್ದರು ಆದರೆ ಈಗ ಕೈಗಾರಿಕೆಗಳು ಇಲ್ಲವಾಗಿ ಕಾರ್ಮಿಕರು ಸಹಾ ಬೀದಿಪಾಲಾಗಿದ್ದಾರೆ. ಇದರಿಂದ ಸಂಘಟನೆಗಳು ಸಹಾ ಕಡಿಮೆಯಾಗಿವೆ ಆದರೂ ಸಹಾ ಕೆಲವು ಸಂಘಟನೆಗಳು ಕಾರ್ಮೀಕರ ಪರವಾಗಿ ಕೆಲಸವನ್ನು ಮಾಡುತ್ತಿವೆ ಎಂದರು.

ಎ.ಪಿ.ಎಂ.ಸಿ. ಹಮಾಲರ ಸಂಘದ ಅಧ್ಯಕ್ಷರಾದ ಬಿ.ಬಸವರಾಜಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಕಾರ್ಮಿಕರ ವಿರುದ್ದ ಕಾನೂನುಗಳನ್ನು ಜಾರಿ ಮಾಡಿವುದರ ಮೂಲಕ ವಿರೋಧಿಗಳಾಗಿವೆ. ಕಾರ್ಮಿಕರ ಪರವಾಗಿ ಕಾನೂನುಗಳನ್ನು ಜಾರಿ ಮಾಡುವುದರ ಬದಲಾಗಿ ಶ್ರೀಮಂತರ ಪರವಾಗಿ ಕಾನೂನುಗಳನ್ನು ಜಾರಿ ಮಾಡಿ ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್ ಬಾಬು ಮಾತನಾಡಿ, ದೇಶದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರ ಸುಳ್ಳನ್ನು ಹೇಳುವುದರ ಮೂಲಕ ಆಧಿಕಾರವನ್ನು ನಡೆಸುತ್ತಿದೆ. ಇದರ ಬಗ್ಗೆ ಮತದಾರರಿಗೆ ಮಾಹಿತಿಯನ್ನು ನೀಡಬೇಕಿದೆ. ಚುನಾವಣೆ ಸಮಯದಲ್ಲಿ ಪ್ರಧಾನ ಮಂತ್ರಿಗಳು ಮಾತ್ರ ಹಿಂದುಳಿದ ವರ್ಗಗಳ ಮೇಲೆ ಕರುಣೆ ಬಂದಿದೆ ಈಗ ಮಾತ್ರ ಅವರ ಮೇಲೆ ಪ್ರೀತಿ ಬಂದಿದೆ. ದೇಶದಲ್ಲಿ ಕೋಮುವಾದಿ ಪಕ್ಷಗಳು ತೊಲಗಬೇಕಿದೆ. ಎಂದ ಅವರು ಮುಂದಿನ ದಿನಮಾನದಲ್ಲಿ ಬರುವ ನಗರಸಭೆಯ ಚುನಾವಣೆಯಲ್ಲಿ ಎಲ್ಲಾ ವಾರ್ಡಗಳಿಗೆ ಸಹಾ ಕಮುನಿಸ್ಟ್ ಪಕ್ಷದವತಿಯಿಂದ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ.ಕೆ.ಎಂ.ವಿರೇಶ್ ರವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಮಂಡಳಿ ನಾಯಕರಾದ ಅಮ್ಜದ್, ಎಐಟಿಯುಸಿಯ ಜಿಲ್ಲಾ ಮಂಡಳಿಯ ಗೌರವಾಧ್ಯಕ್ಷರಾದ ಸಿ.ವೈ.ಶಿವರುದ್ರಪ್ಪ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಎಐಟಿಯುಸಿಯ ರಾಜ್ಯ ಉಪಾಧ್ಯಕ್ಷರಾದ ಟಿ.ಆರ್.ಉಮಾಪತಿ, ತಾಲ್ಲೂಕು ಸಹ ಕಾರ್ಯದರ್ಶಿಗಳಾದ ಜಯದೇವ ಮೂರ್ತಿ ಜಾಫರ್ ಷರೀಫ್, ಕುಮಾರಸ್ವಾಮಿ, ದುರುಗೇಶ್, ನಾಗಮ್ಮ ಲಕ್ಷ್ಮಮ್ಮ, ಚೌಡಪ್ಪ, ನಾಗರಾಜ್, ಸತ್ಯಕೀರ್ತಿ ಸೇರಿದಂತೆ ಇತತರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ಬೆಳಿಗ್ಗೆ 9 ಗಂಟೆಯಿಂದ ಎಐಟಿಯುಸಿ ಕಚೇರಿಯಿಂದ ಮೆರವಣಿಗೆ ನಡೆಸಲಾಯಿತು.

Advertisement
Tags :
bengaluruchitradurgaFree educationsuddionesuddione newsಉಚಿತ ಶಿಕ್ಷಣಕಟ್ಟಡ ಕಾರ್ಮಿಕರಚಿತ್ರದುರ್ಗಡಾ.ಕೆ.ಎಂ.ವಿರೇಶ್ಬೆಂಗಳೂರುವಿದ್ಯಾಸಂಸ್ಥೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article