Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ :  ಎಸ್.ಜೆ. ಸೋಮಶೇಖರ್

05:18 PM Jan 25, 2024 IST | suddionenews
Advertisement

 

Advertisement

ಚಿತ್ರದುರ್ಗ. ಜ.25:   ಮುಕ್ತ, ನ್ಯಾಯಸಮ್ಮತ ಹಾಗೂ ನಿರ್ಭೀತ ಚುನಾವಣೆ ನಡೆಸುವಲ್ಲಿ ಎಲ್ಲರ ಸಹಕಾರ ಮುಖ್ಯ. ಚುನಾವಣೆಗೆ ನೇಮಿಸಿದ ಅಧಿಕಾರಿಗಳು ಎಲ್ಲಾ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಸಮಾನವಾಗಿ ಕಾಣಬೇಕು ಎಂದು ಚುನಾವಣೆ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಬುಧವಾರ ಜಿಲ್ಲಾ ಚುನಾವಣಾ ತರಬೇತಿ ಹಾಗೂ ನಿರ್ವಹಣಾ ಕೋಶದ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಮಾದರಿ ನೀತಿ ಸಂಹಿತೆ ಕುರಿತು ಎಸ್‍ಎಸ್‍ಟಿ, ವಿಎಸ್‍ಟಿ, ಎಫ್‍ಎಸ್‍ಟಿ, ವಿವಿಟಿ ತಂಡವರಿಗೆ ಆಯೋಜಿಸಲಾದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮಾದರಿ ನೀತಿ ಸಂಹಿತೆ ಪಾಲನೆಯಲ್ಲಿ ಎಸ್‍ಎಸ್‍ಟಿ (ಸ್ಯಾಟಿಕ್ ಸರ್ವೇಲೆನ್ಸ್ ಟೀಂ), ವಿಎಸ್‍ಟಿ (ವಿಡಿಯೋ ಸರ್ವೇಲೆನ್ಸ್ ಟೀಂ), ಎಫ್‍ಎಸ್‍ಟಿ (ಫ್ಲೈಯಿಂಗ್ ಸ್ಕ್ವಾಡ್), ವಿವಿಟಿ (ವಿಡಿಯೋ ವಿಜಿಲೆನ್ಸ್ ಟೀಂ) ತಂಡಗಳ ಪಾತ್ರ ಪ್ರಮುಖವಾಗಿದೆ.  ಮುಕ್ತ, ನ್ಯಾಯಸಮ್ಮತ ಹಾಗೂ ನಿರ್ಭೀತ ಚುನಾವಣೆ ನಡೆಸುವಲ್ಲಿ ಎಲ್ಲರ ಸಹಕಾರ ಮುಖ್ಯ. ಚುನಾವಣೆಗೆ ನೇಮಿಸಿದ ಅಧಿಕಾರಿಗಳು ಎಲ್ಲಾ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಸಮಾನವಾಗಿ ಕಾಣಬೇಕು. ಇದುವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೇ ಇರುವ ಅರ್ಹ ಮತದಾರರು ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕದವರೆವಿಗೂ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆಯ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಮಾದರಿ ನೀತಿ ಸಂಹಿತೆಯು 8 ಹಂತಗಳಲ್ಲಿ ಅನುμÁ್ಟನಗೊಳ್ಳುತ್ತದೆ ಎಂದರು.

ಚುನಾವಣೆಯ ಜಿಲ್ಲಾ ಮಾಸ್ಟರ್ ಟ್ರೈನರ್ ಎನ್.ನಾಗಭೂಷಣ್ ತರಬೇತಿ ನೀಡಿ, ಸಾಮಾನ್ಯ ನೀತಿ ಸಂಹಿತೆ, ಪಕ್ಷಗಳ ಸಭೆಗಳು ಹಾಗೂ ಸಮಾರಂಭಗಳು, ಚುನಾವಣಾ ರ್ಯಾಲಿ ಮತ್ತು ಮೆರವಣಿಗೆಗಳು, ಮತದಾನ ಪ್ರಕ್ರಿಯೆ ದಿನದ ನೀತಿ ಸಂಹಿತೆ, ಮತದಾನ ಕೇಂದ್ರದ ನೀತಿ ಸಂಹಿತೆ, ಸ್ಟಾರ್ ಪ್ರಚಾರಕರು ಮುಂತಾದವುಗಳಲ್ಲಿ ಮಾದರಿ ನೀತಿ ಸಂಹಿತೆಯನ್ನು ಅಗತ್ಯವಾಗಿ ಪಾಲಿಸಬೇಕಾಗಿರುತ್ತದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ಚುನಾವಣಾ ಮತ ಎಣಿಕೆಯ ದಿನದವರೆವಿಗೂ ಮಾದರಿ ನೀತಿ ಸಂಹಿತೆ ಪ್ರಕ್ರಿಯೆ ಅನುಷ್ಠಾನದಲ್ಲಿರುತ್ತದೆ.

ನೀತಿ ಸಂಹಿತೆಯ ಸಂದರ್ಭದಲ್ಲಿ ಜನರಿಗೆ ಹಣ ಹಂಚಿಕೆ, ಉಡುಗೊರೆ ಹಂಚಿಕೆ, ಊಟದ ವ್ಯವಸ್ಥೆಗಳು ಮುಂತಾದವುಗಳು ಜರುಗದ ರೀತಿಯಲ್ಲಿ ಎಲ್ಲಾ ತಂಡಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ವಾಹನದಲ್ಲಿ ಸೂಕ್ತ ದಾಖಲೆಗಳಿಲ್ಲದೇ ರೂ.50,000/-ಕ್ಕಿಂತ ಹೆಚ್ಚು ನಗದನ್ನು ಕೊಂಡೊಯ್ಯುವಂತಿರುವುದಿಲ್ಲ. ಅಂತಹ ವ್ಯಕ್ತಿಯಿಂದ ಅದನ್ನು ವಶಪಡಿಸಿಕೊಂಡು ದೂರು ದಾಖಲಿಸಬೇಕು ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಮೊಳಕಾಲ್ಕೂರು, ಚಳ್ಳಕೆರೆ, ಹಿರಿಯೂರು ವಿಧಾನಸಭಾ ಕ್ಷೇತ್ರದ ಅಧಿಕಾರಿಗಳಿಗೆ ಹಾಗೂ ಮಧ್ಯಾಹ್ನ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

ತರಬೇತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಮಹೇಂದ್ರಕುಮಾರ್,  ಆನಂದ್, ಜಿಲ್ಲಾಧಿಕಾರಿಗಳ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಚುನಾವಣಾ ಶಿರಸ್ತೇದಾರ ಮಲ್ಲಿಕಾರ್ಜನ  ಉಪಸ್ಥಿತರಿದ್ದರು. ಮಂಜುನಾಥ್ ಎಸ್.ಕೆ ರವರು ಸ್ವಾಗತಿಸಿದರು. ಆರ್.ರವೀಂದ್ರ ವಂದನೆ ಸಲ್ಲಿಸಿದರು. ನಾಗೇಂದ್ರ ಚೌದರಿ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
CEO S. J. Somashekharchitradurgacooperationfree and fair electionsrequiresuddionesuddione newsಅಗತ್ಯಚಿತ್ರದುರ್ಗಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಸಹಕಾರಸಿಇಒ ಎಸ್.ಜೆ. ಸೋಮಶೇಖರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article