ಬಿಟ್ಟಿ ಭಾಗ್ಯ ಕೊಡಲಿಕ್ಕೆ ವಾಲ್ಮೀಕಿ ನಿಗಮದ ದುಡ್ಡೇ ಬೇಕಿತ್ತಾ ? ಸಿಎಂ ವಿರುದ್ಧ ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಚಳ್ಳಕೆರೆ, ಜುಲೈ. 03 : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಬಿಟ್ಟಿಭಾಗ್ಯಗಳನ್ನು ಕೊಟ್ಟು ಖಜಾನೆ ಖಾಲಿ ಮಾಡಿಕೊಂಡಿದೆ. ಸಿದ್ದರಾಮಯ್ಯನವರೇ ಬಿಟ್ಟಿ ಭಾಗ್ಯ ಕೊಡಲಿಕ್ಕೆ ವಾಲ್ಮೀಕಿ ಜನಗಳ ದುಡ್ಡೇ ಬೇಕಾ ನಿಮಗೆ? ಎಂದು ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್ ಸರ್ಕಾರ 187 ಕೋಟಿ ವಾಲ್ಮೀಕಿ ನಿಗಮದಿಂದ ಸಿದ್ದರಾಮಯ್ಯನವರ ಸರ್ಕಾರ ಕೊಳ್ಳೆ ಹೊಡೆದಿದೆ ,ಸ್ವಾಮಿ ಸಿದ್ರಾಮಯ್ಯನವರೇ ವಾಲ್ಮೀಕಿ ಸಮುದಾಯ ಹಾಗೂ ಪರಿಶಿಷ್ಟ ಜಾತಿ ಸಮುದಾಯದಿಂದ ಈ ಹಣವನ್ನು ದುರುಪಯೋಗ ಮಾಡಿಕೊಂಡು ಬಿಟ್ಟಿ ಭಾಗ್ಯಕ್ಕೆ ಹಣ ಬಳಕೆ ಮಾಡಿಕೊಂಡಿರುವುದು ಖಂಡನೀಯ.
ಇದು ಅಲ್ಲದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದ ಸಮುದಯಕ್ಕೆ ಮೀಸಲಿಟ್ಟ 25,000 ಸಾವಿರ ಕೋಟಿ ಹಣವನ್ನ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಇತ್ತ ಜನಸಾಮಾನ್ಯರ ಹಾಲಿನ ಧರ ನೀರಿನ ಧರ ಪೆಟ್ರೋಲ್ ಡೀಸೆಲ್ ಕಂದಾಯ ತೆರಿಗೆ ದಿನಸಿ ವಸ್ತುಗಳ ಹೆಚ್ಚಿಸಿ ಸಾಮಾನ್ಯ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ.
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿ ಹಣ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ವಾಲ್ಮೀಕಿ ಸಮುದಾಯ ಹಾಗೂ ಏಕೆ ಸಮುದಾಯಗಳು ಕಾಂಗ್ರೆಸ್ ಸರ್ಕಾರಕ್ಕೆ ವೋಟ ಹಾಕಿಲ್ಲವಾ ಹಾಗಾದರೆ ನಮ್ಮ ಹಣವನ್ನು ಯಾಕೆ ದುರ್ಬಳಕೆ ಮಾಡಿಕೊಂಡಿದ್ದೀರಿ ಇದಕ್ಕೆ ಮುಖ್ಯಮಂತ್ರಿಗಳೇ ಹೊಣೆಗಾರಿಕೆಯಾಗಬೇಕು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಅಲ್ಲದೆ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ರಾಜೀನಾಮೆ ಕೋಡಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆಗೆ ನಾವು ಮುಂದಾಗುತ್ತೇವೆ ಎಂದು ತಿಳಿಸಿದರು .