ಮನೆ ಮನೆಗೆ ಅಯೋಧ್ಯೆ ರಾಮಮಂದಿರ ಮಂತ್ರಾಕ್ಷತೆ ಹಂಚುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.01 : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವುದರಿಂದ ಮನೆ ಮನೆಗೆ ರಾಮಮಂದಿರ ಮಂತ್ರಾಕ್ಷತೆ ಹಂಚುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ಜೆ.ಸಿ.ಆರ್.ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸೋಮವಾರ ಚಾಲನೆ ನೀಡಿದರು.
ದೇಶದ ಪ್ರಧಾನಿ ಮೋದಿರವರ ಕರೆಯಂತೆ ಜನವರಿ 22 ರಂದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ ದೀಪವನ್ನು ಹಚ್ಚುವ ಮೂಲಕ ರಾಮಮಂದಿರ ಉದ್ಗಾಟನೆಗೆ ಭಕ್ತಿ ಸಮರ್ಪಿಸಬೇಕೆಂದು ಜನತೆಯಲ್ಲಿ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.
ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಮುರುಗೇಶ್‍ಗೌಡ್ರು, ನಾಗೇಶ್, ಬಿಜೆಪಿ.ನಗರಾಧ್ಯಕ್ಷ ನವೀನ್ ಚಾಲುಕ್ಯ, ನಗರಸಭೆ ಸದಸ್ಯೆ ಶ್ರೀಮತಿ ರೋಹಿಣಿ ಚಾಲುಕ್ಯ, ಸೋಮಶೇಖರ್, ರಮೇಶ್, ಕೃಷ್ಣಪ್ಪ, ಮಲ್ಲಿಕಾರ್ಜುನ್, ಡಾ.ಸಿದ್ದಾರ್ಥಗುಂಡಾರ್ಪಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಭಾರ್ಗವಿ ದ್ರಾವಿಡ್, ಮಯೂರಿ, ಗೀತಾ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.
ರಾಮ ಮಂದಿರದ ಮಂತ್ರಾಕ್ಷತೆಯನ್ನು ನಗರದ ವಿ.ಪಿ.ಬಡಾವಣೆ ಹಾಗೂ ಜೆಸಿಆರ್.ಬಡಾವಣೆಯಲ್ಲಿ ಸೋಮವಾರ ಮನೆ ಮನೆಗೆ ಹಂಚಲಾಯಿತು.
ಬಿಜೆಪಿ.ಯುವ ಮುಖಂಡ ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್ ಈ ವೇಳೆ ಮಾತನಾಡಿ ಜ.22 ರಂದು ಮನೆಗಳ ಮುಂದೆ ಉತ್ತರ ದಿಕ್ಕಿನಲ್ಲಿ ಐದು ದೀಪಗಳನ್ನು ಹಚ್ಚುವ ಮೂಲಕ ರಾಮಮಂದಿರ ಉದ್ಗಾಟನೆಗೆ ಭಕ್ತಿ ಅರ್ಪಿಸಬೇಕೆಂದು ವಿನಂತಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಯುವ ಮುಖಂಡರುಗಳಾದ ಡಾ.ಸಿದ್ದಾರ್ಥ, ಎಂ.ಸಿ.ರಘುಚಂದನ್, ಬಿಜೆಪಿ.ನಗರಾಧ್ಯಕ್ಷ ನವೀನ್ ಚಾಲುಕ್ಯ, ನಗರಸಭೆ ಸದಸ್ಯೆ ಶ್ರೀಮತಿ ರೋಹಿಣಿ ಚಾಲುಕ್ಯ, ಮುರುಗೇಶ್‍ಗೌಡ್ರು, ಭಾರ್ಗವಿ ದ್ರಾವಿಡ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.