For the best experience, open
https://m.suddione.com
on your mobile browser.
Advertisement

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ

02:07 PM Dec 08, 2023 IST | suddionenews
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.08 : ತಾಲ್ಲೂಕಿನ ತುರುವನೂರು ಹೋಬಳಿಯಲ್ಲಿ ಅಲ್ಪ ಪ್ರಮಾಣದಲ್ಲಿ ಕಡ್ಲೆ ಬಿತ್ತನೆ ಮಾಡಿದ್ದು, ಈ ಬೆಳೆಗೆ ಸದ್ಯ ಕಾಯಿ ಕೊರಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ.

Advertisement

ಹಾನಿಯ ಸ್ವರೂಪ : ಮರಿಗಳಾದ ತಕ್ಷಣ ಹಸಿರು ಭಾಗವನ್ನೆಲ್ಲಾ ತಿಂದು, ಎಲೆಗಳನ್ನು ಅಸ್ಥಿಪಂಜರದಂತಾಗಿಸುವುದರಿಂದ ಎಲೆ ಒಣಗಿ ಉದುರುತ್ತದೆ.ಅರಳಿದ ಹೂಗಳನ್ನು,ಬೀಜ ಕೋಶಗಳನ್ನು, ಕೊಂಬೆಗಳನ್ನು ತಿನ್ನುತ್ತಾ ಬೆಳೆಯುತ್ತವೆ. ಬೆಳೆದು ದೊಡ್ಡದಾದ ಹುಳುವು ಕಾಯಿಯಲ್ಲಿನ ಬೀಜಗಳನ್ನು ತಿಂದು ದೇಹದ ಅರ್ಧ ಭಾಗ ಒಳಗಡೆ, ಉಳಿದರ್ಧ ಭಾಗವು ಹೊರಗಡೆ ಇರುತ್ತದೆ. ಆದ್ದರಿಂದ ಇದಕ್ಕೆ ಔಷಧಿ ಸಿಂಪರಣೆ ಮಾಡುವ ಮೂಲಕ ಹುಳುವನ್ನು ನಿಯಂತ್ರಣಕ್ಕೆ ತರಬಹುದು.

ಇನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪಾಲುದಾರಿಕೆಯಲ್ಲಿ ವಿಮಾ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಇದರಲ್ಲಿ 18 ಹಿಂಗಾರು ಮತ್ತು 6 ಬೇಸಿಗೆ ಬೆಳೆಗಳು ಒಳಗೊಳ್ಳುತ್ತವೆ. ಇವುಗಳನ್ನು ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಇತರೇ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಲಾಗಿದೆ.ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ವಾಣಿಜ್ಯ ಅಥವಾ ಸಹಕಾರಿ ಬ್ಯಾಂಕ್ ನ್ನು ಸಂಪರ್ಕಿಸಬಹುದು.

Advertisement

ಚಿತ್ರದುರ್ಗ ಜಿಲ್ಲೆಯಲ್ಲಿ ಕಡಲೆ (ಮಳೆಯಾಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ),ಭತ್ತ(ನೀರಾವರಿ),ಗೋಧಿ(ನೀರಾವರಿ) ಬೆಳೆಗಳು ಒಳಗೊಳ್ಳುತ್ತವೆ.

ಅರ್ಜಿಯನ್ನು ಸಲ್ಲಿಸಲು ಈ ತಿಂಗಳ ಅಂದರೆ, ಡಿಸೆಂಬರ್ 15, ಕೊನೆಯ ದಿನವಾಗಿರುತ್ತದೆ. ಹಾಗೆಯೇ, ತುರುವನೂರು ಹೋಬಳಿಯಲ್ಲಿ ರೈತರಿಗೆ ಸಹಾಯಧನ ರೂಪದಲ್ಲಿ ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗುತ್ತಿದೆ. ಒಂದು ಎಕರೆ ಒಳಗಿನ ರೈತರು 2,496 ರೂಪಾಯಿ ಹಾಗೂ ಒಂದು ಎಕರೆ ಮೇಲ್ಪಟ್ಟ ರೈತರು 4,139 ರೂಪಾಯಿ ಹಣ ಪಾವತಿಸಿ ಘಟಕ (Spryncler)ಗಳನ್ನು ಪಡೆಯಬಹುದು ಎಂದು ತುರುವನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ್ ಅವರು ತಿಳಿಸಿದ್ದಾರೆ.

Tags :
Advertisement