For the best experience, open
https://m.suddione.com
on your mobile browser.
Advertisement

ಭಕ್ತಿ ನಿಜವಾದ ಸಂಪತ್ತಾಗಬೇಕಾದರೆ ಅಂತರಂಗ ಶುದ್ದವಾಗಿರಬೇಕು : ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು

05:25 PM Mar 17, 2024 IST | suddionenews
ಭಕ್ತಿ ನಿಜವಾದ ಸಂಪತ್ತಾಗಬೇಕಾದರೆ ಅಂತರಂಗ ಶುದ್ದವಾಗಿರಬೇಕು   ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.17 : ಭಕ್ತಿ ನಿಜವಾದ ಸಂಪತ್ತಾಗಬೇಕಾದರೆ ಅಂತರಂಗ ಶುದ್ದವಾಗಿರಬೇಕೆಂದು ಆದಿಶಂಕರಚಾರ್ಯ ಲಕ್ಷ್ಮಿನರಸಿಂಹ ಹರಿಹರಪುರದ ಪೀಠಾಧ್ಯಕ್ಷ ಸ್ವಾಮಿ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.

Advertisement

ಸುಣ್ಣಗಾರರ ಬೀದಿ ಕರುವಿನಕಟ್ಟೆ ವೃತ್ತದಲ್ಲಿರುವ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಷಢಾದಾರ ಪ್ರತಿಷ್ಠಾಪನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಲೋಕದ ಹಿತ ಕಲ್ಯಾಣಕ್ಕಾಗಿ ಭಗವಂತ ಭೂಮಿಗೆ ಬಂದ. ಕಾಲ ಕಾಲಕ್ಕೆ ತಕ್ಕಂತೆ ಭಗವಂತ ಅವತಾರ ತಾಳಿ ಸಾಕಾರ ಸ್ವರೂಪನಾಗಿರುತ್ತಾನೆ. ಭಕ್ತಿ ಮಾರ್ಗ, ಯೋಗ ಮಾರ್ಗ, ಜ್ಞಾನ ಮಾರ್ಗದ ಮೂಲಕ ಭಗವಂತನನ್ನು ಕಾಣಬಹುದು. ಎಲ್ಲಾ ಜೀವಿಗಳಲ್ಲಿರುವ ಮೂಲಭೂತ ಅಂಶವೆಂದರೆ ಚೈತನ್ಯ, ಜೀವ ಜಗತ್ತನ್ನು ನಿಯಂತ್ರಿಸುವ ಮಹಾ ಚೇತನವೆಂದರೆ ಭಗವಂತ ಎಂದು ತಿಳಿಸಿದರು.

ವಿಜ್ಞಾನ ಮುಂದಿಟ್ಟುಕೊಂಡು ತತ್ವಜ್ಞಾನ ಹರಿಸಬೇಕಿದೆ. ಭಕ್ತರ ಮಾತನ್ನು ಸತ್ಯಗೊಳಿಸಲು ಭಗವಂತ ನರಸಿಂಹಾವತಾರವಾಗುತ್ತಾನೆ. ಪ್ರತಿಯೊಬ್ಬ ಮಾನವನ ಕಷ್ಟ-ಸುಖಗಳಿಗೆ ಕರ್ಮವೆ ಕಾರಣ. ಅದಕ್ಕಾಗಿ ದೇವರನ್ನು ದೂಷಿಸಬಾರದು. ಸಂವಿಧಾನದ ಮೇಲೆ ಗೌರವವಿರಬೇಕು. ದೇವರಲ್ಲಿ ಶುದ್ದ ಭಕ್ತಿಯಿಟ್ಟುಕೊಳ್ಳಬೇಕೆಂದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ ದೇವಸ್ಥಾನ ಕಟ್ಟುವುದು ಸುಲಭವಲ್ಲ ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ. ಒಂದು ಕಾಲದಲ್ಲಿ ಚಹ ಮಾರುತ್ತಿದ್ದ ಹುಡುಗ ಈಗ ದೇಶದ ಪ್ರಧಾನಿಯಾಗಿ ದೇಶ ಕಟ್ಟುವ ಕೆಲಸ ಮಾಡುತ್ತಿಲ್ಲವೇ? ಕಠಿಣ ಪರಿಶ್ರಮ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು.

ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಮಾತನಾಡುತ್ತ ದೇವರು ಸರ್ವಾಂತರ್‍ಯಾಮಿ. ಪ್ರತಿಯೊಬ್ಬರು ಸನ್ಮಾರ್ಗ ಸತ್ಯದ ದಾರಿಯಲ್ಲಿ ನಡೆಯಬೇಕು. ಅಸತ್ಯದಿಂದ ಸತ್ಯದ ಕಡೆಗೆ, ಕತ್ತೆಲೆಯಿಂದ ಬೆಳಕಿನೆಡೆಗೆ ಹೋಗಲು ದೇವಸ್ಥಾನ ಬೇಕು. ಇಡಿ ಸಮಾಜವನ್ನು ಒಂದು ಮಾಡುವುದಕ್ಕೆ ಓಂಕಾರ್ ದೇವಸ್ಥಾನ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರೆ. ಎಲ್ಲರೂ ಅವರಿಗೆ ಕೈಜೋಡಿಸಿ ಎಂದು ವಿನಂತಿಸಿದರು.

ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ, ಡಾ.ಶಾಂತವೀರಸ್ವಾಮೀಜಿ, ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ, ಕೃಷ್ಣಯಾದವನಾಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ನಗರಸಭೆ ಸದಸ್ಯ ಎನ್.ಚಂದ್ರಶೇಖರ್, ದೇವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎನ್.ಓಂಕಾರ್ ವೇದಿಕೆಯಲ್ಲಿದ್ದರು.
ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ನಿರ್ದೇಶಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags :
Advertisement