For the best experience, open
https://m.suddione.com
on your mobile browser.
Advertisement

ಜಾನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು : ಡಾ.ಬಸವರಾಜ್

06:59 PM Nov 11, 2024 IST | suddionenews
ಜಾನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು   ಡಾ ಬಸವರಾಜ್
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 11 : ಜಾನಪದ ಕಲೆಗಳು ದೂರವಾಗುತ್ತಿರುವುದರಿಂದ ಮನುಷ್ಯ ಸಂಬಂಧಗಳ ನಡುವೆ ಬಿರುಕುಂಟಾಗಿ ದ್ವೇಷ, ಅಸೂಯೆ ಜಾಸ್ತಿಯಾಗುತ್ತಿದೆ ಎಂದು ರಂಗ ವಿಮರ್ಶಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ್ ವಿಷಾಧಿಸಿದರು.

Advertisement

ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಕಾಲ್ಕೆರೆ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಇವರುಗಳ ಸಂಯುಕ್ತಾಶ್ರಯದಲ್ಲಿ ಮದಕರಿಪುರದ ಬಯಲು ರಂಗಮಂದಿರದಲ್ಲಿ ನಡೆದ ಸಾಂಸ್ಕøತಿಕ ಜಾನಪದ ಸಂಭ್ರಮ ಹಾಗೂ ಸನ್ಮಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ಒಂದು ಕಾಲದಲ್ಲಿ ಜಾನಪದ ಪರಂಪರೆಯನ್ನು ಹೊಂದಿದ್ದ ಮದಕರಿಪುರದಲ್ಲಿ ಈಗ ಜಾನಪದ ಕಲೆಗಳು ಕಾಣೆಯಾಗುತ್ತಿವೆ. ಮೊಬೈಲ್ ಹಾವಳಿಯಿಂದ ಸೋನಾನೆ ಪದ ನಾಟಕ, ರಂಗಗೀತೆ, ಭಾವಗೀತೆ, ದಾಸರಪದ ಇವುಗಳನ್ನು ಹಾಡುವವರೆ ಇಲ್ಲದಂತಾಗಿದ್ದಾರೆ. ಸಾಮರಸ್ಯವನ್ನು ಮೂಡಿಸುವ ಜಾನಪದ ಉಳಿಯಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಚಯಿಸಬೇಕು. ಜಾನಪದ ಕಲೆ ಬದುಕಿಗೆ ಅನಿವಾರ್ಯ. ಮನಸ್ಸಿಗೆ ಮುದ ನೀಡುತ್ತದೆ. ಕೃಷಿ ಸಂಸ್ಕøತಿ ಮರೆಯಾದಂತೆ ಜಾನಪದ ಕೂಡ ಸೊರಗುತ್ತಿದೆ. ಆತ್ಮ, ಮನಸ್ಸಿನ ಶುದ್ದೀಕರಣಕ್ಕೆ ಅತಿ ಮುಖ್ಯವಾಗಿರುವ ಜಾನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಿದೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ನುಂಕಪ್ಪ ಮಾತನಾಡಿ ಜಾಗತಿಕರಣದ ಕೊಳ್ಳುಬಾಕು ಸಂದರ್ಭದಲ್ಲಿ ಜಾನಪದ ಸಂಭ್ರಮ ನಡೆಯುತ್ತಿರುವುದು ಅತ್ಯಂತ ಖುಷಿಯ ವಿಚಾರ. ಡಿಜಿಟಲ್ ಯುಗದಲ್ಲಿ ಸಾಂಸ್ಕøತಿಕ ಕನ್ನಡಿ ಹೊಡೆದು ಚೂರಾಗಿದೆ. ಜನರ ಜೀವಾಳ ಜನಪದ ಮೌಖಿಕ ಪರಂಪರೆ. ಕೋಲಾಟ, ಗೀಗಿಪದ, ಸೋಬಾನೆ ಪದ, ಯಕ್ಷಗಾನ, ಕಂಸಾಳೆ ಇನ್ನು ಅನೇಕ ಕಲೆಗಳಿಂದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಬಹುದು ಎಂದರು.

ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್, ನ್ಯಾಯವಾದಿಗಳಾದ ಡಾ.ಎಂ.ಸಿ.ನರಹರಿ, ಕಿರಣ್‍ಕುಮಾರ್ ಜೈನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣಪ್ಪ ಹುಲ್ಲೂರು, ಕೊಳಲು ವಾದಕ ಗುರುರಾಜ್ ಇವರುಗಳು ವೇದಿಕೆಯಲ್ಲಿದ್ದರು. ತ್ರಿವೇಣಿ, ಬಡಾವಣೆ ಠಾಣೆ ಸಬ್‍ಇನ್ಸ್‍ಪೆಕ್ಟರ್ ಯಶೋಧ, ಹರೀಶ್ ಇವರುಗಳು ಜಾನಪದ ಹಾಡುಗಳನ್ನು ಹಾಡಿ ಮದಕರಿಪುರ ಗ್ರಾಮಸ್ಥರನ್ನು ರಂಜಿಸಿದರು. ಸೋಬಾನೆ ಪದ, ಗೀಗಿ ಪದ, ಜಾನಪದ ಕಲಾವಿದರು, ಬೀದಿ ನಾಟಕಕಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Tags :
Advertisement