Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಬೆಂಕಿ : ಹಲವು ದಾಖಲೆಗಳು ಬೆಂಕಿಗಾಹುತಿ...!

04:27 PM Dec 07, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 07 : ಜಿಲ್ಲಾಧಿಕಾರಿಯ ಕಚೇರಿಯ ಆವರಣದಲ್ಲಿರುವ ಹಲವು ದಾಖಲೆಗಳನ್ನು ಇಟ್ಟಿದ್ದ ತಗಡಿನಶೆಡ್ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ  ಘಟನೆ ಇಂದು ಬೆಳಿಗ್ಗೆ 11 : 30 ರ ಸುಮಾರಿಗೆ ನಡೆದಿದೆ. ಈ ವೇಳೆ ಬೆಂಕಿಗೆ ಹಲವು ದಾಖಲೆಗಳು ನಾಶವಾಗಿವೆ. ವಿಷಯ ತಿಳಿಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅಷ್ಟರೊಳಗೆ ಸಾಕಷ್ಟು ದಾಖಲೆಗಳು ಸುಟ್ಟು ಕರಕಲಾಗಿದ್ದವು. ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ ಸಾಕಷ್ಟು ಶ್ರಮ ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿ ಅವಘಡದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ತಿಳಿಗೊಳಿಸುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.ಬೆಂಕಿಯ ಅವಘಡ ಸಂಭವಿಸಿದಾಗ ಯಾರಿಗೂ ಯಾವುದೇ ಪ್ರಾಣಾಯಾಮವಾಗಿಲ್ಲ. ಆದರೆ ಬೆಂಕಿ ಹೊತ್ತಿದ ರೀತಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಸಕ್ಕೆ ಹಾಕಿದ್ದ ಬೆಂಕಿ ಹರಡಿದ್ದೇಗೆ..? ಅದರಲ್ಲೂ ದಾಖಲೆಗಳನ್ನು ಸಂಗ್ರಹಿಸಿಟ್ಟ ಕೋಣೆಗೆ ಅಷ್ಟೊಂದು ಬೆಂಕಿ ಹತ್ತುವುದು ಅಂದರೆ ಏನು..? ಹೀಗೆ ನೂರೆಂಟು ಅನುಮಾನಗಳು ಕಾಡುವುದಕ್ಕೆ ಶುರುವಾಗಿದೆ. ಈ ಬೆಂಕಿ ಹೊತ್ತಿರುವ ಕಾರಣ ದಾಖಲೆಗಳು ಸುಟ್ಟು ಹೋಗಿವೆ. ತನಿಖೆಯ ಬಳಿಕವಷ್ಟೇ ಬೆಂಕಿ ಹತ್ತಿದ್ದೇಗೆ ಎಂಬ ಸತ್ಯ ತಿಳಿಯಲಿದೆ.

Advertisement

Advertisement
Tags :
bengaluruchitradurgaChitradurga DC officefirekannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಚಿತ್ರದುರ್ಗ ಜಿಲ್ಲಾಧಿಕಾರಿದಾಖಲೆಗಳುಬೆಂಕಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article