ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ಬಿಡುಗಡೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ : ಸಂಸದ ಗೋವಿಂದ ಕಾರಜೋಳ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ, ಜೂ.29 : ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ಹಣ ನೀಡುವ ವಿಚಾರದಲ್ಲಿ, ಕಳೆದ ಬಜೆಟ್‍ನಲ್ಲಿ ಘೋಷಿಸಿದಂತೆ 5300 ಕೋಟಿ ಬಿಡುಗಡೆಯಾಗುತ್ತದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ್ದಾರೆಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು. ಚಿತ್ರದುರ್ಗದ ಈ ಭಾಗಕ್ಕೆ ಅಪ್ಪರ್ ಭದ್ರಾ ಯೋಜನೆ ಅತೀ ಅವಶ್ಯಕವಾಗಿದೆ. ಯೋಜನೆ ಜಾರಿಯಾಗುವುದರಿಂದ ಲಕ್ಷಾಂತರ ಭೂಮಿ ನೀರಾವರಿ ಯಾಗಲಿದೆ. ಇದುವರೆಗೂ ರಾಜ್ಯ ಸರ್ಕಾರ ಈ ಯೋಜನೆಗೆ ಇದುವರೆಗೂ ಖರ್ಚು ಮಾಡಿರುವ ಬಗ್ಗೆ, ಕೇಂದ್ರದ ಜಲಶಕ್ತಿ ಕೇಂದ್ರಕ್ಕೆ ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಸಂಪೂರ್ಣ ಮಾಹಿತಿ ಯನ್ನು ಕೊಟ್ಟರೆ , ಆಗ ಹಣ ಬಿಡುಗಡೆಯಾಗಲಿದೆ ಎಂದು ದೆಹಲಿಯ ಸಂಸದರ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸುವಂತೆ ಆ ಸಭೆಯಲ್ಲಿ ಸಿಎಂಗೆ ಮನವಿ ಮಾಡಲಾಯಿತು.
ಕೇಂದ್ರೀಯ ವಿದ್ಯಾಲಯ: ರಾಜ್ಯದ ಹಲವೆಡೆಗಳಲ್ಲಿ ಕೇಂದ್ರ ಸರ್ಕಾರ ಕೇಂದ್ರೀಯ ವಿದ್ಯಾಲಯಗಳನ್ನು ತೆರೆದಿದೆ. ಆದರೆ ಚಿತ್ರದುರ್ಗದಲ್ಲಿ ಇಲ್ಲ. ಇಲ್ಲಿಗೂ ಸಹ ಕೇಂದ್ರೀಯ ವಿದ್ಯಾಲಯ ತೆರೆಯುವಂತೆ ಕೇಂದ್ರದ ಸಚಿವ ಧರ್ಮೇಂದ್ರ ಕುಮಾರ್ ಗೆ ಮನವಿ ಮಾಡಲಾಗಿದೆ. ಈ ಕೇಂದ್ರ ಪ್ರಾರಂಭವಾಗುವುದರಿಂದ ಬಡ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿ ಸೌಲಭ್ಯ ಸಿಗಲಿದೆ. ಚಿತ್ರದುರ್ಗದಲ್ಲಿ ವಿದ್ಯಾಲಯ ಸ್ಥಾಪನೆ ಬಗ್ಗೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.
ರೈಲು ನಿಲುಗಡೆಗೆ ಮನವಿ : ಚಿತ್ರದುರ್ಗ ರೈಲ್ವೇ ನಿಲ್ದಾಣದಲ್ಲಿ ಹಲವು ರೈಲುಗಳು ಸಂಚರಿಸುತ್ತಿದ್ದು, ಮತ್ತಷ್ಟು ರೈಲುಗಳ ನಿಲುಗಡೆಯಾಗಬೇಕೆಂದು ಪ್ರಯಾಣಿಕರು ಬಯಸಿದ ಹಿನ್ನೆಲೆಯಲ್ಲಿ, ವಾಸ್ಕೋಡಿಗಾಮ ಯಶವಂತಪುರ, ಬೆಳಗಾವಿ ವಾಸ್ಕೋಡಿಗಾಮ, ವಿಶ್ವಮಾನವ, ಚಾಲುಕ್ಯ, ಗೋಲುಗುಮ್ಮಟ, ಸೇರಿಂದತೆ ಇತರೇ ರೈಲುಗಳನ್ನು ನಿಲ್ಲಿಸುವಂತೆ ರೈಲ್ವೇ ಸಚಿವ ಆಶ್ವಿನ್ ಹಾಗೂ ಸೋಮಣ್ಣ ಅವರಲ್ಲಿ ಮನವಿ ಮಾಡಲಾಗಿದೆ ಎಂದ ಸಂಸದರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಗಾಗಿ, ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತಿದೆ. ಕೇಂದ್ರದ ಕೆಲವು ಯೋಜನೆಗಳು ನೇರವಾಗಿ ಬರುತ್ತವೆ. ಮತ್ತೆ ಕೆಲವು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬರುತ್ತವೆ. ರೈಲ್ವೇ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರ ಶೇ. 80 ರಷ್ಟು ಭೂಮಿ ವಶಪಡಿಸಿಕೊಳ್ಳಬೇಕು. ಹಾಗೂ ಯೋಜನೆಯ ಶೇ.50ರಷ್ಟು ಹಣವನ್ನು ನೀಡಿದರೆ, ಆಗ ಯೋಜನೆ ಕಾರ್ಯಗತವಾಗಲು ಸಾಧ್ಯ ಎಂದರು.
ದಾವಣಗೆರೆ ಮತ್ತು ತುಮಕೂರು ರೈಲ್ವೇ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು, ಯೋಜನೆ ಯಾವ ಸ್ಥಿತಿಯಲ್ಲಿದೆ ಎಂದು ಮಾಹಿತಿ ಪಡೆದು, ಖುದ್ದು ಸ್ಥಳ ಪರಿಶೀಲನೆ ಮಾಡಲಾಗುವುದು ಎಂದರು.
ಈ ಸಮಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ. ಮುರುಳಿ ಮಾಜಿ ಶಾಸಕ ತಿಪ್ಪಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಧುರಿ ಗಿರೀಶ್, ಸುರೇಶ್ ಸಿದ್ದಾಪುರ, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.