For the best experience, open
https://m.suddione.com
on your mobile browser.
Advertisement

ಪ್ರಜ್ವಲ್ ರೇವಣ್ಣ ವಿರುದ್ಧ ಪೋಕ್ಸೋ ಸುಮೊಟೋ ಕೇಸು ದಾಖಲಿಸಿ : ವಕೀಲ ಡಾ. ಎಂ.ಸಿ.ನರಹರಿ ಆಗ್ರಹ

02:28 PM May 01, 2024 IST | suddionenews
ಪ್ರಜ್ವಲ್ ರೇವಣ್ಣ ವಿರುದ್ಧ ಪೋಕ್ಸೋ ಸುಮೊಟೋ ಕೇಸು ದಾಖಲಿಸಿ   ವಕೀಲ ಡಾ  ಎಂ ಸಿ ನರಹರಿ ಆಗ್ರಹ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಮೇ. 01: ಸಂಸದ ಪ್ರಜ್ವಲ್ ರೇವಣ್ಣನಿಂದ ಅನೇಕರ ಮೇಲೆ ಅತ್ಯಾಚಾರ, ಲೈಂಗಿಕ ರಾಸಲೀಲೆ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ಕೊಡಬೇಕು ಅಪ್ರಾಪ್ತ ಬಾಲಕಿಯರು ಇದರಲ್ಲಿ ಇದ್ದು ಕೂಡಲೇ ಪೋಕ್ಸೋ ಸುಮೊಟೋ ಕೇಸು ದಾಖಲು ಮಾಡಲು ಹಿರಿಯ ವಕೀಲ ಡಾ. ಎಂ.ಸಿ.ನರಹರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವೇಗೌಡರೇ ನಿಮ್ಮ ಮನೆಯ ಮಾನ ಮರ್ಯಾದೆ ಮತ್ತು ಪಕ್ಷದ ಮಾನ ಮೊಮ್ಮಗನಿಂದಲೇ ಹರಾಜಾಗಿದೆ. ದೇವೇಗೌಡರೇ ನಿಮ್ಮ ಜೆಡಿಎಸ್ ಪಕ್ಷದ ಚಿನ್ಹೆಯನ್ನು ಚೆಂಚ್ ಮಾಡಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ಅಜ್ಜ ಪ್ರಧಾನಿ,ಅಪ್ಪ ಸಚಿವ, ಚಿಕ್ಕಪ್ಪ ಮುಖ್ಯಮಂತ್ರಿ, ಆಂಟಿ ಶಾಸಕಿ, ಅಮ್ಮ ಜಿಪಂ ಸದಸ್ಯೆ, ತಮ್ಮ ಎಂ ಎಲ್ ಸಿ ಆಗಿದ್ರು ಇವನು ಎಂಪಿ. ಲೋಪರ್. ಭಾರತ ಕಂಡ ಲಂಪಟ ಸಂಸದ ಇದು  ಭಾರತಾಂಬೆ  ಭಾರತ ಮಾತೆ ಹೆಸರು ಹೇಳುವ ಬಿಜೆಪಿ ಗೆ ಅತ್ಯಂತ ಮುಜುಗರ. ಇದು ಕಮಲದ ಕರ್ಮವಾಗಿದೆ ಜೆಡಿ ಎಸ್ ತೆನೆಹೊತ್ತ ಮಹಿಳಾ ಗುರುತಿಗೆ ನಿಜಕ್ಕೂ ಅವಮಾನ ವಾಗಿದೆ ಎಂದರು.

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಹಿಳಾ ಆಯೋಗದ ಬಳಿಕ ಈಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಂಟ್ರಿ ಕೊಟ್ಟಿದೆ. ಈ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್‍ಗೆ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಪತ್ರ ಬರೆದಿದ್ದಾರೆ.

ಸಂತ್ರಸ್ತೆ ಒಬ್ಬರು ತನ್ನ ಮಗಳ ಜೊತೆ ಕೂಡ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದು ಪ್ರಕರಣದಲ್ಲಿ ಆರೋಪಿ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಬಳಸಿಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಅನುಮಾನ ಇದೆ.  ಹಾಗಾಗಿ ಪ್ರಕರಣದಲ್ಲಿ ಆರೋಪಿಯಿಂದ ಅಪ್ರಾಪ್ತ ಹೆಣ್ಣು ಮಕ್ಕಳ ಬಳಕೆ ಪತ್ತೆಯಾದಲ್ಲಿ ಈ ಬಗ್ಗೆ ವರದಿ ನೀಡುವಂತೆ ಎಸ್‍ಐಟಿಗೆ ಪತ್ರ ಬರೆದಿದ್ದಾರೆ

ಅಂಬೇಡ್ಕರ್ ಬರೆದ ಸಂವಿಧಾನದ ಮಾನಹರಣವಾಗಿದೆ. ಸಂಸತ್‍ನಲ್ಲಿ ಧ್ವನಿಯಾಗಬೇಕಾಗಿದ್ದವೇ ಕಾಮುಕನಾಗಿದ್ದಾನೆ.  ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡಿರುವರಲ್ಲಿ ಅವಿವಾಹಿತ ಯುವತಿಯರಿದ್ದು ಅವರನ್ನು ಪ್ರಜ್ವಲ್ ವಿವಾಹವಾಗಲಿ ತೆನೆ ಹೊತ್ತ ಮಹಿಳೆ ಬದಲು ಜನ ಪೆನ್ ಡ್ರೈವ್ ಹೊತ್ತ ಮಹಿಳಾ ಎನ್ನುತ್ತಿದ್ದಾರೆ. ಜೂನಿಯರ್ ದೇವೇಗೌಡರನ್ನು ಕೂಡಲೇ ಜರ್ಮನ್‍ನಲ್ಲೇ ಬಂಧಿಸಲಿ. ಒಂದು ವೇಳೆ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಆಯೋಗ ಪೋಕ್ಸೋ ಪ್ರಕರಣದಡಿ ದೂರು ದಾಖಲಿಸಲು ವಕೀಲ ಡಾ. ಎಂ.ಸಿ.ನರಹರಿ ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ಓಬಳೇಶ್ ಮತ್ತು ಶಶಿಕುಮಾರ್ ಭಾಗವಹಿಸಿದ್ದರು.

Advertisement
Tags :
Advertisement