Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸರ್ಕಾರಗಳ ವಿರುದ್ದ ಹೋರಾಡುವುದು ಜನತಾ ಸ್ವರಾಜ್ಯ ಸಂಘಟನೆ ಉದ್ದೇಶ : ಎಂ.ಹೆಚ್.ಶಶಿಧರ್

06:05 PM Jul 27, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ.27 : ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಹೋರಾಟ ನಡೆಸುವ ಮೂಲಕ ಪರಿಹರಿಸುವ ಪ್ರಯತ್ನ ಮಾಡಲಾಗುವುದೆಂದು ಜನತಾ ಸ್ವರಾಜ್ಯ ಸಂಘಟನೆ ರಾಜ್ಯಾಧ್ಯಕ್ಷ ಎಂ.ಹೆಚ್.ಶಶಿಧರ್ ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟು ಹೋರಾಡಲಾಗುವುದು. ಮಹಿಳೆ ಮಕ್ಕಳ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಇವುಗಳ ವಿರುದ್ದ ಹೋರಾಡಿ ಆಳುವ ಸರ್ಕಾರಗಳ ಕಣ್ಣು ತೆರೆಸುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಜನತಾ ಸ್ವರಾಜ್ಯ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್ ಕಳ್ಳಿಹಟ್ಟಿ ಮಾತನಾಡುತ್ತ ಕಳೆದ ಎರಡು ವರ್ಷಗಳಿಂದಲು ಸಂಘಟನೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವುದರ ವಿರುದ್ದ ಜಾಗೃತಿ ಮೂಡಿಸುವುದು ಸಂಘಟನೆಯ ಗುರಿ ಎಂದರು.

ರಾಜ್ಯ ವಕ್ತಾರ ಬಿ.ಎನ್.ಅಜಯ್‌ಬಾಬು, ಲಲಿತಾ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Tags :
bengaluruchitradurgafight againstgovernment'sJanata Swarajya SanghataneMH Shashidharsuddionesuddione newsಎಂ.ಹೆಚ್.ಶಶಿಧರ್ಚಿತ್ರದುರ್ಗಜನತಾ ಸ್ವರಾಜ್ಯ ಸಂಘಬೆಂಗಳೂರುವಿರುದ್ದಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article