For the best experience, open
https://m.suddione.com
on your mobile browser.
Advertisement

ದಲಿತ ಚಳುವಳಿಗೆ ಐವತ್ತು ವರ್ಷ : ಆಗಸ್ಟ್ 7 ರಂದು ಬೆಂಗಳೂರು ಚಲೋ

06:48 PM Aug 02, 2024 IST | suddionenews
ದಲಿತ ಚಳುವಳಿಗೆ ಐವತ್ತು ವರ್ಷ   ಆಗಸ್ಟ್ 7 ರಂದು ಬೆಂಗಳೂರು ಚಲೋ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷಗಳು ತುಂಬಿರುವುದರಿಂದ ಆ.7 ರಂದು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

Advertisement

ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಪ್ಪ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಅಂಬೇಡ್ಕರ್ ಭವನದಲ್ಲಿ ಐವತ್ತು ವರ್ಷಗಳ ಸಂಭ್ರಮೋತ್ಸವಕ್ಕೆ ಜಿಲ್ಲೆಯ ಆರು ತಾಲ್ಲೂಕುಗಳಿಂದಲೂ ದಲಿತರು ಹೊರಡಬೇಕು. ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟುಹಾಕಿದ ಪ್ರೊ.ಬಿ.ಕೃಷ್ಣಪ್ಪನವರು ನಾಡಿನಾದ್ಯಂತ ಚಳುವಳಿಯನ್ನು ಹಬ್ಬಿಸಿದ್ದಾರೆ. ಹಾಗಾಗಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮೋತ್ಸವದಲ್ಲಿ ಭಾಗವಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಶಕ್ತಿ ತುಂಬುವಂತೆ ಕೆಂಗುಂಟೆ ಜಯಪ್ಪ ಮನವಿ ಮಾಡಿದರು.

Advertisement

ಭ್ರಷ್ಠಾಚಾರ ಮುಕ್ತ ವೇದಿಕೆ ರಾಜ್ಯಾಧ್ಯಕ್ಷ ಓಬಳೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೊಳಲ್ಕೆರೆ ತಾಲ್ಲೂಕು ಸಂಚಾಲಕ ಸುಂದರಮೂರ್ತಿ, ಚಿತ್ರದುರ್ಗ ತಾಲ್ಲೂಕು ನೂತನ ಸಂಚಾಲಕ ಗುರುಮೂರ್ತಿ, ಸೋಮಶೇಖರ್, ನವೀನ್, ಶಿವಣ್ಣ, ಶ್ರೀನಿವಾಸ್, ಪ್ರಭು, ಮಂಜಣ್ಣ, ಗೌರಮ್ಮ, ವೆಂಕಟೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags :
Advertisement