Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಫೆಬ್ರವರಿ 23 ಮತ್ತು 24 ರಂದು ಶ್ರೀದೇವಿ ಭೂದೇವಿ ಸಹಿತ ಕಲ್ಯಾಣೋತ್ಸವ ಮತ್ತು ಚನ್ನಕೇಶವಸ್ವಾಮಿ ರಥೋತ್ಸವ

07:53 PM Feb 21, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.21 : ಆಕಾಶವಾಣಿ ಸಮೀಪವಿರುವ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಫೆ.23 ಮತ್ತು 24 ರಂದು ಶ್ರೀದೇವಿ ಭೂದೇವಿ ಸಹಿತ ಕಲ್ಯಾಣೋತ್ಸವ ಮತ್ತು ಚನ್ನಕೇಶವಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

23 ರಂದು ಬೆಳಿಗ್ಗೆ 10 ಗಂಟೆಯಿಂದ ಅಂಕುರಾರ್ಪಣ, ಧ್ವಜಾರೋಹಣ, ಕಲಶ ಸ್ಥಾಪನೆ, ನವಗ್ರಹ ಪೂಜೆ, ಹೋಮ, ವಾಸ್ತು ಶಾಂತಿ ಹೋಮ, ರಾಕ್ಷೋಘ್ನ ಹೋಮ ನೆರವೇರಲಿದೆ.
ಮಧ್ಯಾಹ್ನ 3-30 ರಿಂದ 5-30 ರವರೆಗೆ ಕೆಳಗೋಟೆ ಮತ್ತು ಸಿ.ಕೆ.ಪುರ ಬಡಾವಣೆಗಳಲ್ಲಿ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಸಾಗಲಿದೆ.
ಸಂಜೆ 6 ರಿಂದ 8-30 ರವರೆಗೆ ಸ್ವಾಮಿಯ ಕಲ್ಯಾಣೋತ್ಸವ. ರಾತ್ರಿ 8-30 ರಿಂದ 9 ಗಂಟೆಯವರೆಗೆ ಚನ್ನಕೇಶವಸ್ವಾಮಿಯ ಅಷ್ಠಾವಧಾನ ಪೂರ್ವಕವಾಗಿ ಉಯ್ಯಾಲೋತ್ಸವ ನಂತರ ಪ್ರಸಾದ ವಿನಿಯೋಗ.

24 ರಂದು ಮಧ್ಯಾಹ್ನ 12-20 ರಿಂದ 1-18 ರವರೆಗೆ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ರಥೋತ್ಸವ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನ ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಸಂಚಾಲಕರಾದ ಫಾತ್ಯರಾಜನ್ ವಿನಂತಿಸಿದ್ದಾರೆ.

Advertisement
Tags :
bengaluruChannakesavaswamyChariotsavamchitradurgafebruaryKalyanotsavaSridevi Bhudevisuddionesuddione newsಕಲ್ಯಾಣೋತ್ಸವಚನ್ನಕೇಶವಸ್ವಾಮಿಚಿತ್ರದುರ್ಗಫೆಬ್ರವರಿಬೆಂಗಳೂರುಭೂದೇವಿರಥೋತ್ಸವಶ್ರೀದೇವಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article