ಚಿತ್ರದುರ್ಗದಲ್ಲಿ ಫೆಬ್ರವರಿ 23 ಮತ್ತು 24 ರಂದು ಶ್ರೀದೇವಿ ಭೂದೇವಿ ಸಹಿತ ಕಲ್ಯಾಣೋತ್ಸವ ಮತ್ತು ಚನ್ನಕೇಶವಸ್ವಾಮಿ ರಥೋತ್ಸವ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.21 : ಆಕಾಶವಾಣಿ ಸಮೀಪವಿರುವ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಫೆ.23 ಮತ್ತು 24 ರಂದು ಶ್ರೀದೇವಿ ಭೂದೇವಿ ಸಹಿತ ಕಲ್ಯಾಣೋತ್ಸವ ಮತ್ತು ಚನ್ನಕೇಶವಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
23 ರಂದು ಬೆಳಿಗ್ಗೆ 10 ಗಂಟೆಯಿಂದ ಅಂಕುರಾರ್ಪಣ, ಧ್ವಜಾರೋಹಣ, ಕಲಶ ಸ್ಥಾಪನೆ, ನವಗ್ರಹ ಪೂಜೆ, ಹೋಮ, ವಾಸ್ತು ಶಾಂತಿ ಹೋಮ, ರಾಕ್ಷೋಘ್ನ ಹೋಮ ನೆರವೇರಲಿದೆ.
ಮಧ್ಯಾಹ್ನ 3-30 ರಿಂದ 5-30 ರವರೆಗೆ ಕೆಳಗೋಟೆ ಮತ್ತು ಸಿ.ಕೆ.ಪುರ ಬಡಾವಣೆಗಳಲ್ಲಿ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಸಾಗಲಿದೆ.
ಸಂಜೆ 6 ರಿಂದ 8-30 ರವರೆಗೆ ಸ್ವಾಮಿಯ ಕಲ್ಯಾಣೋತ್ಸವ. ರಾತ್ರಿ 8-30 ರಿಂದ 9 ಗಂಟೆಯವರೆಗೆ ಚನ್ನಕೇಶವಸ್ವಾಮಿಯ ಅಷ್ಠಾವಧಾನ ಪೂರ್ವಕವಾಗಿ ಉಯ್ಯಾಲೋತ್ಸವ ನಂತರ ಪ್ರಸಾದ ವಿನಿಯೋಗ.
24 ರಂದು ಮಧ್ಯಾಹ್ನ 12-20 ರಿಂದ 1-18 ರವರೆಗೆ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ರಥೋತ್ಸವ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನ ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಸಂಚಾಲಕರಾದ ಫಾತ್ಯರಾಜನ್ ವಿನಂತಿಸಿದ್ದಾರೆ.