Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಫಾತಿಮಶೇಕ್, ಸಾವಿತ್ರಿಬಾಯಿಪುಲೆ ಜನ್ಮದಿನಾಚರಣೆ

06:32 PM Jan 09, 2024 IST | suddionenews
Advertisement

Fatimashek, Savitribaipule Birthday Celebration from Karnataka Muslim Cultural Academy

Advertisement

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಫಾತಿಮಶೇಕ್, ಸಾವಿತ್ರಿಬಾಯಿಪುಲೆ ಜನ್ಮದಿನಾಚರಣೆ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.09 : ಉಮರ್ ಸರ್ಕಲ್‍ನಲ್ಲಿರುವ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಕಚೇರಿಯಲ್ಲಿ ಫಾತಿಮಶೇಕ್ ಹಾಗೂ ಸಾವಿತ್ರಿಬಾಯಿ ಪುಲೆ ಇವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಮಾತನಾಡಿ ಶಿಕ್ಷಣದಿಂದ ಮಹಿಳೆಯರು ವಂಚಿತರಾಗಿದ್ದ ಕಾಲದಲ್ಲಿ ಫಾತಿಮಶೇಕ್ ಹಾಗೂ ಸಾವಿತ್ರಿಬಾಯಿ ಪುಲೆ ಇವರುಗಳು ಅಕ್ಷರವನ್ನು ಕಲಿಸಿದ್ದರ ಫಲವಾಗಿ ಇಂದು ಮಹಿಳೆಯರು ಸಾಕ್ಷರರಾಗಿದ್ದಾರೆ.

ಫಾತಿಮಶೇಕ್‍ರವರು ಭೀಡೆವಾಡಾದ ಪುಲೆಯವರ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ಮನೆ ಮನೆಗೆ ಹೋಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರುಗಳನ್ನು ಪ್ರೇರೇಪಿಸುತ್ತಿದ್ದರು. ಸಾವಿತ್ರಿಬಾಯಿ ಪುಲೆ ಹಾಗೂ ಫಾತಿಮಶೇಕ್ ಇವರುಗಳ ಕೊಡುಗೆ ಇಲ್ಲದೆ ಹೋಗಿದ್ದರೆ ಹೆಣ್ಣು ಮಕ್ಕಳು ಶಿಕ್ಷಣವಂತರಾಗುತ್ತಿರಲಿಲ್ಲ. ಆದರೂ ಭಾರತದ ಇತಿಹಾಸದಲ್ಲಿ ಫಾತಿಮಶೇಕ್‍ರವರನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಕಾರ್ಯಾಧ್ಯಕ್ಷ ಅಬ್ದುಲ್ಲಾ ಎ.ಹೆಚ್. ಸಿರಾಜ್, ಹೆಚ್.ಆರ್.ಮಹಮದ್, ಜಮೀರ್ ಈ ಸಂದರ್ಭದಲ್ಲಿದ್ದರು.

Advertisement
Tags :
birthday celebrationchitradurgaFatimashekKarnataka Muslim Cultural AcademySavitribaipuleಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಚಿತ್ರದುರ್ಗಜನ್ಮದಿನಾಚರಣೆಫಾತಿಮಶೇಕ್ಸಾವಿತ್ರಿಬಾಯಿಪುಲೆ
Advertisement
Next Article