For the best experience, open
https://m.suddione.com
on your mobile browser.
Advertisement

ಹಿರಿಯೂರು ಡಿವೈಎಸ್ಪಿ ಚೈತ್ರಾ ವಿರುದ್ಧ ರೈತ ಸಂಘಟನೆ ದೂರು..!

03:14 PM Aug 02, 2024 IST | suddionenews
ಹಿರಿಯೂರು ಡಿವೈಎಸ್ಪಿ ಚೈತ್ರಾ ವಿರುದ್ಧ ರೈತ ಸಂಘಟನೆ ದೂರು
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಹಿರಿಯೂರು ಡಿವೈಎಸ್ಪಿ ಚೈತ್ರಾ ಅವರ ವಿರುದ್ಧ ಚಿತ್ರದುರ್ಗದಲ್ಲಿ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾಗೆ ರೈತರೆಲ್ಲಾ ಸೇರಿ ದೂರು ನೀಡಿದ್ದಾರೆ.

Advertisement

ಬುಧವಾರದಂದು (ಜುಲೈ. 31) ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯತ್ರಿ ಡ್ಯಾಂ ಸೇರಿದಂತೆ 18 ಕೆರೆಗಳಿಗೆ ‌ವಾಣಿ ವಿಲಾಸ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜೆಜೆ ಹಳ್ಳಿ ಹೋಬಳಿಯಿಂದ ತಾಲೂಕ ಕಚೇರಿವರೆಗೂ ಸಾವಿರಾರು ರೈತರು ನೂರಾರು ಟ್ಯಾಕ್ಟರ್, ಆಟೋ, ಕಾರು, ಬೈಕ್ ಗಳೊಂದಿಗೆ ಪಾದಯಾತ್ರೆ ಮೂಲಕ ಬಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ವೇಳೆ ಡಿವೈಎಸ್ಪಿ ಚೈತ್ರಾ ಅವರು ರೈತರ ವಿರುದ್ಧ ದರ್ಪ ತೋರಿದ್ದರು ಎಂದು ದೂರು ನೀಡಲಾಗಿದ್ದು, ಚಳುವಳಿ ವೇಳೆ ರೈತರ ಬಗ್ಗೆ ಕೀಳಾಗಿ ಮಾತಾಡಿ ಆವಾಜ್ ಹಾಕಿದ ಆರೋಪ ಕೇಳಿ ಬಂದಿದೆ. ರೈತ ಮುಖಂಡರಿಗೆ ಡಿವೈಎಸ್ಪಿ ಚೈತ್ರಾ ಅವಾಜ್ ವಿಡಿಯೋ ವೈರಲ್ ಆಗಿದ್ದಂತ ವಿಡಿಯೋ ಕೂಡ ಈಗ ಎಲ್ಲೆಡೆ ವೈರಲ್ ಆಗಿದೆ.

Advertisement

ಚಿತ್ರದುರ್ಗದಲ್ಲಿ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾಗೆ ದೂರು ನೀಡಿರುವ ರೈತ ಮುಖಂಡರು, ವಿಡಿಯೋ ಸಾಕ್ಷಿಯನ್ನು ನೀಡಿದ್ದಾರೆ. ಡಿವೈಎಸ್ಪಿ ಎಸ್ ಚೈತ್ರಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ. ರೈತರ ಚಳುವಳಿ ವೇಳೆ ಈ ರೀತಿ ನಿಂದಿಸಿದ್ದು ತಪ್ಪು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಹಿರಿಯೂರು ಭಾಗದಲ್ಲಿ ನಿತ್ಯ ಕೊಲೆ,‌ ಸುಲಿಗೆ, ಕಳ್ಳತನ ಹೆಚ್ಚಾಗುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಡಿವೈಎಸ್ಪಿ ವಿಫಲರಾಗಿದ್ದಾರೆ. ಆದರೆ ರೈತರ ಚಳುವಳಿ ಹತ್ತಿಕ್ಕುವ ಕೆಲಸ ಮಾಡಿದ್ದಾರೆಂದು ಆರೋಪಿಸಿ, ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷ ಸಿದ್ಧವೀರಪ್ಪ, ಚಿತ್ರದುರ್ಗ ಜಿಲ್ಲಾದ್ಯಕ್ಷ ಮಲ್ಲಿಕಾರ್ಜುನ, ಹಿರಿಯೂರು ತಾಲೂಕು ಅದ್ಯಕ್ಷ ತಿಪ್ಪೇಸ್ವಾಮಿ ನೇತೃತ್ವದಲ್ಲಿ ದೂರು ನೀಡಿದ್ದಾರೆ. ಜೊತೆಗೆ ಡಿವೈಎಸ್ಪಿ ಚೈತ್ರಾ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.

Tags :
Advertisement