For the best experience, open
https://m.suddione.com
on your mobile browser.
Advertisement

ರೈತರು ಕೆಎಂಎಫ್ ನಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಿ : ಶಾಸಕ ಟಿ ರಘುಮೂರ್ತಿ

07:34 PM Dec 24, 2024 IST | suddionenews
ರೈತರು ಕೆಎಂಎಫ್ ನಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಿ   ಶಾಸಕ ಟಿ ರಘುಮೂರ್ತಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

Advertisement
Advertisement

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 24: ಸಹಕಾರ ಕ್ಷೇತ್ರಗಳು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯಾಗಲು ರೈತರು ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.

ತಾಲೂಕಿನ ನರಹರಿ ನಗರದಲ್ಲಿ ಶ್ರೀ ನರಹರಿ ಸೇವಾ ಪ್ರತಿಷ್ಠಾನ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಮತ್ತು ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಮಿಶ್ರ ತಳಿ ಹಸು ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರವು ಇಂದು ಉತ್ತಮ ಮಟ್ಟದಲ್ಲಿ ಅಭಿವೃದ್ಧಿ ಕಾಣ್ತಿದ್ದು ಹೈನುಗಾರಿಕೆ ಉದ್ಯಮವು ಸಹಕಾರ ಕ್ಷೇತ್ರಕ್ಕೆ ಉತ್ತಮ ಲಾಭದಾಯಕ ಕ್ಷೇತ್ರವಾಗಿದೆ. ಕೆಎಂಎಫ್ ರಾಜ್ಯದ ರೈತರ ಹಿತವನ್ನು ಕಾಪಾಡುತ್ತಿದ್ದು ರೈತರು ಹೈನುಗಾರಿಕೆಯಲ್ಲಿ ಪರಿಶ್ರಮ ಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಕೇವಲ ಸಬ್ಸಿಡಿ ದರದಲ್ಲಿ ಸಿಗುವ ಸೌಲಭ್ಯಗಳಿಗೆ ಮಾರುಹೋಗದೆ ಕೆಎಂಎಫ್ ನಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಹಾಲು ಉತ್ಪಾದನೆ ಮಾಡಿ ಕೆಎಂಎಫ್ ಹಾಲು ಒಕ್ಕೂಟಗಳಿಗೆ ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ಹಾಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವ ಗಮನಹರಿಸಬೇಕು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಬಿ ಸಿ. ಸಂಜೀವ ಮೂರ್ತಿ ಮಾತನಾಡಿ ತಾಲೂಕಿನಲ್ಲಿ 29 ಹಾಲು ಉತ್ಪಾದನಾ ಸಹಕಾರ ಸಂಘಗಳನ್ನು ಪುನಃ ಚೇತನ ಗೊಳಿಸಲು ನಿರ್ಧರಿಸಿದ್ದು ಇದಕ್ಕೆ ರೈತರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಹೈನುಗಾರಿಕೆಯನ್ನು ಉತ್ತೇಜನ ಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸುವ ಮೂಲಕ ರೈತರಿಗೆ ಜಾಗೃತಿ ಮೂಡಿಸಿ ಹೈನು ಉದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಶಿವಮೊಗ್ಗ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್‌ಜಿ ಶೇಖರ್ ಮಾತನಾಡಿ ಹೈನುಗಾರಿಕೆ ಉದ್ಯಮ ಇಂದು ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಖಾಸಗಿಯವರಿಗೆ ತಮ್ಮ ಹಾಲನ್ನು ಮಾರಾಟ ಮಾಡದೆ ಸರ್ಕಾರಿ ಸ್ವಾಮ್ಯದ ಕೆಎಂಎಫ್ ಗೆ ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಖಾಸಗಿಯವರು ಕಡಿಮೆ ಬೆಲೆಗೆ ಹಾಲನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಇದರ ಹಾವಳಿಯನ್ನು ತಪ್ಪಿಸಲು ಶಿವಮೊಗ್ಗ ಹಾಲು ಒಕ್ಕೂಟ ಪ್ರಯತ್ನಿಸುತ್ತಿದೆ ಈಗಾಗಲೇ ರಾಜ್ಯದಲ್ಲಿ 16 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು ದೇಶದಲ್ಲಿ 170 ಹಾಲು ಒಕ್ಕೂಟಗಳು 1,72,000 ಹಾಲು ಉತ್ಪಾದಕ ಸಂಘಗಳು ಕಾರ್ಯನಿರ್ವಹಿಸುತ್ತಿವೆ ವಿಶ್ವದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ರಾಜ್ಯದ ಕೆಎಂಫ್ ವತಿಯಿಂದ ಪ್ರತಿನಿತ್ಯ 92 ಲಕ್ಷ ಲೀಟರ್ ಹಾಲು ಉತ್ಪಾದನೆಗೊಳ್ಳುತ್ತಿದ್ದು 42 ಲಕ್ಷ ಲೀಟರ್ ಹಾಲು, ಮಾರಾಟ ಮಾಡಲಾಗುತ್ತಿದೆ ಅಷ್ಟೇ ಅಲ್ಲದೆ ಹೊರದೇಶಗಳಿಗೂ ಹಾಲನ್ನು ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೆ ವೇಳೆ ಮಿಶ್ರ ತಳಿ ಹಸು ಕರುಗಳ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ನರಹರಿ ಸದ್ಗುರು ಪೀಠದ ಡಾ. ರಾಜಾರಾಮ್ ಸ್ವಾಮೀಜಿ ಶಿವಮೊಗ್ಗ ಹಾಲ್ ಒಕ್ಕೂಟದ ನಿರ್ದೇಶಕರಾದ ರೇವಣಸಿದ್ದಪ್ಪ ಜಿಬಿ ಶೇಖರಪ್ಪ ಸತೀಶ್ ಕುಮಾರ್ ರೇವಣ್ಣ ಶ್ರೀನಿವಾಸ್ ಬಾಬು ರಂಗಸ್ವಾಮಿ ವಿಜಯಕುಮಾರ್ ರಾಜಣ್ಣ ಸಂಜಯ್ ಮುಕುಂದ ನಾಯಕ ಹನುಮಂತಪ್ಪ ಕೃಷ್ಣಕುಮಾರ್ ನಗರಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಮ್ಮ ಪಶು ಇಲಾಖೆಯ ಉಪ ನಿರ್ದೇಶಕ ಕುಮಾರ್ ಪಿಡಿಒ ರಾಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement
Tags :
Advertisement