Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಘು ಮತ್ತು ಸವಿತಾ ಅವರನ್ನು ಪಕ್ಷದಿಂದ ಉಚ್ಚಾಟಿಸಿ : ವಿನಯ ಗೋಡೆಮನೆ

05:51 PM Feb 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 01 : ಪಕ್ಷ ವಿರೋಧಿ ಚಟುವಟುಕೆಯನ್ನು ಮಾಡುತ್ತಿರುವ ರಘು ಮತ್ತು ಸವಿತಾರವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಎನ್,ಎಸ್.ಯು.ಐ.ನ ಮಾಜಿ ಅಧ್ಯಕ್ಷ ವಿನಯ ಗೋಡೆಮನೆ ಪಕ್ಷದ ವರಿಷ್ಟರನ್ನು ಆಗ್ರಹಿಸಿದ್ದಾರೆ.

Advertisement

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ವಿಧಾನಸಬಾ ಚುನಾವಣೆಯಲ್ಲಿ ಯಾರಿಗೆ ಇವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ಹೊಳಲ್ಕೆರೆಯ ಜನತೆಯೇ ಹೇಳುತ್ತಿದ್ದಾರೆ. ಪಕ್ಷದಲ್ಲಿ ಇದ್ದುಕೊಂಡು ಬೇರೆ ಪಕ್ಷದರೊಂದಿಗೆ ಶಾಮಿಲಾಗಿ ಅವರ ಪರವಾಗಿ ಕೆಲಸವನ್ನು ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇಂತಹರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ವರಿಷ್ಟರಿಗೆ ಮನವಿ ಮತ್ತು ಇವರ ಪಕ್ಷ ದ್ರೋಹದ ಸಾಕ್ಷಿಗಳನ್ನು ಸಹಾ ನೀಡಲಾಗಿದೆ ಆದರೆ ಪಕ್ಷದ ವರಿಷ್ಟರು ಇದುವರೆವಿಗೂ ಇವರ ಮೇಲೆ ಯಾವುದೇ ಕ್ರಮವನ್ನು ಸಹಾ ಕೈಗೊಂಡಿಲ್ಲ ಎಂದರು.

 

ಕಳೆದ ವಿಧಾನಸಬಾ ಚುನಾವಣೆಯಲ್ಲಿ ಜಿ.ಪಂ. ಸದಸ್ಯರಾಗಿದ್ದ ಸವಿತಾ ರಘೂ ರವರು ಬಿಜೆಪಿಯ ಜೊತೆ ಒಳ ಒಪ್ಪಂದವನ್ನು ಮಾಡಿಕೊಳ್ಳುವುದರ ಜೊತೆಗೆ ಹೊಳಲ್ಕರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸವನ್ನು ಮಾಡದೇ ಬಿಜೆಪಿಯ ಪರವಾಗಿ ಕೆಲಸವನ್ನು ಮಾಡುವುದರ ಮೂಲಕ ನಮ್ಮ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ. ಇಂತಹರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದರ ಮೂಲಕ ಪಕ್ಷದ ಗೌರವ ಘನತೆಯನ್ನು ಕಾಪಾಡಬೇಕಿದೆ ಎಂದು ಪಕ್ಷದ ವರಿಷ್ಠರನ್ನು ವಿನಯ ಗೋಡೆಮನೆ ಆಗ್ರಹಿಸಿದ್ದಾರೆ.

ಕಳೆದ ವಿಧಾನಸಭೇಯ ಚುನಾವಣೆಯಲ್ಲಿ ಮತದಾರರ ನಮ್ಮ ಪಕ್ಷಕ್ಕೆ ಬೆಂಬಲವನ್ನು ನೀಡಿ ಗೆಲ್ಲಿಸಿದ್ದಾರೆ ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವನ್ನು ನಡೆಸುತ್ತಿದೆ ಇದರ ಫಲವಾಗಿ ಪಕ್ಷದ ವರಿಷ್ಠರು ಪಕ್ಷದ ಕಾರ್ಯಕರ್ತರನ್ನು ವಿವಿಧ ನಿಗಮಗಳಿಗೆ ನೇಮಕಾತಿಯನ್ನು ಮಾಡುತ್ತಿದ್ದಾರೆ ಇದರಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ನೇಮಕಾತಿಯನ್ನು ಮಾಡಲಿ ಆದರೆ ಇತ್ತೀಚೆಗೆ ಬಿಡುಗಡೆಯಾದ ಪಟ್ಟಿಯಲ್ಲಿ ಪಕ್ಷಕ್ಕೆ ದ್ರೋಹವನ್ನು ಮಾಡಿದ ರಘು ಸವಿತಾರವರ ಹೆಸರು ಇದೆ ಎನ್ನುತ್ತಿದ್ದಾರೆ ಈ ರೀತಿ ಏನಾದರೂ ಇದ್ದರೆ ಅವರ ವಿರುದ್ದ ಹೋರಾಟವನ್ನು ಮಾಡಲಾಗುವುದು ಯಾವುದೇ ಕಾರಣಕ್ಕೂ ಅವರನ್ನು ನಿಗಮ ಮಂಡಳಿಗಳಿಗೆ ನೇಮಕವಾಗಲು ಬಿಡುವುದಿಲ್ಲ ಎಂದು ವಿನಯ ಆಕ್ರೋಶವನ್ನು ಹೂರಹಾಕಿದರು.

ನಮ್ಮ ಪಕ್ಷದಲ್ಲಿ ವಿವಿಧ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಶಾಸಕರ, ಸಚಿವರ ಜಿಲ್ಲಾಧ್ಯಕ್ಷರ ಅಭೀಪ್ರಾಯವನ್ನು ಕೇಳಿ ಅದನ್ನು ಕೆಪಿಸಿಸಿಗೆ ಕಳುಹಿಸುತ್ತಾರೆ ಆದರೆ ಇಲ್ಲಿ ಯಾರ ಅಭೀಪ್ರಾಯವನ್ನು ಕೇಳದೇ ಯಾರ ಮಾತನ್ನು ಪರಿಗಣಿಸದೇ ಎನ್.ಎಸ್.ಯು.ಐಗೆ ನನ್ನ ಸ್ಥಾನದಲ್ಲಿ ಬೇರೆಯವರನ್ನು ನೇಮಕ ಮಾಡಿದ್ದಾರೆ, ಇದರ ಬಗ್ಗೆಯೂ ಸಹಾ ಕೆಪಿಸಿಸಿಗೆ ದೂರನ್ನು ಸಹಾ ನೀಡಲಾಗಿದೆ, ಇಂದು ಇದರ ಬಗ್ಗೆ ಜಿಲ್ಲೆಯ ಶಾಸಕರ ಜೊತೆಯಲ್ಲಿ ರಾಜ್ಯಾಧ್ಯಕ್ಷರಾದ ಡಿ.ಕೆ,ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ ಎಂದ ಅವರು, ಇದರ ಬಗ್ಗೆಯೂ ಸಹಾ ಹೋರಾಟವನ್ನು ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಚೇತನ, ಕಾನೂನು ಸಲಹೆಗಾರರಾದ ಸಚ್ಚಿನ್ ಬಾಬು, ಪ್ರಧಾನ ಕಾರ್ಯದರ್ಶಿ ಕಿರಣ್ ಉಪಸ್ಥಿತರಿದ್ದರು.

Advertisement
Tags :
chitradurgaExpelRaghuSavitasuddionesuddione newsVinaya Godemaneಉಚ್ಚಾಟನೆಚಿತ್ರದುರ್ಗರಘುವಿನಯ ಗೋಡೆಮನೆಸವಿತಾಸುದ್ದಿಒನ್ ನ್ಯೂಸ್ಸುದ್ದಿಒಮ್
Advertisement
Next Article