Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೀಡಿ, ಸಿಗರೇಟು, ಮದ್ಯ ಸೇವನೆ ಸೇರಿದಂತೆ ಅತಿಯಾದ ಮೊಬೈಲ್ ಬಳಸುವವರೂ ಮನೋರೋಗಿಗಳು : ಡಾ.ಮಂಜುನಾಥ್

05:21 PM Aug 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್,ಚಿತ್ರದುರ್ಗ, ಆಗಸ್ಟ್.21 : ಮಾನಸಿಕ ಅಸ್ಪಸ್ಥರನ್ನು ಹುಡುಕಿ ಜಿಲ್ಲಾಸ್ಪತ್ರೆಗೆ ಸೇರಿಸಿ ಗುಣಪಡಿಸುವ ಕೆಲಸ ಮಾಡಬೇಕೆಂದು ಮನೋ ವೈದ್ಯರಾದ ಡಾ.ಮಂಜುನಾಥ್ ತಾಲ್ಲೂಕಿನ ಶುಶ್ರೂಷಣಾಧಿಕಾರಿಗಳಿಗೆ ತಿಳಿಸಿದರು.

Advertisement

ಬುದ್ದ ನಗರದ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕಿನ ಶುಶ್ರೂಷಣಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಮಾನಸಿಕ ಆರೋಗ್ಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮನೋರೋಗದ ಕಾಯಿಲೆಯವರನ್ನು ಹುಡುಕಬೇಕಾಗಿಲ್ಲ. ಬೀಡಿ ಸಿಗರೇಟು ಮದ್ಯ ಸೇವನೆ ಅತಿಯಾದ ಮೊಬೈಲ್ ಚಟಗಳಿಗೆ ಬಲಿಯಾಗಿರುವವರು ಮನೋರೋಗಿಗಳೆ ಆಗಿರುತ್ತಾರೆ. ಅಂತಹವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ಕರೆ ತಂದರೆ ಆಪ್ತ ಸಮಾಲೋಚನೆ ನಡೆಸಿ ಗುಣಪಡಿಸಬಹುದಾಗಿದೆ. ಕಲ್ಪನಾ ಲೋಕದಲ್ಲಿ ಮಾತನಾಡುವವರು ಕೂಡ ಮನೋ ರೋಗಿಗಳಾಗಿರುತ್ತಾರೆ. ಆರೋಗ್ಯ ಸೇವೆಯಲ್ಲಿರುವ ನೀವುಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಮನೋರೋಗಿಗಳನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.

ಆರೋಗ್ಯ ಮೇಲ್ವಿಚಾರಣಾಧಿಕಾರಿ ಸುರೇಶ್ ಮಾತನಾಡಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸುವ ಕುರಿತು ವಿಶ್ವ ಸೊಳ್ಳೆ ದಿನವಾದ ಇಂದು ಪ್ರತಿಜ್ಞೆ ಮಾಡಬೇಕಾಗಿದೆ. ಟೈರು, ಎಳನೀರು ಚಿಪ್ಪು, ಡ್ರಮ್ ಇನ್ನು ಮುಂತಾದ ಸ್ಥಳಗಳಲ್ಲಿ ಸೊಳ್ಳೆಗಳ ತಾಣವಾಗದಂತೆ ಕಟ್ಟೆಚ್ಚರ ವಹಿಸುವ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ನಿಮ್ಮ ಜವಾಬ್ದಾರಿ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡುತ್ತ ಡೆಂಗ್ಯೂ ಜ್ವರ ಎಲ್ಲೆಡೆ ಹರಡುತ್ತಿದೆ. ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದೆ ಶುದ್ದವಾದ ನೀರು ಕುಡಿಯುವುದು ಮುಖ್ಯ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.

ಡಾ.ನಾಗರಾಜ್, ಬುದ್ದನಗರ ವೈದ್ಯಾಧಿಕಾರಿ ಸುರೇಂದ್ರಕುಮಾರ್, ಆರೋಗ್ಯ ಮೇಲ್ವಿಚಾರಕ ಸುರೇಶ್, ಮಲ್ಲಿಕಾರ್ಜುನ್, ಶ್ರೀನಿವಾಸಮೂರ್ತಿ, ಗುರುಮೂರ್ತಿ, ವೈ.ತಿಪ್ಪೇಸ್ವಾಮಿ, ಬಿ.ಆರ್.ನಾಗರಾಜ್, ಹೆಚ್.ಎ.ನಾಗರಾಜ್, ಶ್ರೀಧರ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

Advertisement
Tags :
alcohol consumptionbeedibengaluruchitradurgacigaretteDr manjunathmobile phonespsychopathssuddionesuddione newsಚಿತ್ರದುರ್ಗಡಾ. ಮಂಜುನಾಥ್ಬೀಡಿಬೆಂಗಳೂರುಮದ್ಯ ಸೇವನೆಮನೋರೋಗಮೊಬೈಲ್ಸಿಗರೇಟುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article