Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೇವಲ ಗಂಟು ಮಾಡಿಕೊಳ್ಳುಲು ಶಾಸಕರಾಗಿದ್ದರೆಯೇ ವಿನಃ ಅಭಿವೃದ್ದಿಗಾಗಿ ಅಲ್ಲ : ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆರೋಪ

08:12 PM Oct 05, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 05 : ಮೊಳಕಾಲ್ಮೂರು
ಕ್ಷೇತ್ರದಲ್ಲಿ ‌ಮರಳು ಮಾಫಿಯಾ, ಭೂ ಕಬಳಿಕೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಕೇವಲ ಶಾಸಕರ ಆಪ್ತರಿಗೆ, ಟೆಂಡರ್ ದಾರರ ಜೊತೆ ಸೇರಿಕೊಂಡು ಹಣ ಮಾಡುವ ಉದ್ದೇಶದಿಂದ ಮಾತ್ರ ಶಾಸಕರಾಗಿದ್ದಾರೆ ಹೊರತು ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿನೆಗಲ್ಲಎಂದು ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

Advertisement

ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಜನರು ಗುಳೆ ಹೋಗುವಂತಹ ಪರಿಸ್ಥಿತಿ ಇದೆ. ಆದರೆ ರಾಜ್ಯ ಸರಕಾರ ಮಾತ್ರ ರೈತರ ಬೆಳೆಗಳನ್ನು ಸಮೀಕ್ಷೆ ಮಾಡಿಸಿ ಪರಿಹಾರ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನೂ ಗ್ಯಾರಂಟಿ ಯೋಜನೆಗಳ‌ ಪೂರ್ವದಲ್ಲಿ ಅನುದಾನ ಒದಗಿಸುತ್ತೇವೆ, ರಾಜ್ಯದ ಅಭಿವೃದ್ಧಿಗೆ ಕಂಕಣ ಬದ್ದರಾಗಿದ್ದೇವೆ ಎನ್ನುವ ಇವರುಗಳು, ಈವರೆಗೆ ಕ್ಷೇತ್ರದಲ್ಲಿ ಯಾವುದೇ ಜನಪರ ಯೋಜನೆಗಳ ಕಾರ್ಯಕ್ರಮ ಮಾಡಿಲ್ಲ.

ಕೂಡ್ಲಿಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಮೊಳಕಾಲ್ಮೂರು ಕ್ಷೇತ್ರಕ್ಕೆ ವರ್ಗವಾಣೆ ಮಾಡಿಸಿಕೊಳ್ಳುವುದು ಏಕೆ ? ಇದರ ಹಿಂದಿನ ಉದ್ದೇಶವಾದರೂ ಏನು ? ಕ್ಷೇತ್ರದ ವ್ಯಾಪ್ತಿಯಲ್ಲಿ ಮರಳು ದಂಧೆ ಹೇರಳವಾಗಿ ನಡೆಯುತ್ತಿದೆ. ಇನ್ನೂ ಭೂಮಿಯನ್ನು ಅಕ್ರಮವಾಗಿ ಕಬಳಿಸಿದವರ ಬಗ್ಗೆ ಇದುವರೆಗೆ ಕ್ರಮ ಜರುಗಿಸಿಲ್ಲ. ತಹಶೀಲ್ದಾರ್ ಹಾಗೂ ಮೇಲಿನ‌ ಅಧಿಕಾರಿಗಳು ಕೂಡ ಇವರ ಕಪಿ‌ ಮುಷ್ಠಿಯಲ್ಲಿ ಇದ್ದಾರೆಯೇ ಎಂಬುದು ಅನುಮಾನ ಕ್ಷೇತ್ರದ ಜನರಲ್ಲಿ ಕಾಡುತ್ತಿದೆ ಎಂದು ಹೇಳಿದ್ದಾರೆ.

Advertisement
Tags :
bengaluruchitradurgadevelopmentEx-MLA S. Thippeswamysuddionesuddione newsಅಭಿವೃದ್ದಿಆರೋಪಎಸ್.ತಿಪ್ಪೇಸ್ವಾಮಿಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article