ಕನ್ನಡ ಉಳಿವಿಗೆ ಎಲ್ಲರ ಗಟ್ಟಿ ಧ್ವನಿ ಅಗತ್ಯ : ಪತ್ರಕರ್ತ ಅಹೋಬಳಪತಿ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.01 : ಭಾಷಾವಾರು ಪ್ರಾಂತ್ಯಗಳ ಹೋರಾಟಕ್ಕೆ ಮಣಿದು ನೆಹರು ನೇತೃತ್ವದ ಕೇಂದ್ರ ಸರ್ಕಾರ ಆಂಧ್ರಪ್ರದೇಶವನ್ನು ಘೋಷಿಸಿತು ಎಂದು ಉಪನ್ಯಾಸಕ ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಸಿ.ಎಂ.ಸಿ ಬಡಾವಣೆಯ ಅಶೋಕ ಸರ್ಕಲ್‍ನಲ್ಲಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಮೇಲೆ ಭಾಷವಾರು ಪ್ರಾಂತ್ಯಗಳಿಗೆ ಹೋರಾಟಗಳು ನಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫಜಲ್ ಹಾಲಿ ಕಮಿಟಿಯನ್ನು ರಚಿಸಿತ್ತು. ಅಷ್ಟೋತ್ತಿಗಾಗಲೇ ಆಂಧ್ರಪ್ರದೇಶದಲ್ಲಿ ಪೊಟ್ಟಿ ಶ್ರೀರಾಮುಲು ರವರ ಹೋರಾಟ ಪ್ರಬಲವಾಗಿ ನಡೆಯುತ್ತಿತ್ತು ಎಂದು ತಿಳಿಸಿದರು.
ಪೊಟ್ಟಿ ಶ್ರೀರಾಮುಲು ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದಾಗಲೇ ಮರಣ ಹೊಂದುತ್ತಾರೆ. ಹಾಗಾಗಿ ನೆಹರು ಅವರು ಆಂಧ್ರಪ್ರದೇಶವನ್ನು ಮೊದಲಿಗೆ ಘೋಷಿಸಿದ್ದಾರೆ. ಇದಾದ ನಂತರ ದೇಶದ ಎಲ್ಲಾ ಭಾಗದಲ್ಲಿ ನಡೆಯುವ ಹೋರಾಟಗಳನ್ನು ಗಮನಿಸಿ 1956 ರಲ್ಲಿ ಮೈಸೂರು ರಾಜ್ಯವನ್ನು ಘೋಷಿಸುತ್ತಾರೆ. ನಂತರ ಧಾರವಾಡದ ವಿದ್ಯಾವರ್ತಕ ಸಂಘದ ನೇತೃತ್ವದಲ್ಲಿ ಕವಿಗಳು, ಸಾಹಿತಿಗಳು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸುತ್ತಾರೆ. ದೇವರಾಜ ಅರಸು 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದು ಹೇಳಿದರು.
ಕನ್ನಡ ಭಾಷೆ ಉದ್ಯೋಗದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು, ರಾಜ್ಯದಲ್ಲಿ ಕನ್ನಡ ಮಾಧ್ಯಮವಾಗಿ ಉಳಿಯಬೇಕು, ಕನ್ನಡವನ್ನ ಸರ್ಕಾರ ಉಳಿಸಬೇಕೆ ವಿನಃ ಅಳಿಸಬಾರದು ಎಂದು ಹೇಳಿದರು.
ಪತ್ರಕರ್ತ ಅಹೋಬಳಪತಿ ಮಾತನಾಡಿ, ಪ್ರಾದೇಶಿಕವಾರು ಅಸಮಾನತೆಗಳನ್ನು ಹೋಗಲಾಡಿಸಬೇಕು. ಪ್ರಾತಿನಿತ್ಯ ಎಲ್ಲಾ ಕಡೆ ಎಲ್ಲರಿಗೂ ಸಮಾನವಾಗಿ ದೊರೆಯುವಂತಹ ವಾತಾವರಣ ನಿರ್ಮಾಣವಾಗಲಿ, ಕನ್ನಡ ಉಳಿವಿಗೆ ಎಲ್ಲರ ಗಟ್ಟಿ ಧ್ವನಿ ಅಗತ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ 103 ವರ್ಷದ ಬಂಡಾಯಸ್ವಾಮಿ, ಚಿನ್ಮಯಾನಂದ, ನಿಂಗಪ್ಪ, ಶ್ರೀನಿವಾಸ್, ಶಿವಲಿಂಗಪ್ಪ, ರಂಗಪ್ಪ, ನಾಗರಾಜ್, ಗಣೇಶಯ್ಯ, ರವೀಶ್ ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಗೆಳೆಯರ ಬಳಗದ ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ, ರಾಜು, ವೀರೇಂದ್ರಕುಮಾರ್, ಸಿ.ಎನ್.ಕುಮಾರ್, ಹನುಮಂತಪ್ಪ, ವಕೀಲರಾದ ಅಶ್ವತ್‍ನಾಯಕ, ಶಿವುಯಾದವ್, ತಿಮ್ಮಣ್ಣ, ಶರಣಪ್ಪ, ಮಲ್ಲಿಕಾರ್ಜುನ್, ಕ್ರಷರ್ ಮಾಲೀಕರಾದ ಗುರು, ಉಪನ್ಯಾಸಕ ಮಲ್ಲೇಶ್, ಖಾನ್, ರಾಜ್‍ಕುಮಾರ್ ಮುಖಂಡರಾದ ಮೈಲಾರಪ್ಪ, ರಾಘವೇಂದ್ರ, ಮಂಜುನಾಥ್, ನಾಗಭೂಷಣ್, ವ್ಯವಸ್ಥಾಪಕರಾದ ಚನ್ನಬಸಪ್ಪ, ಬಡಪ್ಪ, ಪೊಲೀಸ್ ಮಹಾದೇವ, ಸಬ್‍ಇನ್ಸ್‍ಪೆಕ್ಟರ್ ಯಶೋಧಮ್ಮ, ಮಂಜುನಾಥ್, ಸಿ.ಎನ್.ಮೋಹನ, ಕಂಪ್ಯೂಟರ್ ತಿಪ್ಪೇಸ್ವಾಮಿ, ಶಿವರುದ್ರಪ್ಪ, ಹನುಮಂತಪ್ಪ, ಯಶವಂತ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.