Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕನ್ನಡ ನಾಡು, ನುಡಿ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅಭಿಮಾನವಿರಬೇಕು‌: ಆರ್.ಟಿ.ಒ. ಭರತ್ ಎಂ.ಕಾಳೆಸಿಂಗ್

04:46 PM Nov 29, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.29 : ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅಭಿಮಾನವಿರಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೆಸಿಂಗ್ ಹೇಳಿದರು.

Advertisement

ಕೋಟೆನಾಡು ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಮುಂಭಾಗದ ರಸ್ತೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮೂರನೆ ವರ್ಷದ ಕನ್ನಡ ರಾಜ್ಯೋತ್ಸವ ಉದ್ಗಾಟಿಸಿ ಮಾತನಾಡಿದರು.

ದೇಶದಲ್ಲಿ ಭಾವೈಕ್ಯತೆ, ಸಹಭಾಳ್ವೆ, ಸಹೋದರತ್ವ, ಸ್ವಾಭಿಮಾನ ಉಳಿದಿರುವುದೇ ಶ್ರಮಿಕ ವರ್ಗದವರಿಂದ ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದವರು ಕೂಡಿಕೊಂಡು ಮೂರನೆ ವರ್ಷದ ಕನ್ನಡ ರಾಜ್ಯೋತ್ಸವ ಮಾಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡಕ್ಕಾಗಿ ಹೋರಾಡಿದವರು ಅನೇಕರಿದ್ದಾರೆ. ಉಸಿರಾಗಲಿ ಕನ್ನಡ, ಹಸಿರಾಗಲಿ ಕನ್ನಡ ಎನ್ನುವ ಬದ್ದತೆ ಇರಬೇಕು ಎಂದರು.

ಸಾಹಿತಿ ನಿವೃತ್ತ ಶಿಕ್ಷಕ ಹುರಳಿ ಎಂ.ಬಸವರಾಜ್ ಮಾತನಾಡಿ ಎರಡು ಸಾವಿರದ ಐದುನೂರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಅನೇಕ ಸಾಹಿತಿಗಳು, ಕವಿಗಳು ದೇಶದೆಲ್ಲೆಡೆ ಪಸರಿಸಿದ್ದಾರೆ. ಎಂಟು ಜ್ಞಾನಪೀಠಗಳನ್ನು ಪಡೆದಿರುವ ಕನ್ನಡಕ್ಕೆ ತನ್ನದೆ ಆದ ವೈಶಿಷ್ಠ್ಯವಿದೆ. ಪಂಪ, ರನ್ನ, ಪೊನ್ನ, ಜನ್ನ, ಲಕ್ಷ್ಮೀಶ, ಬಸವಣ್ಣ, ಅಲ್ಲಮಪ್ರಭು, ಡೋಹರ ಕಕ್ಕಯ್ಯ, ಅಕ್ಕಮಹಾದೇವಿ, ಪುರಂದರದಾಸರು, ಕನಕದಾಸರು, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಡಿ.ವಿ.ಗುಂಡಪ್ಪ ಇನ್ನು ಅನೇಕರು ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆ.

ಯಾವುದೇ ಕೆಲಸ ಮೇಲು-ಕೀಳಲ್ಲ. ವೃತ್ತಿಯ ಮೇಲೆ ಗೌರವವಿಟ್ಟು ಬದುಕು ಕಟ್ಟಿಕೊಳ್ಳಬೇಕೆಂದು ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದವರಿಗೆ ಕರೆ ನೀಡಿದರು. ದೇಶದೆಲ್ಲೆಡೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ನೀವುಗಳು ನಿಮ್ಮ ಸುರಕ್ಷತೆ ಕಡೆಯೂ ಗಮನಕೊಡಿ ಎಂದು ಹೇಳಿದರು.

ಬಿಜೆಪಿ ಮುಖಂಡ ಸೋಮೇಂದ್ರ ಮಾತನಾಡಿ ಟ್ಯಾಕ್ಸಿ ಚಾಲಕರು ಮಾಲೀಕರುಗಳು ಎಂದರೆ ಸದಾ ಹೊರಗಡೆ ಸುತ್ತಾಡುತ್ತಿರುತ್ತೀರಿ. ನಿಮ್ಮ ನಿಮ್ಮ ವಾಹನಗಳ ಮೇಲೆ ಕನ್ನಡದ ಭಾವುಟ ರಾಜಾರಾಜಿಸುವುದು ನೀವುಗಳು ಕನ್ನಡದ ಮೇಲಿಟ್ಟಿರುವ ಅಭಿಮಾನವನ್ನು ಪ್ರದರ್ಶಿಸುತ್ತದೆ. ಕನ್ನಡಾಭಿಮಾನ ಎಲ್ಲರೆದೆಯಲ್ಲಿರಬೇಕು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಿರುಗಾಡುವ ಚಾಲಕರುಗಳು, ಮಾಲೀಕರುಗಳಲ್ಲಿ ಸಮಯ ಪ್ರಜ್ಞೆಯಿದೆ. ಜೊತೆಗೆ ಸಾಕಷ್ಟು ಸಮಸ್ಯೆಗಳಿವೆ ಎನ್ನುವುದು ಗೊತ್ತಿದೆ. ಇವೆಲ್ಲದರ ನಡುವೆ ಮೂರು ವರ್ಷಗಳಿಂದಲೂ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಗುಣಗಾನ ಮಾಡಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಹಾಸ್ಯ ಕವಿ ಜಗನ್ನಾಥ್, ನಾರಾಯಣಸ್ವಾಮಿ, ಮೋಟಾರು ವಾಹನ ಇಲಾಖೆಯ ಹಿರಿಯ ನಿರೀಕ್ಷಕ ಮಾರುತೇಶ್ ವೇದಿಕೆಯಲ್ಲಿದ್ದರು.

ಅಪ್ಪು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಅರುಣ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಚ್ಚಿನ್ ಸ್ವಾಗತಿಸಿದರು. ಕೆ.ಪಿ.ಎಂ.ಗಣೇಶಯ್ಯ ನಿರೂಪಿಸಿದರು. ಅಪ್ಪು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದ ರಾಜಣ್ಣ, ಪ್ರವೀಣ್ ಹಾಗೂ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು.

Advertisement
Tags :
admirationchitradurgaEveryone shouldKannada naduR.T.O. Bharat M. Kalesinghಆರ್.ಟಿ.ಒ. ಭರತ್ ಎಂ.ಕಾಳೆಸಿಂಗ್ಕನ್ನಡ ನಾಡುಚಿತ್ರದುರ್ಗ
Advertisement
Next Article