For the best experience, open
https://m.suddione.com
on your mobile browser.
Advertisement

ಕಣ್ಮರೆಯಾಗುತ್ತಿರುವ ಕಲೆಗಳನ್ನು ಮತ್ತು ಕಲಾತಂಡಗಳ ಬೆಳವಣಿಗೆಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು :: ಎಸ್.ಕೆ.ಮಲ್ಲಿಕಾರ್ಜುನ

04:22 PM Dec 11, 2023 IST | suddionenews
ಕಣ್ಮರೆಯಾಗುತ್ತಿರುವ ಕಲೆಗಳನ್ನು ಮತ್ತು ಕಲಾತಂಡಗಳ ಬೆಳವಣಿಗೆಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು    ಎಸ್ ಕೆ ಮಲ್ಲಿಕಾರ್ಜುನ
Advertisement

ಸುದ್ದಿಒನ್, ಚಿತ್ರದುರ್ಗ. ಡಿ.11: ಕಲಾವಿದರ ಹಾಗೂ ಕಲಾತಂಡಗಳ ಉಳಿವಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಯುವ ಸೌರಭ, ಸಾಂಸ್ಕøತಿಕ ಸೌರಭ, ಗಿರಿಜನ ಉತ್ಸವ, ಚಿಗುರು, ಜನಪರ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಡೆಸಿ ಉತ್ತೇಜನ ಮತ್ತು ಪ್ರೊತ್ಸಾಹ ನೀಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ತಿಳಿಸಿದರು.

Advertisement
Advertisement

ಚಿತ್ರದುರ್ಗದ ಸೀಬಾರ-ಗುತ್ತಿನಾಡು ವಿಶ್ವ ಮಾನವ ಸಾಂಸ್ಕøತಿಕ ಮತ್ತು ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಿತ್ರದುರ್ಗ ಹಾಗೂ ವಿಶ್ವ ಮಾನವ ಸಾಂಸ್ಕøತಿಕ ಮತ್ತು ವಿದ್ಯಾಸಂಸ್ಥೆ, ವಿಶ್ವಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಸಾಂಸ್ಕøತಿಕ ಸೌರಭ -2023” ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಧ್ಯೇಯವಾಕ್ಯದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಪ್ರದರ್ಶನ ನೀಡುವ ಮೂಲಕ ಆಸಕ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತದೆ. ಕಲೆಯನ್ನು ಬಲ್ಲಂತಹ ಪ್ರತಿಭಾನ್ವಿತ ಕಲಾವಿದರು ವಿವಿಧ ಕಲಾ ಪ್ರದರ್ಶಗಳನ್ನು ನೀಡುತ್ತಾರೆ. ಕಣ್ಮರೆಯಾಗುತ್ತಿರುವ ಕಲೆಗಳನ್ನು ಮತ್ತು ಕಲಾತಂಡಗಳ ಬೆಳವಣಿಗೆಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು ಎಂದರು.

Advertisement
Advertisement

ಕಲಾತಂಡಗಳ ಮೆರವಣಿಗೆಗೆ ಡೊಳ್ಳು ನುಡಿಸುವುದರ ಮೂಲಕ ಚಾಲನೆ ನೀಡಿದ ವಿಶ್ವಮಾನವ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಆರ್.ಚನ್ನಬಸಪ್ಪ ಮಾತನಾಡಿ, ಮಕ್ಕಳಿಗೆ ಓದುವ ಕಡೆಗೆ ಹೆಚ್ಚು ಒತ್ತಡ ನೀಡದೆ ಸಾಂಸ್ಕøತಿಕವಾಗಿ ನಲಿಕಲಿ ಎಂಬ ಗುರಿಯನ್ನು ಪೋಷಕರು ಬೆಳೆಸಬೇಕಾಗಿದೆ. ಮಾನಸಿಕ ನೆಮ್ಮದಿಯನ್ನು ಮೂಡಿಸುವಲ್ಲಿ ಇಲಾಖೆಯು ಕಾರ್ಯಕ್ರಮಗಳನ್ನು ಹೆಚ್ಚು ಅರ್ಥಪೂರ್ಣವಾಗಿ ನಡೆಸಿಕೊಡುತ್ತಿದೆ ಎಂದು ಇಲಾಖೆ ನಡೆಸಿಕೊಡುತ್ತಿದೆ ಎಂದರು.

ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ಏಕಾಂತಪ್ಪ ಮತ್ತು ತಂಡದಿಂದ ಸುಗಮ ಸಂಗೀತ, ಶಬೀನಾಬಾನು ಮತ್ತು ತಂಡದವರಿಂದ ಜಾನಪದ ಸಂಗೀತ, ಜಗದೀಶ ಮತ್ತು ತಂಡದವರಿಂದ ಜನಪದ ಗೀತೆಗಳು, ಜಿ.ಕಿರಣೆ ಮತ್ತು ತಂಡದವರಿಂದ ಸಮೂಹ ನೃತ್ಯ, ತಿಪ್ಪೇಸ್ವಾಮಿ ಮತ್ತು ತಂಡದಿಂದ ಕಿಂದರಜೋಗಿ ಕುಣಿತ, ರಮೇಶ್ ಮತ್ತು ತಂಡದಿಂದ ನಾಸಿಕ್ ಡೋಲು, ಅನಂತಕೃಷ್ಣ ಪಿ ಮತ್ತು  ಚಂಪಕ ಶ್ರೀಧರ್ ಅವರಿಂದ ಗಮಕ ಗಾಯನ, ಶಿವಮೂರ್ತಿ ಮತ್ತು ತಂಡದಿಂದ ಡೊಳ್ಳು ಕುಣಿತ ಹಾಗೂ ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಅವರ ರಚನೆ ಮತ್ತು ನಿರ್ದೇಶನದ ವೈದಾಟ ಎಂಬ ಹಾಸ್ಯ ನಾಟಕ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಗಣೇಶ್, ಸದಸ್ಯರಾದ ಬಿ.ಎನ್.ಶಂಕರಮ್ಮ, ಎನ್.ಕಲ್ಲೇಶಪ್ಪ, ರಾಮಾಂಜನೇಯ, ಹರೀಶ್, ಗಿರೀಶ್, ವಿಶ್ವಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂóಶುಪಾಲೆ ಹೆಚ್.ಆರ್.ಸುಧಾ, ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಯ್ಯ, ಯೋಗಶಿಕ್ಷಕ ಎಂ.ಬಿ.ಮುರಳಿ, ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ರಂಗಸೌರಭ ಕಲಾ ಸಂಘದ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕನ್ನಡಶಿಕ್ಷಕ ಜಿ.ಎನ್.ಶಿವಕುಮಾರ್ ಇದ್ದರು.

Advertisement
Tags :
Advertisement