For the best experience, open
https://m.suddione.com
on your mobile browser.
Advertisement

ಪ್ರತಿಯೊಬ್ಬರೂ ದೃಷ್ಠಿಯ ಬಗ್ಗೆ ಜಾಗೃತಿ ವಹಿಸಿ : ಡಾ. ಶಿಲ್ಪಾ

07:27 PM Oct 14, 2024 IST | suddionenews
ಪ್ರತಿಯೊಬ್ಬರೂ ದೃಷ್ಠಿಯ ಬಗ್ಗೆ ಜಾಗೃತಿ ವಹಿಸಿ   ಡಾ  ಶಿಲ್ಪಾ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 14 : ಜೀವನದಲ್ಲಿ ದೃಷ್ಠಿ ಬಹು ಮುಖ್ಯ. ಯಾವುದೇ ಒಂದು ವಸ್ತುವನ್ನು ಬಣ್ಣವನ್ನು ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ ದೃಷ್ಢಿ ಬೇಕೇಬೇಕು. ನಾವೆಲ್ಲರೂ ದೃಷ್ಠಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತೆವಹಿಸಬೇಕು ಎಂದು ಜಿಲ್ಲಾ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ.ಶಿಲ್ಪಾ ಐ.ಎಂ. ಹೇಳಿದರು.

ಜಿಲ್ಲಾ ಆಸ್ಪತ್ರೆಯ ಅಧೀನದ ಸರ್ಕಾರಿ ಬಿ.ಎಸ್.ಸಿ.ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ದೃಷ್ಠಿ ದಿನ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

Advertisement
Advertisement

ಹುಟ್ಟಿದ ಮಕ್ಕಳಲ್ಲಿ ಅನೇಕ ಕಾರಣಗಳಿಂದ ಹುಟ್ಟು ಕುರುಡು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಯಾವುದೇ ನ್ಯೂನತೆಗಳನ್ನು ಹುಟ್ಟಿದ ಹನ್ನೆರೆಡು ವರ್ಷಗಳಲ್ಲಿ ಬಹಳಷ್ಟು ತೊಂದರೆಗಳನ್ನು ಸೂಕ್ತ ಚಿಕಿತ್ಸೆ ನೀಡುವುದರ ಮುಖಾಂತರ ಸರಿಪಡಿಸಬಹುದಾಗಿದೆ. ಯಾವುದೇ ಮಗು ದೃಷ್ಟಿಗೆ ಸಂಬಂಧಿಸಿದ ತೊಂದರೆ ಇರುವುದು ಕಂಡುಬಂದಲ್ಲಿ ಹತ್ತಿರದ ತಜ್ಞ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರೆ ಗುಣವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಮೊಬೈಲ್ ವೀಕ್ಷಣೆ ಮಕ್ಕಳಿಗೆ ಅತಿಯಾದ ಅಭ್ಯಾಸ ಮಾಡಿಸುತ್ತಿದ್ದಾರೆ ಅದು ಕಡಿಮೆಯಾಗಬೇಕು. ಎಲ್ಲಾ ರೀತಿಯ ಹಣ್ಣು ತರಕಾರಿ ಸೇವಿಸಿದರೆ ಕಣ್ಣುಗಳಿಗೆ ಬೇಕಾಗುವ ವಿಟಮಿನ್" ಎ ಸಿಗುತ್ತದೆ ಎಂದು ತಿಳಿಸಿದರು.

ಕುರುಡುತನ ಮತ್ತು ದೃಷ್ಟಿ ಕಳೆದುಕೊಳ್ಳುವ ಕಾರಣಗಳು, ವಿವಿಧ ಕಣ್ಣಿನ ಕಾಯಿಲೆಗಳು ಮತ್ತು ಸಾರ್ವಜನಿಕರಲ್ಲಿ ಅವರ ಆರೈಕೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗತಿಕವಾಗಿ ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು #ನಿಮ್ಮ ಕಣ್ಣುಗಳನ್ನು ಪ್ರೀತಿಸಿ" ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ.

ಮತ್ತೊಬ್ಬ ನೇತ್ರತಜ್ಞರಾದ ಡಾ.ಪ್ರದೀಪ್ ಮಾತನಾಡಿ ದೃಷ್ಠಿ ಯನ್ನು ವಿಟಮಿನ್ " ಎ" ಅನ್ನಾಂಗ ಹೆಚ್ಚಾಗಿರುವ ಹಣ್ಣುಗಳು ತರಕಾರಿಗಳನ್ನು ಸೇವಿಸಿ ಕಣ್ಣಿನ ದೃಷ್ಠಿ ಚೆನ್ನಾಗಿಟ್ಟು ಕೊಳ್ಳಬಹುದು. ಆದ್ದರಿಂದ ಉತ್ತಮ ಆರೈಕೆ ಮಾಡಿ ಎಲ್ಲೆಂದರಲ್ಲಿ ಸಿಗುವ ಔಷಧಿಗಳನ್ನು ಬಳಸದೆ ನಿಗದಿತ ಔಷಧಿ ಅಂಗಡಿಗಳಲ್ಲಿ ಸಿಗುವ ಔಷಧಿಗಳನ್ನು ಉಪಯೋಗಿದುವುದರಿಂದ ಕಣ್ಣಿಗೆ ಅಡ್ಡಪರಿಣಾಮಗಳು ಉಂಟಾಗಿ ದೃಷ್ಠಿಗೆ ಸಮಸ್ಯೆ ಆಗಬಹುದು. ಆದ್ದರಿಂದ ಜಾಹೀರಾತು ನೀಡುವ ವಸ್ತುಗಳನ್ನು ಬಳಸಿ ದೃಷ್ಠಿ ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಸರ್ಕಾರಿ ನರ್ಸಿಂಗ್ ಕಾಲೆಜಿನ ಪ್ರಾಂಶುಪಾಲರಾದ ಅನುಸೂಯಮ್ಮ, ನಗರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸಮೂರ್ತಿ, ನೇತ್ರಾಧಿಕಾರಿ ಕೆ.ಸಿ.ರಾಮು, ಜಿಲ್ಲಾ ಮಾನಸಿಕ ರೋಗ ವಿಭಾಗದ ಕನ್ಸಲ್ಟೆಂಟ್ ಶ್ರೀಧರ್, ಜಿಲ್ಲಾ ಬ್ರೈನ್ ಹೆಲ್ತ್ ಕನ್ಸಲ್ಟೆಂಟ್ ಶರತ್ ಹಾಗೂ ನರ್ಸಿಂಗ್ ಕಾಲೇಜಿನ ಬೋಧಕ ವರ್ಗದವರು,  ಬಿ.ಎಸ್.ಸಿ.ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.

Advertisement
Tags :
Advertisement